21.1 C
ಬೆಂಗಳೂರು
October 13, 2026
kranthikidi.com
ತಾಜಾಸುದ್ದಿರಾಜ್ಯ

ಮತ್ತೆ ಬಾಂಬ್‌ ಬೆದರಿಕೆ – ಧಾರವಾಡ ಹೈಕೋರ್ಟ್‌ ಪೀಠಕ್ಕೆ ಭಾರೀ ಭದ್ರತೆ..!

ಧಾರವಾಡ : ಮತ್ತೆ ಬಾಂಬ್ ಬೆದರಿಕೆ ಬರುತ್ತಿರುವ ಹಿನ್ನೆಲೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಸುಮಾರು 40 ಸಿಬ್ಬಂದಿಯನ್ನು ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಎರಡು ಬಾರಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು.

ಈ ಹಿನ್ನೆಲೆ ಗೃಹ ಇಲಾಖೆಗೆ ಹೈಕೋರ್ಟ್ ಪೀಠದ ವಕೀಲರ ಸಂಘದ ಅಧ್ಯಕ್ಷರು ಪತ್ರ ಬರೆದಿದ್ದರು. ಇದರಿಂದಾಗಿ ಡಾಗ್ ಸ್ಕ್ವಾಡ್, ಸರ್ಚ್ ಟೀಮ್, ವಾಹನ ತಪಾಸಣೆ, ಬಾಂಬ್ ಸ್ಕ್ವಾಡ್ ಸಿಬ್ಬಂದಿಯನ್ನು ಹೆಚ್ಚಳ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಕೋರ್ಟ್‌ ಒಳಗೆ ಬಿಡುತ್ತಿದ್ದಾರೆ.

ಅಲ್ಲದೇ ಕಕ್ಷಿದಾರರನ್ನೂ ಸಹ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜನವರಿಯಿಂದ ಇಲ್ಲಿಯವರೆಗೆ ಹೈಕೋರ್ಟ್‌ ಪೀಠಕ್ಕೆ ಎರಡು ಬಾರಿ ಮತ್ತು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಎರಡು ಬಾರಿ ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿತ್ತು. ಇದನ್ನೂ ಓದಿ : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭೇಟಿ..!

Related posts

ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ಆರಂಭಿಸುತ್ತೇವೆ – ಸಿಎಂ ಡಿಕೆಶಿ

Kalpana Editor

ಪ್ರವಾಸಿಗರಿಗೆ ಎಚ್ಚರಿಕೆ; ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹುಲಿ ಓಡಾಟ..!

Kalpana Editor

ದರ್ಶನ್‌ ಪುತ್ರನ ಕಾರು ಅಪಘಾತ; ವಿನೀಶ್‌ ವಾಹನ ಚಲಾಯಿಸಿಲ್ಲ – ವಿಜಯಲಕ್ಷ್ಮಿ

Kalpana Editor