22.3 C
ಬೆಂಗಳೂರು
October 9, 2026
kranthikidi.com
ತಾಜಾಸುದ್ದಿದೇಶ

ಖ್ಯಾತ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಭೀಕರ ಹಲ್ಲೆ..!

ಪಾಟ್ನಾ : ಖ್ಯಾತ ಬಾಲಿವುಡ್ ನಟ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಪಂಕಜ್ ತ್ರಿಪಾಠಿ ಅವರ ಸಹೋದರ ವಿಜೇಂದ್ರನಾಥ್ ತಿವಾರಿ ಮೇಲೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಭಾನುವಾರ (ಜೂ.21) ಬಿಹಾರದ ಗೋಪಾಲಗಂಜ್ ಜಿಲ್ಲೆಯ ಬರೌಲಿ ಪಟ್ಟಣದ ಬೆಲ್ಸಂದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವಿಜೇಂದ್ರನಾಥ್ ಅವರನ್ನು ತಡರಾತ್ರಿ ಗೋಪಾಲಗಂಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾದ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಈ ಕುರಿತು ಗಾಯಾಳುವಿನ ಕುಟುಂಬಸ್ಥರು ಈವರೆಗೂ ಯಾವುದೇ ದೂರು ದಾಖಲಿಸಿಲ್ಲ. ಅಧಿಕೃತ ದೂರು ದಾಖಲಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೋಪಾಲಗಂಜ್ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ತಿವಾರಿ ತಿಳಿಸಿದ್ದಾರೆ. ಪೊಲೀಸರು ಜಮೀನು ವಿವಾದದ ಹಿನ್ನೆಲೆ ಹಲ್ಲೆಯಲ್ಲಿ ಭಾಗಿಯಾದ ಇತರ ಶಂಕಿತರ ಪತ್ತೆ ಹಚ್ಚುವಲ್ಲಿ ಕಾರ್ಯನಿರತರಾಗಿದ್ದಾರೆ. ಇದನ್ನೂಓದಿ : ಅಂಕೇಗೌಡರ ಸಂಗ್ರಹದ ಪುಸ್ತಕಗಳಿಗೆ ಸೂಕ್ತ ಜಾಗ, ಕಟ್ಟಡ ವ್ಯವಸ್ಥೆಗೆ ಸೂಚನೆ – ಸಿಎಂ ಡಿ.ಕೆ. ಶಿವಕುಮಾರ್

Related posts

ಬಿಡದಿ ಭೂಸ್ವಾಧೀನ ವಿರೋಧಿಸಿ, ರಾಹುಲ್ ಗಾಂಧಿಗೆ ನೂರಾರು ರೈತರಿಂದ ಪತ್ರ ಚಳುವಳಿ..!

Kalpana Editor

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂತೋಷ್‌ ಲಾಡ್‌ ಕಣ್ಣೀರು..!

Kalpana Editor

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ..!

Kalpana Editor