August 1, 2026
kranthikidi.com
ತಾಜಾಸುದ್ದಿರಾಜ್ಯ

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ

ಕನಕಪುರ : “ಈ ಜಿಲ್ಲೆಯಲ್ಲಿ (ಬೆಂಗಳೂರು ದಕ್ಷಿಣ) ಮತ್ತೊಬ್ಬ ಡಿ.ಕೆ. ಶಿವಕುಮಾರ್ ನನ್ನು ಹುಟ್ಟುಹಾಕಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಸಾಧ್ಯವೇ? ಖಂಡಿತಾ ಇಲ್ಲ. ಇದನ್ನು ಬಿಜೆಪಿ ಹಾಗೂ ದಳದ ಕಾರ್ಯಕರ್ತರು ಮನದಟ್ಟು ಮಾಡಿಕೊಳ್ಳಬೇಕು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಭಾನುವಾರ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

“ನೀವು ಯಾರನ್ನು ಒಪ್ಪಿಸದಿದ್ದರೂ ನಿಮ್ಮ ಆತ್ಮಸಾಕ್ಷಿ ಒಪ್ಪಬೇಕು. ಪಿಜಿಆರ್ ಸಿಂಧ್ಯಾ, ವಿಶ್ವನಾಥ್, ನಾರಾಯಣ ಗೌಡರು, ಯು.ಕೆ. ಸ್ವಾಮಿ ಅವರು ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತಿದ್ದರು. ಅವರು ಈಗ ನನ್ನ ಪರವಾಗಿ ನನ್ನ ಜತೆ ನಿಂತಿದ್ದಾರೆ. ಅವರೇನೂ ದಡ್ಡರಾ? ಮತ್ತೊಬ್ಬ ಶಿವಕುಮಾರ್ ಬರುವುದಿಲ್ಲ, ಜನರಿಗೆ ಒಳ್ಳೆಯದಾಗಲಿ ಎಂದು ಅವರು ನನ್ನ ಜತೆ ಕೈ ಜೋಡಿಸಿದ್ದಾರೆ” ಎಂದು ತಿಳಿಸಿದರು.

ವೈಷಮ್ಯ ಮರೆತು ಕ್ಷೇತ್ರದ ಒಳಿತಿಗೆ ಒಟ್ಟಾಗಿ ಕೆಲಸ ಮಾಡೋಣ – “ನಿಮ್ಮಲ್ಲಿ ವೈಷಮ್ಯ ಇದ್ದರೆ ಮರೆಯಿರಿ. ಈ ಊರಿಗೆ ಒಳ್ಳೆಯದಾಗಲಿ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಬೇರೆ ಪಕ್ಷದ ಮುಖಂಡರಿಗೆ ಈ ಮೂಲಕ ತಿಳಿಸುತ್ತೇನೆ” ಎಂದು ತಿಳಿಸಿದರು. ಇದನ್ನೂ ಓದಿ : ಮಾಜಿ ಸಿಎಂ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ..!

ನಾನು ಕೇವಲ ಎರಡು ವರ್ಷ ಮುಖ್ಯಮಂತ್ರಿ ಆಗಿರಬೇಕೇ..? – “ನಮ್ಮ ಬದುಕು ಶಾಶ್ವತವಲ್ಲ. ನಾವು ಬಿಟ್ಟು ಹೋಗುವ ಸಾಕ್ಷಿ ಗುಡ್ಡೆಗಳೇ ಶಾಶ್ವತ. ನಾನು ಕೇವಲ ಎರಡು ವರ್ಷ ಮಾತ್ರ ಸಿಎಂ ಆಗಿರಬೇಕೇ..? ನಿಮ್ಮ ಆಶೀರ್ವಾದದಿಂದ 2028 ರಲ್ಲಿ ಮತ್ತೇ ಗೆಲ್ಲಬೇಕು. ಅದಕ್ಕೆ ನೀವು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಒಳ್ಳೆ ರೀತಿಯಲ್ಲಿ ಅಧಿಕಾರ ನಡೆಸಿ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗೋಣ” ಎಂದು ಕರೆ ನೀಡಿದರು.

Related posts

ಖಮೇನಿ ಅಂತ್ಯಕ್ರಿಯೆಗೂ ಮುನ್ನವೇ ಇರಾನ್‌ ಮೇಲೆ ವಿನಾಶಕಾರಿ ದಾಳಿ; ಇನ್ನೂ ಪರಿಸ್ಥಿತಿ ಕೆಟ್ಟದಾಗಿರಲಿದೆ – ಟ್ರಂಪ್‌

Kalpana Editor

ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ, ಕೇಳಿ ಜೈಲಲ್ಲೇ ಕಣ್ಣೀರಿಟ್ಟ ಮೊಮ್ಮಗ; ಅಜ್ಜಿ ಅಂತ್ಯಕ್ರಿಯೆಗೆ ಬರ್ತಾರಾ ಪ್ರಜ್ವಲ್‌ ರೇವಣ್ಣ..?

Kalpana Editor

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂತೋಷ್‌ ಲಾಡ್‌ ಕಣ್ಣೀರು..!

Kalpana Editor