August 26, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? – ಇಲ್ಲಿದೆ ಅಧಿಕೃತ ಪಟ್ಟಿ..!

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಿತರ ಬಂಡಾಯ ನಡುವೆ ಇದೀಗ ಕೊನೆಗೂ ಕಾಂಗ್ರೆಸ್‌ ಸರ್ಕಾರದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಸಾಕಷ್ಟು ವಿಳಂಬದ ನಡುವೆ ಇದೀಗ ಇಂದು ಆ.12ರಂದು (ಬುಧವಾರ) ಮಂತ್ರಿಗಳಿಗ ವಿವಿಧ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಹಾಗಾದ್ರೆ, ಯಾವ ಸಚಿವರಿಗೆ ಯಾವ ಖಾತೆ ಎಂಬ ಪಟ್ಟಿಯಲ್ಲಿ ನೀಡಲಾಗಿದೆ.

ತೀವ್ರ ಕುತೂಹಲ ಮೂಡಿಸಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದೆ. ಎರಡನೇ ಹಂತದ ಸಂಪುಟ ಪುನಾರಚನೆಯಲ್ಲಿ ಡಿಕೆ ಶಿವಕುಮಾರ್ ಕ್ಯಾಬಿನೆಟ್ ಸೇರಿದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.. ಹೌದು….ಆಗಸ್ಟ್ 3ರಂದು ಸಂಪುಟ ಪುನಾರಚನೆ, ಈ ವೇಳೆ ಪ್ರಮಾಣವಚನ ಸ್ವೀಕರಿಸಿದ 19 ನೂತನ ಸಚಿವರಿಗೆ ಖಾತೆ (Portfolios) ನೀಡಬೇಕೆಂದು ಸಿಎಂ ಡಿಕೆ ಶಿವಕುಮಾರ್ ಅವರು ಪಟ್ಟಿಯನ್ನು ಅಂತಿಮಗೊಳಿಸಿದ್ದು, ರಾಜಭವನದ ಅಂಕಿತ ಹಾಗೂ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.

ಖಾತೆ ಹಂಚಿಕೆಗಾಗಿ ಸಚಿವ ಆಕಾಂಕ್ಷಿಗಳು ಹಾಗೂ ಹಿರಿಯ ನಾಯಕರು ನಡೆಸುತ್ತಿದ್ದ ಕಸರತ್ತು, ದೆಹಲಿ ಮಟ್ಟದ ಸಭೆಗಳು ಹಾಗೂ ಮುಖ್ಯಮಂತ್ರಿಗಳ ಜೊತೆಗಿನ ಸುದೀರ್ಘ ಚರ್ಚೆಗಳ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಮುಖ ಇಲಾಖೆಗಳಿಗೆ ಅನುಭವ ಹಾಗೂ ಪ್ರಾದೇಶಿಕ ಸಮತೋಲನವನ್ನು ಆಧರಿಸಿ ನಾಯಕರಿಗೆ ಜವಾಬ್ದಾರಿ ನೀಡಲಾಗಿದ್ದು, ಕೆಲ ಸಚಿವರ ಖಾತೆಗಳನ್ನೂ ಸಹ ಬದಲಾವಣೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ? – ಲಕ್ಷ್ಮಣ ಸವದಿ – ಸಹಕಾರ ಇಲಾಖೆ, ರಾಮಲಿಂಗರೆಡ್ಡಿ – ಅರಣ್ಯ (ಈ ಹಿಂದೆ ಜಲ ಸಂಪನ್ಮೂಲ), ಕೆ.ಹೆಚ್.ಮುನಿಯಪ್ಪ – ಸಮಾಜ ಕಲ್ಯಾಣ ಇಲಾಖೆ, ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ, ಯು.ಟಿ.ಖಾದರ್ – ಆರೋಗ್ಯ ಮತ್ತು ಕಲ್ಯಾಣ ಇಲಾಖೆ, ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ, ಎಚ್‌.ಸಿ.ಬಾಲಕೃಷ್ಣ – ಪೌರಾಡಳಿತ, ಕೆ.ಎಸ್‌.ಬಸವಂತಪ್ಪ – ಮುಜರಾಯಿ, ಮೀನುಗಾರಿಕೆ, ಎನ್‌.ಚಲುವರಾಯಸ್ವಾಮಿ – ಕೃಷಿ, ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಎಸ್‌.ಎಸ್‌.ಮಲ್ಲಿಕಾರ್ಜುನ್‌ – ಗಣಿ ಮತ್ತು ಭೂವಿಜ್ಞಾನ ಇಲಾಖೆ,

ಬಿ.ನಾಗೇಂದ್ರ – ಯೋಜನೆ & ಸಾಂಖ್ಯಿಕ ಇಲಾಖೆ, ಪಿ.ಎಂ.ನರೇಂದ್ರಸ್ವಾಮಿ – ಕೃಷಿ ಇಲಾಖೆ, ಸಿ.ಪುಟ್ಟರಂಗಶೆಟ್ಟಿ – ಪಶು ಸಂಗೋಪನಾ ಇಲಾಖೆ, ರೇಷ್ಮೆ, ಟಿ.ರಘುಮೂರ್ತಿ – ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ, ರಿಜ್ವಾನ್‌ ಅರ್ಷದ್‌ – ಆಹಾರ & ನಾಗರಿಕ ಪೂರೈಕೆ ಇಲಾಖೆ, ರುದ್ರಪ್ಪ ಲಮಾಣಿ – ಸಕ್ಕರೆ ಮತ್ತು ಜವಳಿ, ಶಿವಲಿಂಗೇಗೌಡ – ಅಬಕಾರಿ ಖಾತೆ, ವಿಜಯಾನಂದ ಕಾಶಪ್ಪನವರ್‌ – ಸಣ್ಣ ಕೈಗಾರಿಕೆ, ಜಮೀರ್‌ ಅಹ್ಮದ್‌ ಖಾನ್ – ವಸತಿ, ಅಜಯ್ ಸಿಂಗ್-ಸಣ್ಣ ನೀರಾವರಿ, ಐಟಿ ಬಿಟಿ..,

Related posts

ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್‌ – ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ..!

Kalpana Editor

ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ..!

ಅಮೆರಿಕಾ ಅಮೆರಿಕಾ 2 ಸಿನಿಮಾಕ್ಕೆ ಮನೋಮೂರ್ತಿ ಮ್ಯೂಸಿಕ್..!

kknewskannada1987@gmail.com