August 27, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಅಪ್ರಾಪ್ತ ಆರೋಪಿಗಳ ಮೇಲೆ ಅಮಾನವೀಯ ಕೃತ್ಯ ಆರೋಪ – PSI ಬಂಧನ..!

ಬೆಂಗಳೂರು : ಬೆಂಗಳೂರು ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ ಅಪ್ರಾಪ್ತ ಆರೋಪಿಗಳ ಮೇಲೆ ಅಮಾನವೀಯ ಹಾಗೂ ಅಸಭ್ಯ ವರ್ತನೆ ನಡೆಸಿದ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಾದ ಬಳಿಕ ಅವರನ್ನು ಬಂಧಿಸಲಾಗಿದೆ. ಬಂಧಿತ ಪಿಎಸ್‌ಐಯನ್ನು ಪ್ರವೀಣ್ ಎಂದು ಗುರುತಿಸಲಾಗಿದೆ. ಕೆಲ ತಿಂಗಳ ಹಿಂದೆ ನಡೆದಿದ್ದ ಘಟನೆಯು ಇದೀಗ ವಿಡಿಯೊ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಅಪ್ರಾಪ್ತ ಬಾಲಕರನ್ನು ವಿಚಾರಣೆಗೆ ಕರೆತಂದಿದ್ದ ಪಿಎಸ್‌ಐ, ಅವರನ್ನು ಅಧಿಕೃತ ಪೊಲೀಸ್ ಠಾಣೆಯ ಬದಲು ಖಾಸಗಿ ಸ್ಥಳದಲ್ಲಿ ಇರಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಬಾಲಕರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿರುವುದಲ್ಲದೆ, ಅವರೊಂದಿಗೆ ಅಸಭ್ಯ ಹಾಗೂ ಅಮಾನವೀಯ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎನ್ನಲಾಗಿದ್ದು, ಅದರ ವಿಡಿಯೊ ವೈರಲ್ ಆದ ನಂತರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಈ ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯಾದ ಪಿಎಸ್‌ಐ ಪ್ರವೀಣ್ ಅವರನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಕೇತನ್ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದ, ವೈದ್ಯೆ 5 ವರ್ಷ ಅಮಾನತು..!

Related posts

ಪುನರ್ವಸತಿ ಕೇಂದ್ರ ಮಾಲೀಕನ ಕೊಲೆ; ರಿಹ್ಯಾಬ್ ಮಾಲೀಕರಿಗೆ ಶುರುವಾಯ್ತು ಭಯ..!

Kalpana Editor

ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದು, ತಪ್ಪೆಂದು ಕೈಮುಗಿದು ಬೇಡಿಕೊಂಡ ಆರೋಪಿಗಳು

Kalpana Editor

ರಾಮಾಯಣ ರಿಲೀಸ್ ದಿನವೇ ಕನ್ನಡ ಸಿನಿಮಾ ಘೋಷಿಸಿದ ಕರವೇ ನಾರಾಯಣಗೌಡ

kknewskannada1987@gmail.com