28.5 C
ಬೆಂಗಳೂರು
July 13, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು 3 ವರ್ಷದ ಮಗನೊಂದಿಗೆ ತಾಯಿ ಆತ್ಮಹತ್ಯೆ

ಬೆಳಗಾವಿ : ತಾಯಿ ಹಾಗೂ ಕರುಳ ಕುಡಿಯೊಂದು ಜೊತೆಯಾಗಿಯೇ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯ ಪೀರನವಾಡಿಯಲ್ಲಿ ನಡೆದಿದೆ. ಗಂಡನ ಮನೆಯವರ ತೀವ್ರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಬೇಸತ್ತು ತಾಯಿ, ತನ್ನ ಮೂರು ವರ್ಷದ ಮಗನೊಂದಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.

ಪ್ರೇಮಾ ನಾಗೇಶ ತಳವಾರ (28) ಹಾಗೂ ಅವರ 3 ವರ್ಷದ ಪುತ್ರ ಭುವನ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರು ಬೆಳಗಾವಿಯ ಪೀರನವಾಡಿ ಪಾಟೀಲ್ ಗಲ್ಲಿಯ ನಿವಾಸಿಗಳಾಗಿದ್ದಾರೆ. ಗಂಡನ ಮನೆಯವರು ಮಾಡಿದ್ದ ಸಾಲವನ್ನು ತೀರಿಸುವಂತೆ ಪ್ರೇಮಾ ಅವರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ.

ಗಂಡ, ಅತ್ತೆ ಸೇರಿದಂತೆ ಕುಟುಂಬದ ಒಟ್ಟು 6 ಸದಸ್ಯರು ಪ್ರೇಮಾ ಅವರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದು, ಇದರಿಂದ ಮನನೊಂದ ಪ್ರೇಮಾ ಮಗನೊಂದಿಗೆ ತಾವೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ಮೃತ ಪ್ರೇಮಾ ಅವರ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಅತ್ತೆ ಸುಶೀಲಾ ತಳವಾರ, ಪತಿ ನಾಗೇಶ ತಳವಾರ, ಮೈದುನ ಪರಶುರಾಮ ತಳವಾರ, ನೆಗ್ಯಾನಿ (ನಾದಿನಿ) ಸಂಗೀತಾ ತಳವಾರ, ಮರೇವ್ವಾ ತಳವಾರ ಹಾಗೂ ಶಾರದಾ ಕಲಕಾಂವಕರ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ-ಮಗನ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ : ಉತ್ತರ ಮತ್ತು ಕಲ್ಯಾಣ ಕರ್ನಾಟಕದ ತೀವ್ರ ಬರಪೀಡಿತ ರೈತರಿಗೆ ಪರಿಹಾರ ನೀಡುವಂತೆ ಬಿ. ವೈ. ವಿಜಯೇಂದ್ರ ಆಗ್ರಹ..!

Related posts

ನಿದ್ರೆ ಚೆನ್ನಾಗಿ ಬರಬೇಕು ಅಂದ್ರೆ ತಪ್ಪದೆ ಈ ಆಹಾರ ಸೇವಿಸಿ…!

Kalpana Editor

ಪೋಷಕರೆದುರೇ ಜಿಪ್ ಲೈನ್ ರೈಡ್ ವೇಳೆ ಬಿದ್ದು ಪ್ರಾಣಬಿಟ್ಟ ಬಾಲಕ..!

Kalpana Editor

ಭಾರೀ ಮಳೆಗೆ ಕುಸಿದ ಮನೆಯ ಗೋಡೆ – 7 ಮಂದಿ ಪಾರು..!

Kalpana Editor