July 12, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಡಿಕೆಶಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾ?; ವಿಜಯೇಂದ್ರಗೆ ಬಿಜೆಪಿ ಮುಖಂಡ ದೇವರಾಜೇಗೌಡ ಪ್ರಶ್ನೆ..?

ಹಾಸನ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹಾಗೂ ವಿರುದ್ದವೇ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಆರ್‌ಎಸ್‌ಎಸ್ ಹೈಕಮಾಂಡ್. ಪರಿಷತ್ ಚುನಾವಣೆಗೆ ಕೂಡ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹಿರಿಯ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಇಂತಹ ವ್ಯಕ್ತಿ ಹಾಕಿದರೆ ಗೆಲ್ತಾರೆ ಅನ್ನೋ ತೀರ್ಮಾನವನ್ನು ರಾಜ್ಯ ಅಧ್ಯಕ್ಷರು ಮಾಡ್ತಾರೆ. ನಮ್ಮ ಪಕ್ಷದ ಚಿಹ್ನೆ ಮೇಲೆ ಗೆದ್ದ ಎಲ್ಲರಿಗೂ ಮಾತನಾಡಬೇಕು ಎಂದರು.

ಉಚ್ಚಾಟನೆ ಆದವರನ್ನು ಮಾತಾಡಿಸಬೇಕು. ವೈಮಮಸ್ಸು ಮರೆತು ಮಾತನಾಡೋದು ವಿಜಯೇಂದ್ರ ಹಾಗೂ ಆರ್‌.ಅಶೋಕ ಜವಾಬ್ದಾರಿ ಆಗಿತ್ತು ಎಂದಿದ್ದಾರೆ. ವಿಜಯೇಂದ್ರ ತಮ್ಮ ಜೊತೆ ಇರುವ ಯಾರೋ ಅವಿವೇಕಿ ಸಲಹೆ ಕೊಟ್ಟ ಎಂದು ನೀವು ಎಲ್ಲರ ಮತ ಕೇಳಿಲ್ಲ. ನಿಮಗೆ ಯಾವ ನೈತಿಕತೆ ಇದೆ. ರಾಜ್ಯಾದ್ಯಕ್ಷರಾಗಿ ನಮ್ಮ ಪಕ್ಷದಿಂದ ಗೆದ್ದ ಶಾಸಕರನ್ನ ಏಕೆ ಮಾತನಾಡಿಸಲಿಲ್ಲ? ನಮ್ಮ ಪಕ್ಷವನ್ನು ಸಂಪೂರ್ಣ ಮುಳಗಿಸಬೇಕು ಎಂದುಕೊಂಡಿದ್ದೀರಾ? ಡಿ.ಕೆ ಶಿವಕುಮಾರ್ ಅವರ ಜೊತೆ ಏನಾದ್ರು ಒಳ ಒಪ್ಪಂದ ಆಗಿದೆಯಾ? ಇಬ್ಬರೂ ಸೇರಿ ಹೊಸ ಪಕ್ಷ ಕಟ್ಟುವ ಚರ್ಚೆ ಏನಾದ್ರು ಮಾಡಿದ್ದೀರಾ? ಹಾದಿಲಿ ಬೀದಿಲಿ ಹೋಗೋರ್ಗೆ ಉತ್ತರ ಕೊಡಲ್ಲ‌ ಅಂದರೆ ನಿಮ್ಮನ್ನ ಬೀದಿಲಿ ತಂದು‌ ನಿಲ್ಲಿಸ್ತೀನಿ‌ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ವಾಲ್ಮಿಕಿ, ಮುಡಾ ಹಗರಣದಲ್ಲಿ ಸರಿಯಾಗಿ ಹೋರಾಟ ಮಾಡಲಿಲ್ಲ, ಮಾಡಿದ್ದರೆ ಈ ಸರ್ಕಾರ ಪತನ ಆಗೋದು. ನಮ್ಮ ಪಕ್ಷದ ಮೇಲೆ ವೈಮನಸ್ಸು ಇದ್ದರೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಕೊಡಿ. ವಿಜಯೇಂದ್ರ ಬಂದ ಮೇಲೆ ಎಷ್ಟೋ ಜನ ನಿಷ್ಟಾವಂತ ಕಾರ್ಯಕರ್ತರು ಮೂಲೆ‌ ಸೇರಿದ್ದಾರೆ. ವಿಪಕ್ಷ ನಾಯಕ ಅಶೋಕ್ ಯಾಕೆ ಶಾಸಕರನ್ನ ಹಿಡಿತಕ್ಕೆ ತಗೊಳ್ಳೋಕೆ ಆಗಲಿಲ್ಲ, ಅವರು ಕಾರ್ಯಕರ್ತರ ಕಷ್ಟ ಸುಖ‌ ಕೇಳಿದ್ದೀರಾ? ಹಾಸನದ ಇಬ್ಬರು ಶಾಸಕರ ಕ್ರಾಸ್‌ವೋಟ್‌ ಬಗ್ಗೆ ಚರ್ಚೆ ಆಗುತ್ತಿದೆ.

