August 26, 2026
kranthikidi.com
ಆರೋಗ್ಯತಾಜಾಸುದ್ದಿ

ಡ್ರೈ ಫ್ರೂಟ್ಸ್ ಸರಿಯಾದ ವಿಧಾನದಲ್ಲಿ ತಿನ್ನದಿದ್ದರೆ, ಅಪಾಯವೇ ಹೆಚ್ಚು..!

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇವುಗಳನ್ನು ಆರೋಗ್ಯಕರ ಆಹಾರಗಳೆಂದು ಪರಿಗಣಿಸಲಾಗುತ್ತದೆ. ಬಾದಾಮಿ, ಗೋಡಂಬಿ, ಅಖರೋಟ್, ಖರ್ಜೂರ ಮೊದಲಾದವುಗಳಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸದಿದ್ದರೆ, ದೇಹದ ಉಷ್ಣತೆ ಹೆಚ್ಚಾಗಿ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗದರೆ ಡ್ರೈ ಫ್ರೂಟ್ಸ್ ತಿನ್ನುವುದಕ್ಕೆ ಸರಿಯಾದ ವಿಧಾನ ಯಾವುದು, ಹೆಚ್ಚು ಉಷ್ಣ ಗುಣ ಹೊಂದಿರುವ ಡ್ರೈ ಫ್ರೂಟ್ಸ್ ಯಾವುದು ಎಂಬುದನ್ನು ತಿಳಿದುಕೊಳ್ಳಿ.

ಡ್ರೈ ಫ್ರೂಟ್ಸ್ ಹೇಗೆ ತಿನ್ನಬೇಕು? – ಆಯುರ್ವೇದದ ಪ್ರಕಾರ, ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ಅನ್ನು ನೇರವಾಗಿ ತಿನ್ನುವುದಕ್ಕಿಂತ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸುವುದು ಉತ್ತಮ. ಇದರಿಂದ ಫೈಟಿಕ್ ಆಮ್ಲ ಕಡಿಮೆಯಾಗುತ್ತದೆ, ಪೋಷಕಾಂಶಗಳು ಸುಲಭವಾಗಿ ಹೀರಲ್ಪಡುತ್ತವೆ ಮತ್ತು ದೇಹದ ಉಷ್ಣತೆ ಹೆಚ್ಚುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ದಿನಕ್ಕೆ 20–30 ಗ್ರಾಂ ಮೀರದಂತೆ ಸೇವಿಸುವುದು ಸೂಕ್ತ. ಅದರಲ್ಲಿಯೂ ಬಿಸಿಲು ಹೆಚ್ಚಿದ್ದಾಗ ನೇರವಾಗಿ ತಿನ್ನುವುದು ಒಳ್ಳೆಯದಲ್ಲ.

ಹೆಚ್ಚು ಉಷ್ಣ ಗುಣ ಹೊಂದಿರುವ ಡ್ರೈ ಫ್ರೂಟ್ಸ್ – ಒಣ ಖರ್ಜೂರ, ಅಖರೋಟ್, ನೆನೆಸದ ಬಾದಾಮಿ ಹಾಗೂ ಪಿಸ್ತಾ ದೇಹದಲ್ಲಿ ಉಷ್ಣತೆ ಹೆಚ್ಚಿಸಬಹುದು. ಬೇಸಿಗೆಯಲ್ಲಿ ಇವುಗಳನ್ನು ಮಿತವಾಗಿ ಹಾಗೂ ಸಾಧ್ಯವಾದರೆ ನೆನೆಸಿ ಸೇವಿಸುವುದು ಒಳಿತು. ಅತಿಯಾಗಿ ತಿಂದರೆ ಹೊಟ್ಟೆ ಉರಿ, ಮೊಡವೆ ಅಥವಾ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ನೆನೆಸಿದ ಬಾದಾಮಿ, ಒಣದ್ರಾಕ್ಷಿ, ನೆನೆಸಿದ ಗೋಡಂಬಿ ಹಾಗೂ ಖರ್ಜೂರವನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು. ವಿಶೇಷವಾಗಿ ಮಖಾನಾ (ಫಾಕ್ಸ್ ನಟ್ಸ್) ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ಉತ್ತಮ ಸ್ನ್ಯಾಕ್ ಆಗಿರುತ್ತದೆ. ಡ್ರೈ ಫ್ರೂಟ್ಸ್ ತಿನ್ನುವುದನ್ನು ಸಂಪೂರ್ಣವಾಗಿ ಬಿಡುವ ಅಗತ್ಯವಿಲ್ಲ.

ಆದರೆ ಋತುವಿಗೆ ಅನುಗುಣವಾಗಿ ಸರಿಯಾದ ವಿಧಾನದಲ್ಲಿ ಮತ್ತು ಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಅವುಗಳ ಆರೋಗ್ಯ ಪ್ರಯೋಜನಗಳನ್ನು ಸುರಕ್ಷಿತವಾಗಿ ಪಡೆಯಬಹುದು. ಮಧುಮೇಹ, ಅತಿಯಾದ ತೂಕ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ತಮ್ಮ ವೈದ್ಯರು ಅಥವಾ ಪೌಷ್ಟಿಕ ಸಲಹೆಯಂತೆ ಸೇವಿಸುವುದು ಉತ್ತಮವಾಗಿದೆ. ಇದನ್ನೂ ಓದಿ : RSS ಬಗ್ಗೆ ಮತ್ತೆ ಪ್ರಿಯಾಂಕ್ ಖರ್ಗೆ​​ ಕಿಡಿ; ನಾನೇ ಶುಲ್ಕ ಕಟ್ಟುತ್ತೇನೆ..!

Related posts

ನಟಿ ಸಮಂತಾ ಪ್ರೆಗ್ನೆನ್ಸಿ ಗ್ಲೋ ನೋಡಿ ನೆಟ್ಟಿಗರು ಫಿದಾ..!

kknewskannada1987@gmail.com

ರಷ್ಯಾದ ತೈಲ ಖರೀದಿಸುವ ದೇಶಗಳಿಗೆ ದಂಡ ವಿಧಿಸುವ ಮಸೂದೆ; ಯುಎಸ್‌ ಸೆನೆಟ್ ಅಂಗೀಕಾರ..!

kknewskannada1987@gmail.com

ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು..!

kknewskannada1987@gmail.com