August 27, 2026
kranthikidi.com
ತಾಜಾಸುದ್ದಿಸಿನಿಮಾ

ಮೊದಲ ಬಾರಿ ಮಗನ ಫೋಟೋ ಹಂಚಿಕೊಂಡ ನಟ ಡಾಲಿ ಧನಂಜಯ

ನಟ ಡಾಲಿ ಧನಂಜಯ್ ತಂದೆಯಾಗಿ ಭಡ್ತಿ ಪಡೆದಿದ್ದರು. ಧನಂಜಯ್ ಪತ್ನಿ ಡಾ. ಧನ್ಯತಾ ಕಳೆದ ಎರಡು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ್ದ ವೇಳೆ ಮಗುವಿನ ಆಗಮನದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಡಾಲಿ ಧನಂಜಯ್ ಇದೀಗ ಮೊದಲ ಬಾರಿಗೆ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್‌ಅವರ ಮದರ್ ಪ್ರಾಮಿಸ್ ಚಿತ್ರದ ಓ ಬೆಳಕೇ ಹಾಡು ವೈರಲ್ ಆಗಿದೆ. ಇದೇ ಹಾಡನ್ನು ಬ್ಯಾಗ್ರೌಂಡ್‌ನಲ್ಲಿ ಹಾಕಿ ಡಾಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.

ಡಾಲಿ ಪುತ್ರನಿಗೀಗ ಕೇವಲ ಎರಡು ತಿಂಗಳು. ಹೀಗಾಗಿ ಹಸುಗೂಸಿನ ಮುಖ ನೇರವಾಗಿ ತೋರಿಸದ ಡಾಲಿ, ಮುದ್ದು ಮಗನ ಪುಟಾಣಿ ಪಾದಗಳು ಎದೆಗೊತ್ತಿದ ಭಂಗಿಯಲ್ಲಿ ಪುಟ್ಟ ಕಂದನ ಕೈಯಲ್ಲಿ ಎತ್ತಿಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ನಾವ್ಯಾರು ಕೈ ಹಾಕಿಲ್ಲ, ಆದ್ರೆ ಆಯೋಗ ಮಾಡ್ತಿರೋ ಅಭಿಯಾನದಲ್ಲಿ ಭಿನ್ನಾಭಿಪ್ರಾಯಿದೆ – ಡಿಕೆಶಿ

Related posts

ಶೌಚಗುಂಡಿ ಸ್ವಚ್ಛತೆಗೆ ಯಂತ್ರ ಬಳಸಲು ಅಧಿಕಾರಿಗಳಿಗೆ ಸೂಚನೆ; ಈಶ್ವರ ಖಂಡ್ರೆ

Kalpana Editor

ಕಲೇಶಪುರ ಹಾಲಿ ಶಾಸಕ ಹಾಗೂ ಮಾಜಿ ಮಾಜಿ ಶಾಸಕ ನಡುವಿನ ವಾಕ್ಸಮರ..!

Kalpana Editor

ನಮಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು; ಡಿಸಿಎಂ ಬಳಿ ಕಣ್ಣೀರಿಟ್ಟ ಕುಟುಂಬಸ್ಥರು..!

Kalpana Editor