21.5 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿದೇಶ

ಫಾಸ್ಟ್-ಟ್ರ್ಯಾಕ್ ಕೋರ್ಟ್ ಸಾಲದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು; ಮೋದಿಗೆ CJP ತಿರುಗೇಟು..!

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಭರವಸೆಯನ್ನು ಕಾಕ್ರೋಚ್‌ ಜನತಾ ಪಾರ್ಟಿ ತಿರಸ್ಕರಿಸಿದೆ. ಪ್ರಧಾನಿ ಪೋಸ್ಟ್‌ ಪ್ರಕಟವಾದ ಬೆನ್ನಲ್ಲೇ ಸಿಜೆಪಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು ಎಂಬ ತನ್ನ ಪ್ರಮುಖ ಬೇಡಿಕೆಯನ್ನು ಪುನರುಚ್ಚರಿಸಿದೆ.

ಸರ್ಕಾರದ ನಿರ್ಧಾರಗಳಿಗೆ ತೃಪ್ತರಾಗದ ಸಿಜೆಪಿ, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕಟ್ಟುನಿಟ್ಟಾಗಿ ಆಗ್ರಹಿಸಿದೆ. ನೀಟ್ ಪರೀಕ್ಷೆ ಅಕ್ರಮದ ನೈತಿಕ ಜವಾಬ್ದಾರಿಯನ್ನು ಕೇಂದ್ರ ಶಿಕ್ಷಣ ಸಚಿವರು ಹೊರಬೇಕು. ಸಚಿವರನ್ನು ವಜಾಗೊಳಿಸುವವರೆಗೆ ಅಥವಾ ರಾಜೀನಾಮೆ ನೀಡುವವರೆಗೆ ಜಂತರ್ ಮಂತರ್‌ನಲ್ಲಿ ಧರಣಿ ನಿಲ್ಲುವುದಿಲ್ಲ ಎಂದು ಸಿಜೆಪಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರ ಕಾನೂನಾತ್ಮಕ ಕ್ರಮಗಳು ಹಾಗೂ ಕ್ಷಿಪ್ರ ನ್ಯಾಯಾಲಯಗಳ ಮೂಲಕ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೆ, ಪ್ರತಿಭಟನಾ ನಿರತ ಯುವಸಮುದಾಯ ಮತ್ತು ಸಿಜೆಪಿ ಸಚಿವರ ರಾಜೀನಾಮೆ ಹಾಗೂ ರಾಜಕೀಯ ಹೊಣೆಗಾರಿಕೆಗೆ ಪಟ್ಟು ಹಿಡಿದು ಹೋರಾಟವನ್ನು ತೀವ್ರಗೊಳಿಸಿವೆ. ಇದನ್ನೂ ಓದಿ : ಫುಟ್‌ಪಾತ್‌ ಒತ್ತುವರಿ ಕಾರ್ಯಾಚರಣೆ, ನಿಯಮ ಎಲ್ಲರಿಗೂ ಒಂದೇ – ನಂದಿನಿ, ಹಾಪ್‌ಕಾಮ್ಸ್ ಸರದಿ..!

Related posts

ಚೆನ್ನಮ್ಮ ನಿಧನ; ದೇವೇಗೌಡರಿಗೆ‌ ಫೋನ್‌ ಕರೆ ಮಾಡಿ ಪ್ರಧಾನಿ ಮೋದಿ ಸಂತಾಪ..!

Kalpana Editor

ಡ್ರಗ್ಸ್‌ ನೀಡಿ ಮಹಿಳೆ ಮೇಲೆ ಅತ್ಯಾಚಾರ, ಬಲವಂತದ ಮತಾಂತರ – ಇಬ್ಬರು ಬಂಧನ..!

Kalpana Editor

KPSC ಅಕ್ರಮ ಹಾಗೂ ಪಶುವೈದ್ಯಾಧಿಕಾರಿ ನೇಮಕಾತಿ ಭ್ರಷ್ಟಾಚಾರ ಖಂಡಿಸಿ; ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ..!

Kalpana Editor