August 25, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರಿನಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ ಆರಂಭ..!

ಬೆಂಗಳೂರು : ಇಂದು ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬೆಂಗಳೂರು ನಗರದಾದ್ಯಂತ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು, ಜಯನಗರದ ಅಶೋಕ ಪಿಲ್ಲರ್ ಸಮೀಪದಿಂದ ಇಂದು (ಬುಧವಾರ) ಬೆಳಗ್ಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಅಂಗಡಿಗಳು ಮತ್ತು ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳಿಂದ ಒತ್ತುವರಿ ಮಾಡಲಾಗಿದ್ದ ಫುಟ್​ಪಾತ್‌ಗಳನ್ನು ತೆರವುಗೊಳಿಸಲಾಗುತ್ತಿದೆ.

ಇಂದು ಬೆಳಗ್ಗೆ 9:30ಕ್ಕೆ ಶುರುವಾದ ಈ ಕಾರ್ಯಾಚರಣೆಗೆ ಜೆಸಿಬಿಗಳನ್ನು ಬಳಸಲಾಗುತ್ತಿದೆ. ಈ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರ ಬೆಂಗಾವಲು ಸಹ ಒದಗಿಸಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 153 ರಲ್ಲಿ, ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ ಈ ತೆರವು ನಡೆಯುತ್ತಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿ, ಭವಿಷ್ಯದಲ್ಲಿ ಮತ್ತೆ ಒತ್ತುವರಿ ಮಾಡದಂತೆ ನಿಗಾ ವಹಿಸಲು ಜಿಬಿಎ ಎಚ್ಚರಿಕೆ ವಹಿಸುತ್ತಿದೆ. ಇದನ್ನೂ ಓದಿ : ಇಂದಿನಿಂದ ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌ – ಟೋಲ್ ದರ ಏರಿಕೆ..!

Related posts

ಶುದ್ಧ ಕುಡಿವ ನೀರು ಘಟಕದ ನಿರ್ವಹಣೆಗೆ ಟೆಂಡರ್ ಕರೆಯಿರಿ – ಸಚಿವ ಈಶ್ವರ ಖಂಡ್ರೆ

Kalpana Editor

ಮೀಸಲಾತಿ ಕುರಿತು ನಟಿ ಶಿಲ್ಪಾ ಶೆಟ್ಟಿ ನಕಲಿ ಹೇಳಿಕೆ ವೈರಲ್: ಖಂಡಿಸಿದ ನಟಿ

Kalpana Editor

ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಆಸ್ಪತ್ರೆಗೆ ದಾಖಲು..!

kknewskannada1987@gmail.com