25.3 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಇಂದು ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ – ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ..!

ಹಾಸನ : ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ ನೆರವೇರಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ತಿಥಿ ಕಾರ್ಯ ನಡೆಯಲಿದೆ. ಕುಟುಂಬಸ್ಥರು 11ನೇ ದಿನದ ಕಾರ್ಯಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

ಇಂದು ಒಕ್ಕಲಿಗ ಸಂಪ್ರದಾಯದ ಮುಳ್ಳುಗೌಡ ಪರಂಪರೆಯಂತೆ ಉತ್ತರ ಕ್ರಿಯಾದಿ ಕಾರ್ಯ ನಡೆಯಲಿದ್ದು, ಇಂದು ಬೆಳಿಗ್ಗೆ 10-30 ಕ್ಕ ಕುಟುಂಬ ಸದಸ್ಯರಿಂದ ಪೂಜೆ ನೆರವೇರಲಿದೆ. ಬಳಿಕ ಬರುವ ಅಭಿಮಾನಿಗಳು, ಬಂಧುಗಳಿಗೆ ಊಟದ ವ್ಯವಸ್ಥೆ ಇರಲಿದೆ. ಸಂಪೂರ್ಣ ಸಸ್ಯಹಾರಿ ಊಟದ ವ್ಯವಸ್ಥೆ ಮಾಡಿ, ಕಾರ್ಯಕ್ಕೆ ಸಿದ್ದತೆ ಮಾಡಲಾಗಿದೆ. ಹೋಳಿಗೆ, ಲಡ್ಡು, ಮೈಸೂರು ಪಾಕ್‌ ಸೇರಿ ಆರು ಬಗೆಯ ಸಿಹಿ ತಿಂಡಿ ಇರಲಿದೆ. ಸುಮಾರು 2 ಸಾವಿರ ಬಾಣಸಿಗರಿಂದ ಭೋಜನ ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಕಾರ್ಯದ ವೇಳೆ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಏಕಕಾಲಕ್ಕೆ 22 ಸಾವಿರ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ತಲಾ 1,800 ಜನರು ಏಕ ಕಾಲದಲ್ಲಿ ಊಟ ಮಾಡಲು 16 ಕೌಂಟರ್ ನಿರ್ಮಾಣ ಮಾಡಲಾಗಿದೆ. ಮಹಿಳೆಯರಿಗೆ 3 ವಿಐಪಿ, ವಿವಿಐಪಿಗಳಿಗೆ 2 ಸೇರಿ 16 ಕೌಂಟರ್ ನಿರ್ಮಾಣ ಮಾಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಇದನ್ನೂ ಓದಿ : ನಗದು, ಚಿನ್ನ ಪತ್ತೆ – ನಿವೃತ್ತ ಬಸ್‌ ಡ್ರೈವರ್‌ ಮನೆಯಲ್ಲಿ ಭಾರೀ ಸಂಪತ್ತು ಕಂಡು ಬೆಚ್ಚಿದ ಪೊಲೀಸ್ರು

Related posts

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ; ಸಿಟಿ ರವಿ ನೇತೃತ್ವದ ಸಮಿತಿಯಿಂದ ಬಿವೈವಿಗೆ ವರದಿ ಸಲ್ಲಿಕೆ..!

Kalpana Editor

“ಡಿಕೆಶಿಗೆ ಹನಿಮೂನ್ ಪಿರಿಯಡ್ ಇಲ್ಲ, ಸಿದ್ದರಾಮಯ್ಯ ಗೂಗ್ಲಿ ಹಾಕಿ ಹೋಗಿದ್ದಾರೆ!” – ಬಿ.ವೈ. ವಿಜಯೇಂದ್ರ ಭವಿಷ್ಯ!

kknewskannada1987@gmail.com

ಮಾದಪ್ಪನ ಹುಂಡಿಯಲ್ಲಿ ಮತ್ತೆ ಕೋಟಿ ಕೋಟಿ ಹಣ ಸಂಗ್ರಹ..!

Kalpana Editor