20.4 C
ಬೆಂಗಳೂರು
October 12, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಪುನರ್ವಸತಿ ಕೇಂದ್ರ ಮಾಲೀಕನ ಕೊಲೆ; ರಿಹ್ಯಾಬ್ ಮಾಲೀಕರಿಗೆ ಶುರುವಾಯ್ತು ಭಯ..!

ಬೆಂಗಳೂರು : ಚಂದ್ರಲೇಔಟ್‌ನಲ್ಲಿ ರಿಹ್ಯಾಬ್ ಮಾಲೀಕನ ಕೊಲೆ ಪ್ರಕರಣ ಬೆನ್ನಲ್ಲೇ ಇತರೆ ಪುನರ್ವಸತಿ ಕೇಂದ್ರದ ಮಾಲೀಕರು ಭಯ ಬಿದ್ದಿದ್ದಾರೆ. ಇಷ್ಟು ದಿನ ರಿಹ್ಯಾಬ್ ಮಾಲೀಕರ ಕಿರುಕುಳಕ್ಕೆ ಚಟ ಪ್ರಿಯರು ಪ್ರಾಣ ಬಿಡುತ್ತಿದ್ದರು. ಇದೀಗ ಪುನರ್ವಸತಿ ಕೇಂದ್ರದ ಮಾಲೀಕನ ಕೊಲೆ ಬೆನ್ನಲ್ಲೆ ಮಾಲೀಕರ ಎದೆಯಲ್ಲಿ ನಡುಕ ಶುರುವಾಗಿದೆ.

ಈ ಬೆನ್ನಲ್ಲೇ ಇತರ ರಿಹ್ಯಾಬ್‌ಗಳ ಪೂರ್ವಾಪರ ಪರಿಶೀಲಿಸಲು ಸೂಚನೆ ನೀಡಲಾಗಿದೆ. ನ್ಯೂ ಲೈಫ್ ರಿಹ್ಯಾಬ್ ಮಾಲೀಕ ಶಿವಲಿಂಗಯ್ಯ ಕೊಲೆಯ ಹಿಂದೆ ಹಲವು ಅನುಮಾನ ಹುಟ್ಟಿಕೊಂಡಿದೆ. ರಿಹ್ಯಾಬ್‌ನಲ್ಲಿದ್ದ ನಿತಿನ್‌ನ ಬಿಡಿಸಿಕೊಂಡು ಹೋಗಲು ಕೊಲೆ ಮಾಡಿರುವ ಸಾಧ್ಯತೆ ಇದೆ. ಪ್ರೀ ಪ್ಲಾನ್ ಮಾಡಿ ಹಂತಕರು ಮರ್ಡರ್ ಪ್ಲಾನ್ ಮಾಡಿದ್ದು, ಎಂಟರಿಂದ ಒಂಭತ್ತು ಮಂದಿ ಕೊಲೆ ಕೃತ್ಯದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗುತ್ತಿದೆ.

ಕೊಲೆ ಬಳಿಕ ಸ್ಥಳದಿಂದ ಆರೋಪಿಗಳು ಬ್ಯಾಗ್ ಒಂದನ್ನ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಗ್‌ನಲ್ಲಿ ಹಣವಿತ್ತಾ ಅಥವಾ ನಿತಿನ್‌ನ ಬಟ್ಟೆಗಳಿತ್ತಾ ಎಂದು ತನಿಖೆ ಮಾಡಲಾಗುತ್ತಿದೆ. ತುಂಬಾ ದಿನಗಳಿಂದ ಪ್ಲಾನ್ ಮಾಡಿದ್ದ ಬಗ್ಗೆ ಮಾಹಿತಿ ಇದ್ದು, ಮಾಲೀಕನ ಮಗ ಹಾಗೂ ಡ್ರೈವರ್ ಇಲ್ಲದ ಹಿನ್ನೆಲೆ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಚಂದ್ರಲೇಔಟ್ ಪೊಲೀಸರು ಮೂರು ತಂಡ ರಚಿಸಿ ಕೊಲೆಗಾರರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ : ಕೇರಳದಿಂದ ಬಂಡೀಪುರ ತಗಾದೆ; ಸಂಚಾರ ನಿಷೇಧ ತೆರವಿಗೆ ಮಾತುಕತೆ – ಡಿಕೆಶಿ ಸಕರಾತ್ಮಕ ಸ್ಪಂದನೆ..!

Related posts

ಮೈಸೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಗ್ಯಾಂಗ್ ರೇಪ್..!

Kalpana Editor

ಮಲೆನಾಡು ಭಾಗದಲ್ಲಿ ಭಾರೀ ಮಳೆ; ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ..!

Kalpana Editor

ಜಿಬಿಎ ಎಲೆಕ್ಷನ್;‌ ರಾಜ್ಯ ಸರ್ಕಾರಕ್ಕೆ ಮತ್ತೆ ಸಮಯಾವಕಾಶ ನೀಡಿದ ಸುಪ್ರೀಂ

Kalpana Editor