July 12, 2026
kranthikidi.com
ತಾಜಾಸುದ್ದಿರಾಜ್ಯ

ಇಂದಿನಿಂದ ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌ – ಟೋಲ್ ದರ ಏರಿಕೆ..!

ಬೆಂಗಳೂರು : ಇಂದಿನಿಂದ ನೈಸ್‌ ರಸ್ತೆ, ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌ ಟೋಲ್‌ ದರ ಏರಿಕೆ ಮಾಡಲಾಗಿದೆ. ನಿರ್ವಾಹಣಾ ವೆಚ್ಚ ಸೇರಿದಂತೆ ಹಲವು ದರ ಏರಿಕೆ ಹಿನ್ನೆಲೆಯಲ್ಲಿ ಟೋಲ್‌ ದರವೂ ಏರಿಕೆಯಾಗಿದೆ. ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಸಂಚರಿಸುವ ಕಾರುಗಳ ಟೋಲ್ ಶುಲ್ಕವನ್ನು 65 ರೂ.ನಿಂದ 72 ರೂ.ಗೆ ಹೆಚ್ಚಿಸಲಾಗಿದೆ. ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಟೋಲ್ ಶುಲ್ಕವನ್ನು 70 ರೂ.ನಿಂದ 77 ರೂ.ಗೆ ಹೆಚ್ಚಿಸಲಾಗಿದೆ.

ಪ್ರಯಾಣದ ದೂರವನ್ನು ಅವಲಂಬಿಸಿ, ಪ್ರತ್ಯೇಕ ವಿಭಾಗಗಳಲ್ಲಿ ಕಾರುಗಳಿಗೆ ಟೋಲ್ 3 ರಿಂದ 8 ರೂ.ಗಳಷ್ಟು ಹೆಚ್ಚಾಗಿದೆ. ಬಸ್‌ಗಳ ಟೋಲ್‌ ಕೂಡ ಹೆಚ್ಚಿಸಿರುವುದರಿಂದ, ಬಿಎಂಟಿಸಿ ಹೆಚ್ಚುವರಿ ವೆಚ್ಚವನ್ನು ಪ್ರಯಾಣಿಕರಿಗೆ ಹೊರಿಸುವ ಸಾಧ್ಯತೆ ಇದೆ. ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಟೋಲ್ 65 ರಿಂದ 72 ಕ್ಕೆ ಏರಿಕೆ ಮಾಡಲಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಇದೇ ಮಾರ್ಗದ ಟೋಲ್ ಶುಲ್ಕ 30 ರಿಂದ 33 ರೂ.ಗೆ ಹೆಚ್ಚಿಸಲಾಗಿದೆ. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ 15 ರಿಂದ 17 ಕ್ಕೆ ಏರಿಕೆ ಮಾಡಲಾಗಿದೆ.

ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಬಸ್‌ಗಳ ಟೋಲ್ ಶುಲ್ಕ 195 ರಿಂದ 215 ರೂ. ಕ್ಕೆ ಹೆಚ್ಚಳ ಮಾಡಲಾಗಿದೆ. ಟ್ರಕ್‌ಗಳಿಗೆ, 128 ರಿಂದ 141 ರೂ. ಏರಿಕೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರವೂ ಏರಿಕೆ, ಸಿಂಗಲ್ ಟ್ರಿಪ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಸಂಚರಿಸುವವರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ಮಲ್ಟಿಪಲ್ ಓಡಾಟ ಸವಾರಿಗೆ 5 ರೂ ಏರಿಕೆ ಆಗಿದೆ. ಇದನ್ನೂ ಓದಿ : ಅಪ್ರಾಪ್ತ ಆರೋಪಿಗಳ ಮೇಲೆ ಅಮಾನವೀಯ ಕೃತ್ಯ ಆರೋಪ – PSI ಬಂಧನ..!

Related posts

ಕರ್ನಾಟಕದ 4 ರಾಜ್ಯಸಭೆ, 7 ಪರಿಷತ್ ಸ್ಥಾನಗಳ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ..!

Kalpana Editor

ಆರ್‌ಎಸ್‌ಎಸ್‌ಗೆ ಬಿಗ್​​ ಶಾಕ್​​ ಕೊಟ್ಟ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ

Kalpana Editor

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!

Kalpana Editor