28.4 C
ಬೆಂಗಳೂರು
October 5, 2026
kranthikidi.com
ತಾಜಾಸುದ್ದಿರಾಜ್ಯ

ಬಿಡದಿ ಭೂಸ್ವಾಧೀನ ವಿರೋಧಿಸಿ, ರಾಹುಲ್ ಗಾಂಧಿಗೆ ನೂರಾರು ರೈತರಿಂದ ಪತ್ರ ಚಳುವಳಿ..!

ಬೆಂಗಳೂರು : ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ‘ಬಿಡದಿ ಸಮಗ್ರ ಟೌನ್‌ಶಿಪ್-AI ಸಿಟಿ’ ಯೋಜನೆಗಾಗಿ ನಡೆಯುತ್ತಿರುವ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ ಭಾಗದ ರೈತರು ಬೃಹತ್ ಪತ್ರ ಚಳುವಳಿ ಆರಂಭಿಸಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಕ್ಕೆ ಕೋರಿದ್ದರು ಹಾಗೂ ರೈತರಿಗೂ ಇದೇ ಹಾದಿ ತುಳಿಯಲು ಕರೆ ನೀಡಿದ್ದರು.

ಇದಕ್ಕೆ ಸ್ಪಂದಿಸಿರುವ ಬಿಡದಿ ಸೀಮೆಯ 100ಕ್ಕೂ ಹೆಚ್ಚು ರೈತರು ಇಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದು, ಭೂಸ್ವಾಧೀನ ಪ್ರಕ್ರಿಯೆಗೆ ತಕ್ಷಣವೇ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಪ್ರಮುಖ ಆರೋಪಗಳಿವೆ.

ಕಾಯ್ದೆ ಉಲ್ಲಂಘನೆ : 2013ರ ಭೂಸ್ವಾಧೀನ ಕಾಯ್ದೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ಯಾವುದೇ ಸಾರ್ವಜನಿಕ ಸಭೆ ನಡೆಸದೆ ಬಲವಂತವಾಗಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಬಡ ರೈತರಿಗೆ ಅನ್ಯಾಯ : ಇದರಿಂದ ಬಾಧಿತರಾಗುತ್ತಿರುವವರಲ್ಲಿ ಶೇ.82 ಕ್ಕೂ ಹೆಚ್ಚು ಮಂದಿ ಸಣ್ಣ ಹಿಡುವಳಿದಾರರು, ದಲಿತರು ಮತ್ತು ಹಿಂದುಳಿದ ವರ್ಗದವರಾಗಿದ್ದಾರೆ.

ರಿಯಲ್ ಎಸ್ಟೇಟ್ ದಂಧೆ : ಹಣಕಾಸು ಇಲಾಖೆಯ ತೀವ್ರ ವಿರೋಧದ ನಡುವೆಯೂ ಹುಡ್ಕೋ (HUDCO) ಮೂಲಕ ಭಾರಿ ಸಾಲ ಪಡೆದು, ರೈತರ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಲಾಭಕ್ಕಾಗಿ ಕಬಳಿಸಲು ಸರ್ಕಾರ ಮುಂದಾಗಿದೆ.

ರೈತರ ಈ ಪತ್ರ ಚಳುವಳಿಯ ಮೂಲಕ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಸರ್ಕಾರ ಕೂಡಲೇ ಅಧಿಸೂಚನೆ ಹಿಂಪಡೆಯದಿದ್ದರೆ ಜೂನ್ 21 ರಂದು ಹಳ್ಳಿಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ಮತ್ತು ರೈತ ಮುಖಂಡರು ಎಚ್ಚರಿಸಿದ್ದಾರೆ. ಇದನ್ನೂ ಓದಿ : ‘ದೊಡ್ಡಣ್ಣ ನಿಧನ’ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ; ದೂರು ದಾಖಲು

Related posts

ರಾಕೆಟ್‌ ವಿಕ್ರಮ್‌-1 ಉಡಾವಣೆ ಯಶಸ್ವಿ – ನಭಕ್ಕೆ ಜಿಗಿದ ಮೊದಲ ಖಾಸಗಿ ರಾಕೆಟ್‌

Kalpana Editor

ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ..!

Kalpana Editor

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಶಿಕ್ಷಣಾಧಿಕಾರಿ ನಿಧನ..!

kknewskannada1987@gmail.com