July 13, 2026
kranthikidi.com
ತಾಜಾಸುದ್ದಿರಾಜ್ಯ

ಹೈಕೋರ್ಟ್​​ನಲ್ಲಿ ಡಿ ಬಾಸ್‌ – ಜೂನ್ 30ಕ್ಕೆ ಭವಿಷ್ಯ ನಿರ್ಧಾರ..!

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಕೊಲೆ ಕುರಿತು ಪ್ರಕರಣ ವಿಚಾರಣೆ ಹಂತದಲ್ಲಿದೆ. ನಟ ದರ್ಶನ್ ಹಾಗೂ ರೇಣುಕಾ ಸ್ವಾಮಿ ಕೊಲೆ ಕುರಿತಾದದ್ದು, ಎನ್ನಲಾಗುತ್ತಿರುವ ‘ಬಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿತ್ತು, ಆದರೆ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಿನಿಮಾದ ಬಿಡುಗಡೆ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಸಿನಿಮಾ ಬಿಡುಗಡೆಗೆ ತಾತ್ಕಾಲಿಕ ತಡೆ ತರುವಲ್ಲಿ ಯಶಸ್ವಿ ಆಗಿದ್ದರು.

ಮಾರ್ಚ್ 27ರಂದು ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ದೊರಕಿತ್ತು, ಆದರೆ ಮೇ 2 ರಂದು ನಡೆದ ವಿಚಾರಣೆಯಲ್ಲಿ ತಡೆಯನ್ನು ತೆರವು ಮಾಡಲಾಗಿತ್ತು. ಬಳಿಕ ವಿಜಯಲಕ್ಷ್ಮಿ ದರ್ಶನ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ನಿನ್ನೆ (ಜೂನ್ 25) ಹೈಕೋರ್ಟ್​​ನಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಲಾಗಿದೆ. ಅಲ್ಲದೆ, ನ್ಯಾಯಾಲಯದಲ್ಲಿ ‘ಬಾಸ್’ ಸಿನಿಮಾದ ನಿರ್ಮಾಪಕರ ಪರ ಹಾಜರಾಗಿದ್ದ ವಕೀಲರು, ‘ಬಾಸ್’ ಸಿನಿಮಾವನ್ನು ಜೂನ್ 30ರ ವರೆಗೆ ಬಿಡುಗಡೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ವಾಗ್ದಾನ ನೀಡಿದ್ದಾರೆ.

‘ಬಾಸ್’ ಹೆಸರಿನ ಸಿನಿಮಾ ನಿರ್ಮಾಣವಾಗಿದ್ದು, ಸಿನಿಮಾ, ರೇಣುಕಾ ಸ್ವಾಮಿ ಪ್ರಕರಣದ ಮೇಲೆ ಆಧರಿತವಾಗಿದೆ ಎಂಬ ಆರೋಪವಿದೆ. ಆದರೆ ಚಿತ್ರತಂಡ ಇದನ್ನು ನಿರಾಕರಿಸುತ್ತಲೇ ಬಂದಿದೆ. ನಮ್ಮ ಸಿನಿಮಾ ದರ್ಶನ್ ಕುರಿತಾದದ್ದು ಅಲ್ಲವೆಂದೇ ಹೇಳುತ್ತಿದೆ. ಇದೀಗ ನ್ಯಾಯಾಲಯದಲ್ಲಿಯೂ ಇದೇ ವಿಷಯದ ಮೇಲೆ ವಾದಗಳು ನಡೆಯುತ್ತಿವೆ. ಆದರೆ ದರ್ಶನ್ ಪರ ವಕೀಲರು, ‘ಸಿನಿಮಾದ ಟೀಸರ್, ಟ್ರೈಲರ್​ನಲ್ಲಿ ತೋರಿಸಲಾಗಿರುವ ಸಾಕಷ್ಟು ಅಂಶಗಳು ರೇಣುಕಾ ಸ್ವಾಮಿ ಪ್ರಕರಣದೊಟ್ಟಿಗೆ ಸಾಮ್ಯತೆ ಹೊಂದಿವೆ ಹಾಗೂ ಸಿನಿಮಾದ ಪ್ರಚಾರದ ಸಂದರ್ಭ ‘ನಿಜ ಘಟನೆಗಳ ಆಧಾರಿತ’ ಎಂದು ಸಹ ಹೇಳಲಾಗಿದೆ’ ಎಂದಿದ್ದಾರೆ.

‘ಬಾಸ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ತೋರಿಸುವ ಅಂಶಗಳು, ರೇಣುಕಾ ಸ್ವಾಮಿ ಕೊಲೆ ಪ್ರಕರಣದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿವೆ. ಮೋರಿಯಲ್ಲಿ ಶವ ದೊರೆಕಿದ್ದು, ‘ನನ್ನ ಪತ್ನಿ ಗರ್ಭಿಣಿ, ತಂದೆ-ತಾಯಿಗೆ ವಯಸ್ಸಾಗಿದೆ’ ಎಂಬ ಸಂಭಾಷಣೆ. ಲಾರಿಯ ಚಕ್ರದ ಬಳಿ ಹೊಡೆಯುವುದು, ಶವ ಮೋರಿಗೆ ಎಸೆಯುವುದು, ನಟನ ಬಂಧನ, ಅಭಿಮಾನಿಗಳ ಜೈಕಾರ ಇನ್ನೂ ಹಲವು ವಿಷಯಗಳಲ್ಲಿ ಸಾಮ್ಯತೆ ಇದೆ. ಆದರೆ ಚಿತ್ರತಂಡ, ಇದು ಕಾಕತಾಲೀಯ ಅಷ್ಟೆ, ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದ ಸಿನಿಮಾ ಇದಲ್ಲ ಎಂದಿದ್ದಾರೆ. ಇದನ್ನೂಓದಿ : ಬಂಡೀಪುರ & ನಾಗರಹೊಳೆ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ, ರಾಜ್ಯ ಸರ್ಕಾರ ನಿರ್ಧಾರ..!

Related posts

ಮಂತ್ರಾಲಯ ರಾಯರ ಮಠದ ಕಾಣಿಕೆ ಹುಂಡಿ ಎಣಿಕೆ; 21 ದಿನದಲ್ಲಿ ಕೋಟಿ ಹಣ ಸಂಗ್ರಹ..!

Kalpana Editor

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ರೆಬಲ್‌ ಸಂಸದರು; ನಾಳೆಯೇ ಶಿಂಧೆ ಬಣ ಸೇರುವ ಸಾಧ್ಯತೆ..!

Kalpana Editor

ಭಟ್ಕಳ ದುರಂತ; ಕಪ್ಪೆಚಿಪ್ಪು ಆರಿಸಲು ಹೋದವರ ಸಾವಿನ ಸಂಖ್ಯೆ 11ಕ್ಕೆ ಏರಿಕೆ..!

Kalpana Editor