ಈ ಬಗ್ಗೆ ಸರಿಯಾಗಿ ವಿಚಾರಣೆ ಮಾಡಿದ್ರೆ ಕ್ರಮ ಆಗುತ್ತೆ. ಅಧಿಕಾರ ಇದ್ದವರ ಜೊತೆ ಕಮಿಟ್ಮೆಂಟ್‌ ಮಾಡಿಕೊಂಡು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದೀರಾ? ನಾನು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ವಿಜಯೇಂದ್ರ ಹಾಗೂ ಆರ್.ಅಶೋಕ್‌ರನ್ನ ವಿಚಾರಣೆ ಮಾಡಬೇಕು. ಸೋಲಿನ ನೈತಿಕ ಹೊಣೆಯನ್ನು ಅಶೋಕ್ ಹಾಗೂ ವಿಜಯೇಂದ್ರ ಹೊರಬೇಕು ಎಂದು ಒತ್ತಾಯಿಸಿದ್ದಾರೆ.

ಹಾಸನದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಹಿಂದೆ ಬೇರೆ ಯಾರೂ ಇಲ್ಲಾ, ಇರೋದೆ ಪ್ರೀತಂ ಗೌಡ. ಸರ್ಕಾರಿ ಗೋಮಾಳ ಬೇರೆಯವರ ಹೆಸರಿಗೆ ಬರೆಸಿಕೊಂಡಿರೋದು ಬೇರೆ ಯಾರು ಅದು ಪ್ರೀತಂ ಗೌಡ. ನಾನು ಓಪನ್ ಆಗೇ ಹೇಳ್ತೀನಿ. ಮುಂದೆ ಒಂದೊಂದೇ ದಾಖಲೆ ಬಿಡ್ತಿನಿ ಎಂದು ಗುಡುಗಿದ್ದಾರೆ. ಹಾಸನದ ಒಬ್ಬ ʻಮಹಾನ್ ನಾಯಕʼ ನಿಮ್ಮ ಜೊತೆ ಸೇರಿದ್ದಾನೆ. ಯಾವುದೊ ಕಜ್ಜಿ ನಾಯಿಗಳಿಂದ ನನ್ನ ವಿರುದ್ಧ ಮಾತಾಡಿಸುತ್ತಾನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : ಕದನ ವಿರಾಮದ ನಡುವೆ ಮತ್ತೆ ಲೆಬನಾನ್ ಮೇಲೆ ಇಸ್ರೇಲ್ ದಾಳಿ; 5 ಮಂದಿ ಸಾವು..!

Related posts

ಪುತ್ರ ಯತೀಂದ್ರ ಸಂಪುಟ ಸೇರ್ಪಡೆಗೆ ಕೊನೆಗೂ ಒಪ್ಪಿದ ಸಿದ್ದರಾಮಯ್ಯ

Kalpana Editor

ಕಾಡುಗೋಡಿ ಮಗು ಕೊಲೆ ಪ್ರಕರಣ; ಮೂವರು ಪೊಲೀಸರ ತಲೆದಂಡ..!

Kalpana Editor

ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ – ಎನ್‌ಟಿಎಗೆ ಸುಪ್ರೀಂಕೋರ್ಟ್ ತರಾಟೆ..!

Kalpana Editor