15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಅಬ್ಬರದ ಆಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಐಪಿಎಲ್ನಲ್ಲಿ ಆರ್ಆರ್ ಪರ ಆಡಿದ ಅವರು, ದಾಖಲೆಯ ಮೇಲೆ ದಾಖಲೆ ಬರೆದಿದ್ದಾರೆ. ಬಾಲಿವುಡ್‌ನ ನಟ ಅಮಿತಾಭ್ ಬಚ್ಚನ್ ಅವರು ವೈಭವ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ವೈಭವ್ ಅವರ ಖುಷಿಯನ್ನು ಹೆಚ್ಚಿಸಿದೆ.
ಅಮಿತಾಭ್ ಬಚ್ಚನ್ ಅವರು ಬಾಲಿವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರಿಂದ ಆಶೀರ್ವಾದ ಸಿಕ್ಕರೆ ಸಾಕು ಎಂದು ಅನೇಕರು ಬಯಸುತ್ತಾ ಇರುತ್ತಾರೆ. ಈಗ ವೈಭವ್ಗೆ ಹೊಗಳಿಕೆ ಹಾಗೂ ಆಶೀರ್ವಾದ ಎರಡೂ ಒಂದರಲ್ಲೇ ಸಿಕ್ಕಿದೆ. ‘ನನಗೆ 15 ವರ್ಷವಿದ್ದಾಗ ಗೋಲಿ ಆಡಲು ಸಹ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಈ ಹುಡುಗ ಈ ವಯಸ್ಸಿಗೆ ಇಷ್ಟು ಅದ್ಭುತವಾಗಿ ಆಡುತ್ತಿದ್ದಾನೆ’ ಎಂದು ಬಿಗ್ ಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಮಿತಾಭ್ ಮಾತ್ರವಲ್ಲದೆ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್ ಕೂಡ ಇತ್ತೀಚೆಗೆ ಟ್ವಿಟರ್ ಖಾತೆಯಲ್ಲಿ ವೈಭವ್ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ್ದಾರೆ. ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ 15 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಈ ವರ್ಷದ ಅಂಕಿ-ಅಂಶ ಅಚ್ಚರಿ ತರಿಸುವಂತಿದೆ.
