27.3 C
ಬೆಂಗಳೂರು
October 12, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ರನ್ಯಾ ರಾವ್ ಪ್ರಕರಣ; ಸಿಸಿಟಿವಿ ದೃಶ್ಯ ನೀಡಲು ಹೈಕೋರ್ಟ್ ಸೂಚನೆ..!

ಬೆಂಗಳೂರು : ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಸಲ್ಲಿಕೆಯಾಗಿದ್ದ, ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು.

ರನ್ಯಾ ಪರ ವಕೀಲ ವೈ.ಎಲ್.ಮಹೇಶ್ ವಾದ ಮಂಡಿಸಿ, 2025ರ ಜುಲೈ 15ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸಿಐಎಸ್‌ಎಫ್ ಕಮಾಂಡೆಂಟ್ ಸರಿಯಾಗಿ ಪಾಲಿಸಿಲ್ಲ. ಹೀಗಾಗಿ, 2025ರ ಮಾರ್ಚ್ 3ರ ಸ್ಪಷ್ಟ ಸಿಸಿಟಿವಿ ದೃಶ್ಯಾವಳಿ ನೀಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಸಿಐಎಸ್‌ಎಫ್ ಪರ ಎಎಸ್‌ಜಿ ಅರವಿಂದ್ ಕಾಮತ್ ವಾದಿಸಿ, ಆದೇಶವನ್ನು ಸಿಐಎಸ್‌ಎಫ್ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಅರ್ಜಿದಾರರು ಎರಡು ದಿನಗಳ ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿದರೆ, 2025ರ ಮಾರ್ಚ್ 3ರ ಸಂಜೆ 4.30ರಿಂದ ಮಾರ್ಚ್ 4ರ ಬೆಳಿಗ್ಗೆ 11 ಗಂಟೆಯವರೆಗಿನ ವೀಡಿಯೋ ನೀಡಲಾಗುವುದು ಎಂದು ತಿಳಿಸಿದರು. ಈ ವಾದವನ್ನು ದಾಖಲಿಸಿಕೊಂಡ ಹೈಕೋರ್ಟ್, ಅಗತ್ಯ ಸಿಸಿಟಿವಿ ದೃಶ್ಯಾವಳಿ ಒದಗಿಸುವಂತೆ ಸೂಚಿಸಿ ಅರ್ಜಿಯನ್ನು ಮುಕ್ತಾಯಗೊಳಿಸಿತು. ಇದನ್ನೂ ಓದಿ : ಮನೆಯಲ್ಲೇ ಸುಲಭವಾಗಿ ಮಾಡಿ ಮುಂಬೈ ಸ್ಪೆಷಲ್ ಮಸಾಲ ಸ್ಯಾಂಡ್‌ವಿಚ್

Related posts

ಹಣ ವಂಚನೆ ಪ್ರಕರಣ; ನಟ ಸಲ್ಮಾನ್ ಖಾನ್, ಸಹೋದರಿಗೆ ಕೋರ್ಟ್‌ ಸಮನ್ಸ್ ಜಾರಿ..!

kknewskannada1987@gmail.com

ಪೋಕ್ಸೋ ಪ್ರಕರಣ; ವಚನಾನಂದ ಶ್ರೀಗಳಿಗೆ ನೀಡಿದ್ದ, ನಿರೀಕ್ಷಣಾ ಜಾಮೀನು ರದ್ದು..!

Kalpana Editor

ಬಿಡದಿ ರೈತರ ಹೋರಾಟ: ರೈತರ ಮೇಲಿನ ಎಫ್‌ಐಆರ್ ವಾಪಸ್ ಪಡೆಯಲಿ, ಯೋಜನೆ ಕೈಬಿಡಲಿ – ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

Kalpana Editor