27.5 C
ಬೆಂಗಳೂರು
October 9, 2026
kranthikidi.com
ತಾಜಾಸುದ್ದಿರಾಜ್ಯ

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಕೆ..!

ಬೆಂಗಳೂರು : ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪಾದಚಾರಿಗಳಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.

ಇಂದಿನ ಕಾರ್ಯಾಚರಣೆಯ ವಿವರಗಳು (12-08-2026), ಯಲಹಂಕ ವಿಭಾಗ, ವೀರಸಾಗರ ರಸ್ತೆ – 1.00 ಕಿ.ಮೀ. ಹೆಬ್ಬಾಳ ವಿಭಾಗ – ಹೆಬ್ಬಾಳ ಫ್ಲೈಓವರ್‌ನಿಂದ ಸಿ.ಬಿ.ಐ. ರಸ್ತೆವರೆಗೆ – 1.90 ಕಿ.ಮೀ.

ಇಂದಿನ ಕಾರ್ಯಾಚರಣೆಯ ಪ್ರಮುಖಾಂಶಗಳು :

  • 2.90 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ
  • 11 ಅಂಗಡಿಗಳು/ಪೆಟ್ಟಿ ಅಂಗಡಿಗಳು ತೆರವು
  • 7 ತಳ್ಳುವ ಗಾಡಿಗಳು ತೆರವು
  • 26 ಎಸಿ ಶೀಟ್‌ಗಳು/ಕ್ಯಾನೋಪಿಗಳು ತೆರವು
  • 47 ಮೆಟ್ಟಿಲುಗಳು/ರ್ಯಾಂಪ್‌ಗಳು ತೆರವು
  • 18 ಜಾಹೀರಾತು ಕಂಬಗಳು/ನಾಮಫಲಕಗಳು ತೆರವು
  • 9 ತಾತ್ಕಾಲಿಕ/ಶಾಶ್ವತ ಶೆಡ್‌ಗಳು ತೆರವು
  • 38 ಟನ್ ಕಟ್ಟಡ ತ್ಯಾಜ್ಯ/ಮಣ್ಣು ತೆರವು

ಕಾರ್ಯಾಚರಣೆಯಲ್ಲಿ ಬಳಸಳಾದ ಸಂಪನ್ಮೂಲಗಳು :

  • 2 ಜೆಸಿಬಿ
  • 10 ಟ್ರ್ಯಾಕ್ಟರ್
  • 2 ಇತರೆ ಯಂತ್ರ
  • 53 ಸಿಬ್ಬಂದಿಗಳು

ಒಟ್ಟು ಕಾರ್ಯಾಚರಣೆಯ ಪ್ರಗತಿ – 2026ರ ಜುಲೈ 1ರಿಂದ ಆಗಸ್ಟ್ 12ರವರೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಒಟ್ಟು 204.25 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.

ಕಾರ್ಯಾಚರಣೆಯ ಪ್ರಮುಖಾಂಶಗಳು :

  • 204.25 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ
  • 522 ಅಂಗಡಿಗಳು/ಪೆಟ್ಟಿ ಅಂಗಡಿಗಳು ತೆರವು
  • 683 ತಳ್ಳುವ ಗಾಡಿಗಳು ತೆರವು
  • 1,637 ಎಸಿ ಶೀಟ್‌ಗಳು/ಕ್ಯಾನೋಪಿಗಳು ತೆರವು
  • 1,479 ಮೆಟ್ಟಿಲುಗಳು ಹಾಗೂ ರ್ಯಾಂಪ್‌ಗಳು ತೆರವು
  • 1,504 ಜಾಹೀರಾತು ಕಂಬಗಳು ಹಾಗೂ ನಾಮಫಲಕಗಳು ತೆರವು
  • 66 ತಾತ್ಕಾಲಿಕ/ಶಾಶ್ವತ ಶೆಡ್‌ಗಳು ತೆರವು
  • 1,847.20 ಟನ್ ಕಟ್ಟಡ ತ್ಯಾಜ್ಯ ಹಾಗೂ ಮಣ್ಣು ತೆರವು
  • 8 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ

ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದು, ಅತಿಕ್ರಮಣಗಳನ್ನು ಪರಿಣಾಮಕಾರಿಯಾಗಿ ತೆರವುಗೊಳಿಸುವುದು ಹಾಗೂ ನಗರದಲ್ಲಿ ಸುರಕ್ಷಿತ ಮತ್ತು ಸುಗಮ ಪಾದಚಾರಿ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯು ಇಂತಹ ವಿಶೇಷ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ. ಇದನ್ನೂ ಓದಿ : ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? – ಇಲ್ಲಿದೆ ಅಧಿಕೃತ ಪಟ್ಟಿ..!

Related posts

ಕಲ್ಲು ಕ್ವಾರಿ ದುರಂತ; ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ – ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕು – ಆರ್‌.ಅಶೋಕ

Kalpana Editor

ಪೆಟ್ರೋಲ್‌ ಟ್ಯಾಂಕ್‌ಗೆ ನೀರು ಹಾಕಿ ಎಥೆನಾಲ್‌ ವಿರುದ್ಧ ಅಪಪ್ರಚಾರ; ಯೂಟ್ಯೂಬರ್‌ ವಿರುದ್ಧ ಟೊಯೋಟಾ ಎಫ್‌ಐಆರ್‌

Kalpana Editor

ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ; ಮತ್ತೊಂದು ವಿಡಿಯೋ ರಿಲೀಸ್​​ – ಹೆಚ್‌ಡಿ ಕುಮಾರಸ್ವಾಮಿ

Kalpana Editor