25.6 C
ಬೆಂಗಳೂರು
August 25, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಕೆಆರ್‌ಪುರಂ ತ್ರಿವಳಿ ಹತ್ಯೆ ಕೇಸ್; ಪುದುಚೇರಿಯಲ್ಲಿ ಹಂತಕಿ ಶ್ವೇತಾ ಅರೆಸ್ಟ್‌..!

ಬೆಂಗಳೂರು : ಕೆಆರ್ ಪುರಂ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತಂದೆ, ತಾಯಿ, ತಂಗಿಯನ್ನ ಕೊಲೆ ಮಾಡಿ ಆರೋಪಿ ಶ್ವೇತಾ ಪ್ರಿಯರಕನೊಂದಿಗೆ ತಲೆಮರಿಸಿಕೊಂಡಿದ್ದಳು. ಸದ್ಯ ಆರೋಪಿ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಕೆನತ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಕೊಲೆ ನಡೆದ ಮನೆ ಶೋಧದ ವೇಳೆ ಶ್ವೇತಾ ಡೈರಿ ಪತ್ತೆಯಾಗಿದೆ. ಹಲವು ದಿನಗಳಿಂದ ಶ್ವೇತಾ ಡೈರಿ ಬರೆಯುತ್ತಿದ್ದಳು. ಡೈರಿಯಲ್ಲಿ ಐ ಆ್ಯಮ್ ಸ್ಯಾಡ್, ಐ ಆ್ಯಮ್ ಲೋನ್ಲಿ, ಫೀಲಿಂಗ್ ಲವ್ಡ್, ಐ ಆ್ಯಮ್ ಡಿಪ್ರೆಸ್ಡ್, ಐ ಆ್ಯಮ್ ಸೂಪಿರಿಯರ್ ಹೀಗೆ ಹಲವಾರು ಬರಹಗಳು ಪತ್ತೆಯಾಗಿದೆ. ಸದ್ಯ ಪೊಲೀಸರು ಡೈರಿ ಸೇರಿದಂತೆ ಮನೆಯಲ್ಲಿ ಹಲವಾರು ಸಾಕ್ಷಿಗಳ ಕಲೆ ಹಾಕಿದ್ದಾರೆ. ಕಳೆದ ಎರಡು ದಿನಗಳಿಂದ ಒಂದು ಕಡೆ ನಿಲ್ಲದೇ ಆರೋಪಿ ಶ್ವೇತಾ ಹಾಗೂ ಪ್ರಿಯಕರ ಕೆನತ್ ಸಂಚಾರ ಮಾಡುತ್ತಿದ್ದರು. ಇವರಿಬ್ಬರ ಪತ್ತೆಗಾಗಿ ವೈಟ್ ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಶ್ವೇತಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಪ್ರಿಯಕರನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಶ್ವೇತಾ ಹಾಗೂ ಕೆನತ್ ನ್ಯೂಹಾರಿಜನ್ ಕಾಲೇಜ್‌ನಲ್ಲಿ ಬಿ.ಟೆಕ್ ಓದುವಾಗಲೇ ಇಬ್ಬರ ನಡುವೆ ಲವ್ ಆಗಿದೆ. ಬಿ.ಟೆಕ್ ಮುಗಿಸಿ ಇಬ್ಬರು ಕೆಲಸಕ್ಕೆ ಸೇರಿಕೊಂಡು ಲಿವ್ ಇನ್ ರಿಲೇಷನ್‌ನಲ್ಲಿದ್ದರು. ಕಾರಣಾಂತರಿಂದ ಇಬ್ಬರು ಕೆಲಸ ಬಿಟ್ಟಿರುತ್ತಾರೆ. ಸ್ವಂತ ಉದ್ಯಮ ಪ್ರಾರಂಭಿಸಲು ಪ್ಲಾನ್ ಮಾಡಿ ಪೋಷಕರ ಹೆಸರಿನಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 30 ಲಕ್ಷ ಹಣ ಸಾಲ ಪಡೆದಿರುತ್ತಾರೆ. 30 ಲಕ್ಷ ಸಾಲದ ಬಡ್ಡಿಯಾಗಲಿ ಏನು ಕೂಡ ಕಟ್ಟದ ಕಾರಣ ಪೋಷಕರಿಗೆ ನೋಟಿಸ್ ಹೋಗಿರುತ್ತದೆ. ಅಲ್ಲಿಯ ತನಕ ಆರೋಪಿಗಳು ಸಾಲ ತಗೆದುಕೊಂಡಿರುವ ವಿಚಾರ ಪೋಷಕರಿಗೆ ಗೋತ್ತಿರುವುದಿಲ್ಲ. ಯಾವಾಗ ಬ್ಯಾಂಕ್‌ನಿಂದ ನೋಟಿಸ್ ಬರುತ್ತೋ ಆಗ ವಿಷಯ ತಿಳಿದು ಪೋಷಕರು ಮನೆಗೆ ಹೋಗಿ ಪ್ರಶ್ನೆ ಮಾಡಿರುತ್ತಾರೆ.

ಆರೋಪಿಗಳು ಲೀವ್ ಇನ್ ರಿಲೇಷನ್‌ನಲ್ಲಿರುವ ವಿಚಾರ ಆರೋಪಿ ಕೆನತ್ ಪೋಷಕರಿಗೂ ತಿಳಿದಿರುವುದಿಲ್ಲ. ಕೆನತ್ ತಂದೆ ಹೆಚ್‌ಎಎಲ್ ನೌಕರರಾಗಿರುತ್ತಾರೆ. ಪೋಷಕರ ಸಹಕಾರ ಸಿಗದೆ ಇದ್ದ ಕಾರಣಕ್ಕೆ ಆರೋಪಿ ಕೆನತ್ ಅಸಮಾಧಾನಗೊಂಡಿದ್ದ. ಮಂಗಳವಾರ ಇದೇ ವಿಚಾರಕ್ಕೆ ಗಲಾಟೆ ಆಗಿ ಹತ್ಯೆ ಮಾಡಿರೋದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಮೂರು ಜನಕ್ಕೂ ಆರೋಪಿಗಳು 30 ಬಾರಿ ಚುಚ್ಚಿದ್ದಾರೆ. ಪೋಷಕರ ಕೊಲೆ ಮಾಡಿ ಕೊಲೆಗಾರ ಪ್ರಿಯಕರನೊಂದಿಗೆ ತಲೆಮರಿಸಿಕೊಂಡಿದ್ದ ಶ್ವೇತಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಕೆಆರ್‌ಪುರಂ ತ್ರಿವಳಿ ಹತ್ಯೆ ಕೇಸ್; ಪುದುಚೇರಿಯಲ್ಲಿ ಹಂತಕಿ ಶ್ವೇತಾ ಅರೆಸ್ಟ್‌..!

Related posts

ಹಿಡಕಲ್ ಜಲಾಶಯ ಭರ್ತಿ – ಇಂದು ನೀರು ಬಿಡುಗಡೆ ಸಾಧ್ಯತೆ..!

kknewskannada1987@gmail.com

ಮನೆಯಲ್ಲಿ ಜರ್ಮ್ಸ್‌ ಹೆಚ್ಚಾಗದಂತೆ ತಡೆಯುವುದು ಹೇಗೆ..? ಕೆಲವು ಸರಳ ಸಲಹೆಗಳು..!

kknewskannada1987@gmail.com

ಇಂದಿನಿಂದ ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌ – ಟೋಲ್ ದರ ಏರಿಕೆ..!

Kalpana Editor