26.4 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಲು ಎರಡು ಟ್ರ್ಯಾಕ್ಟರ್ ಹೂ ತಂದ ಶಾಸಕ ಸ್ವರೂಪ್‌ ಪ್ರಕಾಶ್

ಹಾಸನ : ಬೆಂಗಳೂರಿನಿಂದ ಹೊಳನರಸೀಪುರದತ್ತ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಪಾರ್ಥಿವ ಶರೀರ ಹೊಳೆನರಸೀಪುರಕ್ಕೆ ತಲುಪುವ ಮುನ್ನ ಹಾಸನದಲ್ಲಿ ಅಂತಿಮ ದರ್ಶನ ಪಡೆಯಲು ಶಾಸಕ ಹೆಚ್.ಪಿ ಸ್ವರೂಪ್‌ ಪ್ರಕಾಶ್ ಸೇರಿ ನೂರಾರು ಮಂದಿ ಕಾದು ಕುಳಿತಿದ್ದಾರೆ.

ಚೆನ್ಮಮ್ಮ ಅವರ ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಮಾಡಲು ಸ್ವರೂಪ್‌ ಪ್ರಕಾಶ್ ಅವರು ಎರಡು ಟ್ರ‍್ಯಾಕ್ಟರ್ ತುಂಬಾ ಹೂವು ತರಿಸಿದ್ದಾರೆ. ಹಾಸನ ನಗರಕ್ಕೆ ಚೆನ್ನಮ್ಮ ಅವರ ಮೃತದೇಹ ಆಗಮಿಸಿದ ವೇಳೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಹೆಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಜು.18ರ ಸಂಜೆ 4 ಗಂಟೆ 50 ನಿಮಿಷ ಸುಮಾರಿಗೆ ಹೃದಯಸ್ತಂಭನದಿಂದ ನಿಧನರಾಗಿದ್ದರು.

ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ದೇವೇಗೌಡರ ಹುಟ್ಟೂರಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಇದನ್ನೂ ಓದಿ : ಫಿಫಾ ವಿಶ್ವಕಪ್ ಫೈನಲ್ – ಪುಟ್ಬಾಲ್ ಅಭಿಮಾನಿಗಳು ತಾಳ್ಮೆಯಿಂದ ವರ್ತಿಸಲು ಸಿಎಂ ಮನವಿ

Related posts

ಗೃಹಲಕ್ಷ್ಮಿ ಯೋಜನೆ ಹಗರಣ ಆರೋಪ; ಸಿಬಿಐ ತನಿಖೆಗೆ ಸಿಟಿ ರವಿ ಪಟ್ಟು..!

Kalpana Editor

ಡಿಕೆಶಿ ಸಂಪುಟ ವಿಸ್ತರಣೆಗೆ ಮುಹೂರ್ತ – ಸೋಮವಾರ ಪ್ರಮಾಣವಚನ ಫಿಕ್ಸ್..!

Kalpana Editor

ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ; ಪ್ರತಿಪಕ್ಷ ನಾಯಕ ಆರ್‌.ಅಶೋಕ

Kalpana Editor