June 13, 2026
kranthikidi.com
ತಾಜಾಸುದ್ದಿರಾಜ್ಯ

ದೇವೇಗೌಡ, ಹೆಚ್​​ಡಿಕೆ ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸುತ್ತೇವೆ – ಸುರೇಶ್ ಗೌಡ

ಮಂಡ್ಯ : ಸಚಿವ ಚಲುವರಾಯಸ್ವಾಮಿ ಅಧಿಕಾರ, ಹಣ, ಮದದಿಂದ ತಪ್ಪು ಮಾಡುತ್ತಿದ್ದಾರೆ. ಅವರು ಯಾರ ಸಾವನ್ನು ಬಯಸುತ್ತಿದ್ದಾರೆ? ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರು ಮತ್ತು ಹೆಚ್​​ಡಿ ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿಬಿಟ್ಟರೆ ಕತ್ತರಿಸುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್​​ನ ಮಾಜಿ ಶಾಸಕ ಸುರೇಶ್ ಗೌಡ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಡಿಕೆ ಶಿವಕುಮಾರ್​​ ಸಿಎಂ ಆಗುತ್ತಿರುವುದರಿಂದ ದೇವೇಗೌಡರ ಮನೆಯಲ್ಲಿ ಸೂತಕ ಎಂಬ‌ ಸಚಿವ ಚಲುವರಾಯಸ್ವಾಮಿ ಹೇಳಿಕೆ‌ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್​ ನಾಯಕರು ಕೆಂಡಾಮಂಡಲರಾಗಿದ್ದಾರೆ. ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದವರು ಮಾಜಿ ಶಾಸಕ ಸುರೇಶ್ ಗೌಡ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ಆಯ್ಕೆ ಮಾಡಿದ್ದಾರೆ. 5 ವರ್ಷ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕುಂಠಿತದ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಡಿಕೆ ಶಿವಕುಮಾರ್​ ಸಿಎಂ ಆಗಿದ್ದಾರೆ. ಕೆಲವು ಕಿಡಿಗೇಡಿಗಳು ಯಾರನ್ನೋ ಮೆಚ್ಚಿಸಲು ನಮ್ಮ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಬಂದಿದೆ ಅಂತ ಹೇಳುತ್ತಾರೆ. ಸಾವಿನ ಸಂದರ್ಭದಲ್ಲಿ ಮಾತ್ರ ಸೂತಕ ಬರುವುದು. ಚಲುವರಾಯಸ್ವಾಮಿ ಯಾರ ಸಾವನ್ನು ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಚಲುವರಾಯಸ್ವಾಮಿಗೆ ಯಾವ ರೀತಿ ಬುದ್ಧಿ ಹೇಳಬೇಕು. ದೇವೇಗೌಡರ ಇತಿಹಾಸ ನಿಮಗೆ ಏನು ಗೊತ್ತು. ಕನ್ನಡನಾಡಿನಲ್ಲಿ ಪ್ರಧಾನಿಯಾದ ಒಬ್ಬ ಕನ್ನಡಿಗ ಅಂದರೆ ದೇವೇಗೌಡರು. ಎಸ್ ಎಂ ಕೃಷ್ಣ ಅವರನ್ನು ಸಿಎಂ ಮಾಡಿದ್ದು ಯಾರು? ಇವಾಗ ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಆದರೆ ದೇವೇಗೌಡರಿಗೆ ಹೊಟ್ಟೆ ಉರಿನಾ? ಬಿಜೆಪಿ ಜೊತೆ ಎನ್​​ಡಿಎ ಸರ್ಕಾರ ಇದೆ. ಕಾಂಗ್ರೆಸ್ ಪಕ್ಷದಿಂದ ಯಾರೇ ಸಿಎಂ ಆದರೂ ನಮ್ಮ ವಿರೋಧವೆ. ವಿರೋಧ ಪಕ್ಷದ ಕೆಲಸ ವಿರೋಧ ಮಾಡುವುದೆ ಎಂದಿದ್ದಾರೆ.

ಅಧಿಕಾರ ಶಾಶ್ವತ ಅಲ್ಲ, ಚುನಾವಣೆ ಬುರುತ್ತೆ ಬುದ್ದಿ ಕಲಿಸುತ್ತಾರೆ. ದೇವೇಗೌಡರ ಬಗ್ಗೆ ಮಾತನಾಡಿ ಲೀಡರ್ ಆಗುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ. ನಿನ್ನ ಬಳಿ ಅಧಿಕಾರ ಇರಬಹುದು ಜನರ ಶಕ್ತಿ ನಮ್ಮ ಬಳಿ ಇದೆ. ಚಲುವರಾಯಸ್ವಾಮಿಗೆ ಯಾರ ಮನೆಯಲ್ಲಿ ಸಾಯುತ್ತಾರೆ ಎನ್ನುವುದು ಮುನ್ಸೂಚನೆ ಗೊತ್ತಾಗುತ್ತೆ. ಮಾಟ- ಮಂತ್ರ ಮಾಡಿಸುವುದರಲ್ಲಿ ಎತ್ತಿದ ಕೈ ಎಂದು ವಾಗ್ದಾಳಿ ಮಾಡಿದ್ದಾರೆ.

ಸುರೇಶ್ ಗೌಡ ಜೀವನದಲ್ಲಿ ಅಡ್ಜಸ್ಟ್ಮೆಂಟ್ ರಾಜಕೀಯ ಇಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಲೂಟಿ ಮಾಡುತ್ತಿದೆ. ದೇವೇಗೌಡರ ಮನೆಗೆ ಏನೋ ಮಾಡಿಸಿದ್ದಾರೆ, ನನಗೂ ಮಾಟ-ಮಂತ್ರ ಮಾಡಿಸಿದ್ದಾರೆ ಎಂಬುವುದು ನಾನು ನಂಬಲ್ಲ. ನಾವು ನಮ್ಮ ಶತ್ರುಗಳಿಗೂ ಕೆಟ್ಟದ್ದು ಬಯಸಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

Related posts

ಬೆಂಗಳೂರು ರಸ್ತೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ – ಸಿಎಂ ಡಿಕೆಶಿ

Kalpana Editor

ಸಿಎಂ ಡಿಕೆಶಿಗೆ ಆರಂಭದಲ್ಲೇ ಬಿಗ್ ಶಾಕ್! ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ದಿಢೀರ್ ರಾಜೀನಾಮೆ! ಮಾತು ಮುರಿದರಾ ಡಿಕೆಶಿ?

kknewskannada1987@gmail.com

ಸಂಪುಟಕ್ಕೆ ಸಿದ್ರಾಮಯ್ಯ ಪುತ್ರ ಎಂಟ್ರಿ – ಸಚಿವರಾಗಿ ಯತೀಂದ್ರ ಪ್ರಮಾಣ ಸ್ವೀಕಾರ..!

Kalpana Editor