July 14, 2026
kranthikidi.com
ತಾಜಾಸುದ್ದಿರಾಜ್ಯ

ಬಿಡದಿ ಟೌನ್‌ಶಿಪ್ ಸರ್ವೆಗೆ ಬಂದವರಿಗೆ ಪೊರಕೆ ಪೂಜೆ, ಸ್ಥಳದಲ್ಲಿ ಉದ್ವಿಗ್ನತೆ – ಅಧಿಕಾರಿಗಳ ವಾಹನಕ್ಕೆ ಹಾನಿ, ರೈತರ ಆಕ್ರೋಶ..!

ರಾಮನಗರ : ರಾಮನಗರ ಜಿಲ್ಲೆ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಬೈರಮಂಗಲ ಗ್ರಾಮದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಟೌನ್‌ಶಿಪ್ ಯೋಜನೆಗಾಗಿ ಸರ್ವೆ ನಡೆಸಲು ತೆರಳಿದ್ದ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆದು ರೈತರು ಕಾರುಗಳನ್ನು ಜಖಂಗಳಿಸಿ ಆಕ್ರೋಶ ಹೊರಹಾಕಿದರು.

ರೈತರ ವಾದ ಶೇಕಡ 80ರಷ್ಟು ಭೂ ಮಾಲೀಕರು ಒಪ್ಪಿಗೆ ಪಡೆಯದೆ ಬಲವಂತವಾಗಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಸರ್ವೆಗೆ ಬಂದಿದ್ದ ಅಧಿಕಾರಿಗಳ ವಾಹನದ ಗಾಜನ್ನು ಕೆಲ ಆಕ್ರೋಶಿತ ರೈತರು ಒಡೆದು ಹಾಕಿದ ಘಟನೆ ನಡೆಯಿತು. ತಮ್ಮ ಜಮೀನಿಗೆ ಅಧಿಕಾರಿಗಳು ಬಂದಿರುವುದನ್ನು ವಿರೋಧಿಸಿದ ರೈತರು, ಸರ್ಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯ ಹಿನ್ನೆಲೆಯಲ್ಲಿ ಬೈರಮಂಗಲ ಗ್ರಾಮದ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ : ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ – ವಿಜಯೇಂದ್ರ

Related posts

ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ; ಅಂತಿಮ ದರ್ಶನಕ್ಕೆ ವ್ಯವಸ್ಥೆ..!

Kalpana Editor

ಬಿಡದಿ ಟೌನ್‌ಶಿಪ್; ರೈತರ ಪರ ನಾವಿದ್ದೇವೆ, ಕಾನೂನು ಹೋರಾಟ ಮಾಡೋಣ – ನಿಖಿಲ್ ಕುಮಾರಸ್ವಾಮಿ

Kalpana Editor

ಖಮೇನಿ ಅಂತ್ಯಕ್ರಿಯೆಗೂ ಮುನ್ನವೇ ಇರಾನ್‌ ಮೇಲೆ ವಿನಾಶಕಾರಿ ದಾಳಿ; ಇನ್ನೂ ಪರಿಸ್ಥಿತಿ ಕೆಟ್ಟದಾಗಿರಲಿದೆ – ಟ್ರಂಪ್‌

Kalpana Editor