29.4 C
ಬೆಂಗಳೂರು
October 11, 2026
kranthikidi.com
ತಾಜಾಸುದ್ದಿರಾಜ್ಯ

ಆರ್‌ಎಸ್‌ಎಸ್‌ಗೆ ಬಿಗ್​​ ಶಾಕ್​​ ಕೊಟ್ಟ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ

ಕಲಬುರಗಿ : ನಾನು ಗೃಹಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್​​ ಖರ್ಗೆ ಹೇಳಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕರ್ನಾಟಕ ಸರ್ಕಾರದ ನಡುವೆ ಮತ್ತೊಂದು ಹೊಸ ಸಮರ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಆರ್​​ಎಸ್​​ಎಸ್​​ ನೋಂದಣಿ ಬಗ್ಗೆ ಮಾತಾಡುತ್ತಲೇ ಬಂದಿರುವ ಸಚಿವರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋದು ರಾಜಕೀಯ ಜಟಾಪಟಿಗೆ ನಾಂದಿ ಹಾಡಿದೆ.

ಆರ್​​ಎಸ್​​ಎಸ್​​ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಈಗ ಮೋಹನ್​ ಭಾಗವತ್​​ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು. ಹುಡುಕುತ್ತಿದ್ದಾರೆ ಹುಡುಕಿಕೊಂಡು ಬರಲಿ. ಇಷ್ಟು ಕೇಳಿದ್ದಕ್ಕೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದು, ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾನಾ, ಬೆಳ್ಳಗಿದ್ದಾನಾ ಎಲ್ಲಾ ಕೆದಕುತ್ತಿದ್ದಾರೆ.

ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಹಿಂದೆ ಕಲಬುರಗಿಯ ಚಿತ್ತಾಪುರ ಮತ್ತು ಯಾದಗಿರಿಯ ಕೆಂಭಾವಿಯಲ್ಲಿ RSS ಪಥಸಂಚಲ ವಿಚಾರವಾಗಿ ತೀವ್ರ ಜಟಾಪಟಿ ನಡೆದಿತ್ತು. ವಿಚಾರ ಕೋರ್ಟ್​​ ಮೆಟ್ಟಿಲು ಕೂಡ ಏರಿತ್ತು ಎಂಬುದಿಲ್ಲಿ ಗಮನಾರ್ಹ ವಿಷಯವಾಗಿದೆ.

ಆರ್​​ಎಸ್​​ಎಸ್​​ನವರು ಧ್ವಜದ ಮೇಲೆ ದೇಣಿಗೆ ತೆಗೆದುಕೊಳ್ತಾರೆ. ದೇಣಿಗೆ ಪಡೆದುಕೊಳ್ಳೋಕೆ ಇವರ ಗುರು ಯಾರು?ಹಾಗಿದ್ರೆ ಇವರಗೆ ಲೆಕ್ಕ ಕೇಳಬಾರದಾ? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ. ನಾಳೆ ನೀವೂ ಒಂದು ಧ್ವಜದ ಮೇಲೆ ಸಂಘಟನೆ ಮಾಡಿ, ಚಂದಾ ಕಲೆಕ್ಟ್‌ ಮಾಡಿ. ಅವಾಗ ಐಟಿ,ಇಡಿಯವರು ಸುಮ್ನೆ ಕೂರುತ್ತಾರಾ? ಎಲ್ಲರೂ ಹೀಗೇ ಮಾಡಲಿ ಅವಾಗ ನೋಡೋಣ ಎಂದವರು ಕಿಡಿ ಕಾರಿದ್ದಾರೆ. ಇದನ್ನೂ ಓದಿ : ಭಾರೀ ಮಳೆಗೆ ಕುಸಿದ ರಸ್ತೆ, ಅಪ್ಪಳಿಸಿದ ಪ್ರವಾಹ; ಮುಂಬೈ-ಪುಣೆ ಸಂಪರ್ಕ ಕಟ್‌

Related posts

ಮಳೆ ಅಬ್ಬರಕ್ಕೆ ಹಳಿ ಮೇಲೆ ಗುಡ್ಡ ಕುಸಿತ – ರೈಲು ಸಂಚಾರ ಸ್ಥಗಿತ..!

Kalpana Editor

ಶೌಚಗುಂಡಿ ಸ್ವಚ್ಛತೆಗೆ ಯಂತ್ರ ಬಳಸಲು ಅಧಿಕಾರಿಗಳಿಗೆ ಸೂಚನೆ; ಈಶ್ವರ ಖಂಡ್ರೆ

Kalpana Editor

ಶಾಲೆ ಆರಂಭಕ್ಕೆ ಕೌಂಟ್ ಡೌನ್; ಶಿಕ್ಷಣ ಇಲಾಖೆಯಿಂದ ಹೊಸ ಗೈಡ್​ಲೈನ್ಸ್​​​​​​​..!

Kalpana Editor