August 2, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ಕರ್ನಾಟಕದಲ್ಲೇ ಜನನಾಯಗನ್‌ ಸಿನಿಮಾಗೆ ಸಂಕಷ್ಟ ಎದರು..!

ತಮಿಳು ನಾಡು ಸಿಎಂ ದಳಪತಿ ವಿಜಯ್ ಅವರ ಜನನಾಯಗನ್ ಸಿನಿಮಾಗೆ ಸಂಕಷ್ಟ ತಪ್ಪಿದ್ದಲ್ಲ ಅನಿಸುತ್ತಿದೆ. ವಿಜಯ್ ತಮಿಳು ನಾಡಿನ ಮುಖ್ಯಮಂತ್ರಿ ಆಗಿದ್ದರೂ ಚಿತ್ರಕ್ಕೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಬೇಗ ಸಿಗುವಂತಹ ಲಕ್ಷಣಗಳೂ ಇಲ್ಲ. ಈ ನಡುವೆ ಈಗಾಗಲೇ ಹಲವಾರು ವಿತರಕರು ಹಣ ಕೊಟ್ಟು ಹಕ್ಕುಗಳನ್ನು ಪಡೆದಿದ್ದಾರೆ. ಅವರು ಕೂಡ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಕರ್ನಾಟಕದಲ್ಲೇ ಚಿತ್ರಕ್ಕೆ ವಿಘ್ನ ಎದುರಾಗಲಿದೆ.

ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆ ಕೆವಿಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. 400 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಚಿತ್ರಕ್ಕಾಗಿ ಖರ್ಚು ಮಾಡಿದೆ. ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿದ್ದರಿಂದ ಮತ್ತು ಸಿಎಂ ಆಗಿ ಅಧಿಕಾರ ಚುಕ್ಕಾಣೆ ಹಿಡಿದಿದ್ದರಿಂದ ನಿರೀಕ್ಷೆ ದುಪ್ಪಾಟಗಿತ್ತು. ಆದರೆ, ವಿಜಯ್ ಕಾರಣದಿಂದಾಗಿ ಈ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗೋದು ಅನುಮಾನವಾಗಿದೆ.

ದಳಪತಿ ವಿಜಯ್ ಅವರಿಗೆ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಅನೇಕ ಅಭಿಮಾನಿಗಳು ನೆಲೆಯೂರಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಜನನಾಯಗನ್‌ಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಅಂತ ಅಂದಾಜಿಸಲಾಗಿತ್ತು. ಆದರೆ, ದಳಪತಿ ವಿಜಯ್ ಅವರು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವುದರಿಂದ, ಕನ್ನಡ ಪರ ಸಂಘಟನೆಗಳು ಜನ ನಾಯಗನ್ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಅಂತ ಹೇಳಿಕೆ ಕೊಟ್ಟವೆ. ಹಾಗಾಗಿ ಕರ್ನಾಟಕದಲ್ಲಿ ಚಿತ್ರಕ್ಕೆ ಸಂಕಷ್ಟ ಫಿಕ್ಸ್ ಎನ್ನುವಂತಾಗಿದೆ. ಇದನ್ನೂ ಓದಿ : ಒಂದು ಸಣ್ಣ ತಪ್ಪು 40 ದಿನ ಬೆಡ್‌ ರೆಸ್ಟ್‌ಗೆ ಜಾರಿದ ರಕುಲ್ ಪ್ರೀತ್ ಸಿಂಗ್‌

ಮೇಕೆದಾಟು ಯೋಜನೆ ಕುರಿತಂತೆ ಕೋರ್ಟ್ ನಲ್ಲಿ ಕನ್ನಡ ಪರವಾದ ತೀರ್ಪು ಬಂದಿದ್ದರೂ, ದಳಪತಿ ವಿಜಯ್ ಒಪ್ಪುತ್ತಿಲ್ಲ. ಈಗಾಗಲೇ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ. ಈ ಯೋಜನೆ ತಡೆಯುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Related posts

ಆತ್ಮಹತ್ಯೆಗೆ ಶರಣಾದ 17 ವರ್ಷದ ಮಹಿಳಾ ಕ್ರಿಕೆಟ್‌ ಆಟಗಾರ್ತಿ..

Kalpana Editor

ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ನೆ ಬಿಡಲ್ಲ – ನಟ ದೊಡ್ಡಣ್ಣ

Kalpana Editor

ಮಾಜಿ ಸಿಎಂ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ..!

Kalpana Editor