kranthikidi.com
ತಾಜಾಸುದ್ದಿರಾಜ್ಯ

ತುಂಗಭದ್ರಾ ಜಲಾಶಯಕ್ಕೆ ಜೀವಕಳೆ; ಕಲ್ಯಾಣ ಕರ್ನಾಟಕ ರೈತರಲ್ಲಿ ಹರ್ಷ

ಬಳ್ಳಾರಿ : ಕಲ್ಯಾಣ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಮುಂಗಾರು ಮಳೆಯ ಆರಂಭದಲ್ಲೇ ಹೊಸ ಕಳೆ ಬಂದಿದೆ. ತೀವ್ರ ಬೇಸಿಗೆಯಿಂದಾಗಿ ಒಣಗಿ ‘ಡೆಡ್ ಸ್ಟೋರೇಜ್’ ತಲುಪಿದ್ದ ಜಲಾಶಯಕ್ಕೆ ಈಗ ಜಲಾನಯನ ಪ್ರದೇಶಗಳಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.

ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 101 ಟಿಎಂಸಿ ಆಗಿದ್ದು ಸದ್ಯ ಜಲಾಶಯದಲ್ಲಿ 10 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆಯ ಅಬ್ಬರ ಹೀಗೆಯೇ ಮುಂದುವರಿದರೆ, ಈ ವರ್ಷ ನಿಗದಿತ ಅವಧಿಗಿಂತ ಮುನ್ನವೇ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ.

ಕಳೆದ ವರ್ಷ ತೀವ್ರ ಬರಗಾಲದಿಂದಾಗಿ ಜಲಾಶಯ ಭರ್ತಿಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಮುಂಗಾರು ಆರಂಭದಲ್ಲೇ ಜಲಾಶಯಕ್ಕೆ ಜಲಜೀವ ತುಂಬಿ ಬಂದಿರುವುದು ಕಲ್ಯಾಣ ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳು ಹಾಗೂ ಆಂಧ್ರ-ತೆಲಂಗಾಣದ ಗಡಿ ಭಾಗದ ರೈತರಲ್ಲಿ ಭಾರಿ ಸಂತಸ ಮೂಡಿಸಿದೆ. ಇದನ್ನೂ ಓದಿ : ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ; ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಸಿಐಡಿ ಶಾಕ್..!

ಮುಂಬರುವ ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಈ ನೀರು ವರದಾನವಾಗಲಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಲಾನಯನ ಪ್ರದೇಶಗಳಾದ ಮಲೆನಾಡು ಭಾಗದಲ್ಲಿ ಮಳೆ ಚುರುಕಾಗಿರುವುದರಿಂದ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗುತ್ತಿದೆ.

Related posts

ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ..!

Kalpana Editor

ನಮ್ಮ ಡ್ಯಾಂಗಳು ತಮಿಳುನಾಡಿಗೆ ನೀರು ಬಿಡುವ ಡ್ಯಾಂಗಳಾಗಿವೆ; ಹೆಚ್‌ಡಿಕೆ ಕಿಡಿ

Kalpana Editor

ಬಳ್ಳಾರಿ – ಗುಂತಕಲ್ ನಡುವಿನ ರೈಲು ಮಾರ್ಗಕ್ಕೆ ಸಂಪುಟ ಅನುಮೋದನೆ; ಅಶ್ವಿನಿ ವೈಷ್ಣವ್

Kalpana Editor