24.1 C
ಬೆಂಗಳೂರು
October 11, 2026
kranthikidi.com
ತಾಜಾಸುದ್ದಿರಾಜ್ಯ

ರಾಮ ಮಂದಿರ ದೇಣಿಗೆ ಅಕ್ರಮ; ಸಿಎಂ ಯೋಗಿ ಯಾರನ್ನೂ ಬಿಡಲ್ಲ – ಸಿ.ಟಿ.ರವಿ

ಬೆಂಗಳೂರು : ರಾಮ ಮಂದಿರ ದೇಣಿಗೆ ಅಕ್ರಮ ವಿಚಾರ ಮನಸಿಗೆ ಘಾಸಿ ಉಂಟು ಮಾಡಿದೆ. ಯೋಗಿ ಯಾರ ತಪ್ಪನ್ನೂ ಸಹಿಸಲ್ಲ ಎಂದು ಬಿಜೆಪಿ ನಾಯಕ ಸಿ.ಟಿ ರವಿ ತಿಳಿಸಿದ್ದಾರೆ.

ರಾಮ ಮಂದಿರ ದೇಣಿಗೆ ಅಕ್ರಮ ವಿಚಾರ ಮತ್ತು ಬಿಜೆಪಿ – ಆರ್‌ಎಸ್‌ಎಸ್‌ಗೆ ಡೊನೇಷನ್ ಫಸ್ಟ್ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಮಂದಿರ ನಿರ್ಮಾಣ ಕಾರ್ಯ 500 ವರ್ಷಗಳ ಶ್ರಮವಾಗಿದೆ. ಇದಕ್ಕಾಗಿ ಲಕ್ಷಾಂತರ ಜನ ಪ್ರಾಣ ಕೊಟ್ಟಿದ್ದಾರೆ. 1 ರೂ.ನಿಂದ ಕೋಟಿ ರೂಪಾಯಿ ಡೊನೇಷನ್ ಕೊಟ್ಟಿದ್ದಾರೆ. ಆ ಭಾವನೆಗೆ ಬೆಲೆ ಕಟ್ಟಲು ಆಗಲ್ಲ. ಆ ಭಾವನೆಗೆ ಘಾಸಿ ಆಗಬಾರದು. ಈ ಸುದ್ದಿ ನಮ್ಮ ಮನಸಿಗೆ ಘಾಸಿ ಮಾಡಿದೆ ಎಂದರು.

ರಾಮ ಮಂದಿರ ವಿರೋಧಿಗಳಿಗೆ ಈಗ ಯಾಕೆ ಸಂಕಟ ಆಗುತ್ತಿದೆ. ಅವರ ಉದ್ದೇಶ ರಾಮ ಮಂದಿರದ ದೇಣಿಗೆ ಕುರಿತು ಅಲ್ಲ. ರಾಮನ ಅಸ್ತಿತ್ವ ಪ್ರಶ್ನೆ ಮಾಡಿದವರು ಇವರು. ರಾಜಕೀಯಕ್ಕೆ ಇದನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಿಸ್ಟರ್ ಪ್ರಿಯಾಂಕ್ ಖರ್ಗೆ ಅವರೇ ಈ ಟ್ರಸ್ಟ್‌ನಲ್ಲಿ ಬಿಜೆಪಿಯ ಯಾವ ಪದಾಧಿಕಾರಿಗಳೂ ಇರಲಿಲ್ಲ. ರಾಮ ಮಂದಿರಕ್ಕಾಗಿ ನಾವು ಕರ ಸೇವೆಗೆ ಹೋಗಿದ್ವಿ, ಜೈಲಿಗೆ ಹೋಗಿದ್ವಿ. ನೀವು ರಾಮಮಂದಿರ ಆಗಲಿ ಅಂತ ಹೇಳೋಕಾಗದೇ ಹೇಡಿಗಳು ಆಗಿದ್ರಿ ಎಂದು ಕಿಡಿಕಾರಿದರು.

ಚಿಂತೆ ಮಾಡಬೇಡಿ ಅಲ್ಲಿ ಯೋಗಿ ಇದ್ದಾರೆ. ಯೋಗಿ ಯಾರ ತಪ್ಪನ್ನೂ ಸಹಿಸಲ್ಲ. ಹಾಗಾಗಿ 8 ಜನರನ್ನು ಜೈಲಿಗೆ ಹಾಕಿದ್ದಾರೆ. ನಿಮ್ಮ ಬಳಿ ಬೇರೆ ಮಾಹಿತಿ ಇದ್ದರೆ ಎಸ್‌ಐಟಿಗೆ ಕೊಡಲಿ ಅಂತ ತಿರುಗೇಟು ಕೊಟ್ಟರು. ಕಾಂಗ್ರೆಸ್ ಅವರಿಗೆ ರಾಮನ ಬಗ್ಗೆ ಪ್ರೀತಿ ಇಲ್ಲ. ರಾಮ ಮಂದಿರ ನಿರ್ಮಾಣಕ್ಕೆ ನೀವು ಅಡತಡೆ ನಿವಾರಿಸಿಲ್ಲ, ವಿರೋಧಿಸಿದ್ರಿ. ಈಗ ಯಾಕೆ ಮಾತನಾಡುತ್ತೀರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ : ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್​​ ಈಶ್ವರ್​​ ಕಣ್ಣೀರು..!

Related posts

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ: ಈಶ್ವರ ಖಂಡ್ರೆ

Kalpana Editor

ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ – ಚಾಕು ಇರಿದು ಯುವಕನ ಹತ್ಯೆ..!

kknewskannada1987@gmail.com

ಇಂದು ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ – ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ..!

Kalpana Editor