November 22, 2026
kranthikidi.com
ತಾಜಾಸುದ್ದಿಸಿನಿಮಾ

ಡೈರೆಕ್ಟರ್‌ ಬರ್ತ್‌ಡೇ ದಿನವೇ ‘ಟಾಕ್ಸಿಕ್ ಮೇಕಿಂಗ್’ ವಿಡಿಯೋ ರಿಲೀಸ್..!

‘ಟಾಕ್ಸಿಕ್’ ಚಿತ್ರದ ಆಕರ್ಷಕ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಜೂನ್ 8 ರಂದು (ಇಂದು) ನಿರ್ದೇಶಕಿ ಗೀತು ಮೋಹನ್‌ದಾಸ್ ಹುಟ್ಟುಹಬ್ಬದ ಹಿನ್ನೆಲೆ 1 ನಿಮಿಷ 2 ಸೆಕೆಂಡ್‌ಗಳ ಮೇಕಿಂಗ್ ಟೀಸರ್ ರಿಲೀಸ್ ಆಗಿದೆ.

ಮಲಯಾಳಂ ನಿರ್ದೇಶಕಿ ಆಗಿರುವ ಗೀತು ಮೋಹನ್‌ದಾಸ್ ಮೊದಲ ಬಾರಿ ಪ್ಯಾನ್ ವರ್ಲ್ಡ್ ಚಿತ್ರ ಮಾಡಿದ್ದು, ತೆರೆಯ ಹಿಂದಿನ ಸರ್ಕಸ್‌ಗಳನ್ನ ಈ ಟೀಸರ್‌ನಲ್ಲಿ ನೋಡಬಹುದಾಗಿದೆ. ಬಿಗ್ ಬಜೆಟ್ ಚಿತ್ರಗಳೆಂದರೆ ಕೇವಲ ಪುರುಷ ನಿರ್ದೇಶಕರಷ್ಟೇ ಮಾಡಬೇಕು ಎಂಬಂತಿದ್ದ ಸಿದ್ಧಸೂತ್ರವನ್ನ ಯಶ್‌ ಬ್ರೇಕ್‌ ಮಾಡಿದ್ದಾರೆ.

ಕೆಜಿಎಫ್-2 ಬಳಿಕ ಸಾಲು ಸಾಲು ನಿರ್ದೇಶಕರು ಚಿತ್ರ ಮಾಡಲು ಮುಂದಾಗಿದ್ದರೂ ಗೀತು ಮೋಹನ್‌ದಾಸ್ ಅವರಿಗೆ ಅವಕಾಶ ಕೊಟ್ಟಿದ್ದರು. ತೆರೆಯ ಮುಂದಿನ ಗೀತು ಆರ್ಭಟವನ್ನ ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ನೋಡಿದ್ದಾಗಿದೆ. ಇದೀಗ ಬ್ಯಾಕ್‌ ಕ್ಯಾಮೆರಾದಲ್ಲಿ ಚಿತ್ರ ಉತ್ತಮವಾಗಿ ಮೂಡಿಬರಲು ಗೀತು ಮಾಡಿರುವ ಸಾಹಸವನ್ನು ಮೇಕಿಂಗ್‌ನಲ್ಲಿ ತೋರಿಸಲಾಗಿದೆ. ಇದನ್ನೂ ಓದಿ : ಹಠಾತ್ ಬಿರುಗಾಳಿ ಸಹಿತ ಮಳೆ; ಏರ್‌ಪೋರ್ಟ್‌ನಲ್ಲಿ ಏರ್‌ಇಂಡಿಯಾ ವಿಮಾನಗಳು ಜಖಂ

‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಪದೇ ಪದೇ ಮುಂದಕ್ಕೆ ಹೋಗ್ತಿರೋ ಪರಿಣಾಮ ಚಿತ್ರದ ಮುಕ್ಕಾಲು ಭಾಗ ರೀ ಶೂಟ್ ಮಾಡಲಾಗುತ್ತೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಗೀತು ಹುಟ್ಟುಹಬ್ಬಕ್ಕೆ ಮೇಕಿಂಗ್ ರಿಲೀಸ್ ಆಗುವುದೇ ಡೌಟ್ ಎನ್ನಲಾಗಿತ್ತು. ಆದರೆ ಎಲ್ಲಾ ವದಂತಿಗೆ ಬ್ರೇಕ್ ಹಾಕುವಂತೆ ಇದೀಗ ಮೇಕಿಂಗ್ ರಿಲೀಸ್ ಆಗಿದೆ. ಅಂದಹಾಗೆ ಟಾಕ್ಸಿಕ್ ಚಿತ್ರ ಇದೇ ವರ್ಷ ತೆರೆ ಕಾಣುವ ಸಂಭವಿದೆ.

Related posts

ಅಪ್ರಾಪ್ತ ಆರೋಪಿಗಳ ಮೇಲೆ ಅಮಾನವೀಯ ಕೃತ್ಯ ಆರೋಪ – PSI ಬಂಧನ..!

Kalpana Editor

ಬಾಲಕನ ಮೇಲೆ ಬೀದಿನಾಯಿಗಳ ದಾಳಿ; ಕುತ್ತಿಗೆ, ಕೈಗೆ ಗಾಯ…!

Kalpana Editor

ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾ ಶ್ರೀಶೈಲನ್ ಇನ್ನಿಲ್ಲ..!

Kalpana Editor