29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ..!

ಬೆಂಗಳೂರು : ಡಬಲ್ ಡೆಕ್ಕರ್‌ ಯೋಜನೆ ಸೇರ್ಪಡೆಯಿಂದ ಅನುಮೋದನೆಗಾಗಿ ಬಾಕಿ ಉಳಿದಿದ್ದ ನಮ್ಮ ಮೆಟ್ರೋ 3ನೇ ಹಂತ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾದ RITES Ltd ಸಿದ್ಧಪಡಿಸಿರುವ ಕರಡು ವರದಿಯಲ್ಲಿ, 44.65 ಕಿ.ಮೀ ಉದ್ದದ ಈ ಯೋಜನೆಯ ಆರ್ಥಿಕ ಆಂತರಿಕ ಆದಾಯ ಪ್ರಮಾಣ ಶೇ. 15.9ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಮೆಟ್ರೋ ಯೋಜನೆಗಳಿಗೆ ಅಗತ್ಯವೆಂದು ಪರಿಗಣಿಸಲಾದ ಶೇ.14ರ ಮಾನದಂಡಕ್ಕಿಂತ ಹೆಚ್ಚಾಗಿದೆ.

2024ರ ಸೆಪ್ಟೆಂಬರ್ 13ರಂದು ಕೇಂದ್ರ ಸರ್ಕಾರ ಮೂರನೇ ಹಂತದ ಯೋಜನೆಗೆ ಅನುಮೋದನೆ ನೀಡಿದಾಗ ಡಬಲ್ ಡೆಕ್ಕರ್‌ ವಯಾಡಕ್ಟ್‌ ಯೋಜನೆ ಇರಲಿಲ್ಲ. ನಂತರ ಭವಿಷ್ಯದಲ್ಲಿ ರಸ್ತೆ ವಿಸ್ತರಣೆ ಅಗತ್ಯ ತಪ್ಪಿಸಲು ರಾಜ್ಯ ಸರ್ಕಾರ ಹೆಚ್ಚುವರಿ 9,700 ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್‌ ವ್ಯವಸ್ಥೆಯನ್ನು ಸೇರಿಸಲು ನಿರ್ಧರಿಸಿತ್ತು. ಆದರೆ, ಮೆಟ್ರೋ ಮಾರ್ಗದ ಮೇಲೆಯೇ ಫ್ಲೈಓವರ್ ನಿರ್ಮಾಣವಾದರೆ ಪ್ರಯಾಣಿಕರು ಮೆಟ್ರೋ ಬಳಕೆ ಕಡಿಮೆ ಮಾಡಬಹುದು ಎಂಬ ಕಾರಣ ನೀಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಯೋಜನೆಯ ಸಾಮಾಜಿಕ-ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆ ಪ್ರಶ್ನೆ ಎತ್ತಿತ್ತು.

RITES ವರದಿ ಪ್ರಕಾರ, ಡಬಲ್ ಡೆಕ್ಕರ್‌ ಸೇರಿಸಿದ ಬಳಿಕ EIRR ಶೇ.15.9ಕ್ಕೆ ಇಳಿದಿದ್ದರೂ ಅದು ಇನ್ನೂ ಅನುಮೋದನೆಗೆ ಅಗತ್ಯವಾದ ಮಟ್ಟಕ್ಕಿಂತ ಹೆಚ್ಚಾಗಿದೆ. ಮೂಲ ಯೋಜನೆಯಲ್ಲಿ EIRR ಶೇ.17.04 ಇತ್ತು. ಸಚಿವಾಲಯದ ಆಕ್ಷೇಪಣೆಗಳು ತಾಂತ್ರಿಕವಾಗಿದ್ದು, RITES ವರದಿ ಅದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಅಂತಿಮ ವರದಿಯೂ ಇದೇ ರೀತಿಯಲ್ಲಿರಲಿದೆ. ಹೀಗಾಗಿ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಮೂರನೇ ಹಂತದ ಮಾರ್ಗ? – ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಹೊರವರ್ತುಲ ರಸ್ತೆಯ ಮೂಲಕ 32.5 ಕಿ.ಮೀ ಉದ್ದದ ಮಾರ್ಗ.., ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾಗಡಿ ರಸ್ತೆಯ ಮೂಲಕ 12.15 ಕಿ.ಮೀ ಉದ್ದದ ಮಾರ್ಗ.., ಇದನ್ನೂ ಓದಿ : ಇಂದಿನಿಂದ 23ನೇ ಆವೃತ್ತಿಯ FIFA ವಿಶ್ವಕಪ್ ಆರಂಭ..!

ನವದೆಹಲಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್​​ ಲಾಲ್​​ ಖಟ್ಟರ್​ ಅವರನ್ನು ಭೇಟಿ ಮಾಡಿರುವ ಸಿಎಂ ಡಿ.ಕೆ. ಶಿವಕುಮಾರ್​​, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಡಬಲ್ ಡೆಕ್ಕರ್‌ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು. ಇದರ ಜೊತೆಗೆ ಎರಡನೇ ಹಂತದ ಯೋಜನೆಯ ಪರಿಷ್ಕೃತ ವೆಚ್ಚ 40,425.02 ಕೋಟಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅದರ ಅನುಮೋದನೆಯನ್ನು ಶೀಘ್ರ ನೀಡುವಂತೆ ಆಗ್ರಹಿಸಿದ್ದಾರೆ.

Related posts

ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ; ಸಿಎಂ ಡಿಕೆಶಿ ಅವರಿಗೆ ಬಿಡದಿ ರೈತರ ಮನವಿ..!

kknewskannada1987@gmail.com

ಮಾರುವೇಷ ಧರಿಸಿ, ಬಸ್‌ಗಳಲ್ಲಿ ಸಚಿವ ಬೈರತಿ ಸುರೇಶ್‌ ಚೆಕ್ಕಿಂಗ್‌..!

Kalpana Editor

ಬೀದರ್ ಪೊಲೀಸರಿಂದ ಕೋಟಿ ಮೌಲ್ಯದ ಮಾದಕ ವಸ್ತು ನಾಶ..!

Kalpana Editor