July 22, 2026
kranthikidi.com
ತಾಜಾಸುದ್ದಿರಾಜ್ಯ

ಉಡುಪಿ ಜಿಲ್ಲೆಯ ಅಂಬಲಪಾಡಿ ದೇವಸ್ಥಾನದಲ್ಲಿ ವಿಶೇಷ ಪುಷ್ಪಾಲಂಕಾರ..!

ಉಡುಪಿ : ಜಿಲ್ಲೆಯ ಪ್ರಸಿದ್ಧ ಅಂಬಲಪಾಡಿ ಶ್ರೀ ಜನಾರ್ಧನ–ಮಹಾಕಾಳಿ ದೇವಸ್ಥಾನದಲ್ಲಿ ಆಷಾಢ ಮಾಸದ ಪ್ರಯುಕ್ತ ವಿಶೇಷ ಪುಷ್ಪಾಲಂಕಾರ ನೆರವೇರಿತು. ಚಿಕ್ಕಬಳ್ಳಾಪುರದ ಭಕ್ತರು ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳಿಂದ ದೇವಾಲಯ ಕಂಗೊಳಿಸಿತು. ದೇವಾಲಯದ ಗೋಪುರ, ಪ್ರವೇಶ ದ್ವಾರ, ಕಂಬಗಳು ಹಾಗೂ ಗರ್ಭಗುಡಿ ಸುತ್ತಮುತ್ತ ಬಣ್ಣಬಣ್ಣದ ಹೂಗಳಿಂದ ಅಲಂಕಾರಗೊಂಡಿತ್ತು.

ಶ್ರೀ ಜನಾರ್ಧನ ಸ್ವಾಮಿ ಹಾಗೂ ಶ್ರೀ ಮಹಾಕಾಳಿಗೆ ವಿಶೇಷ ಪೂಜೆ ನಡೆದಿದ್ದು, ಸಾವಿರಾರು ಭಕ್ತರು ದರ್ಶನ ಪಡೆದು ಪುಷ್ಪಾಲಂಕಾರದ ವೈಭವವನ್ನು ಕಣ್ತುಂಬಿಕೊಂಡರು. ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರದ ಭಕ್ತರು ಭಕ್ತಿಭಾವದಿಂದ ಈ ಸೇವೆ ಸಲ್ಲಿಸುತ್ತಿದ್ದು, ದೇವಿಯ ಅನುಗ್ರಹಕ್ಕೆ ಕೃತಜ್ಞತೆಯ ಸಂಕೇತವಾಗಿ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ : ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ವಿಚಾರಿಸಿದ ಕುಟುಂಬಸ್ಥರು..!

Related posts

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ; ಹೆಚ್‌ಡಿಕೆ

Kalpana Editor

ಸಂಡೂರು ರಾಜವಂಶಸ್ಥ ಕಾರ್ತಿಕೇಯ ಘೋರ್ಪಡೆ ನಿಧನ..!

Kalpana Editor

ಬೆಂಗಳೂರಿನ ಕೆಲವು ಭಾಗದಲ್ಲಿ ಜು. 04, 05 ರಂದು ವಿದ್ಯುತ್‌ ವ್ಯತ್ಯಯ..!

Kalpana Editor