August 1, 2026
kranthikidi.com
ತಾಜಾಸುದ್ದಿರಾಜಕೀಯ

ದುಡಿಯುವ ಕೈಗೆ ಉದ್ಯೋಗ; ಉದ್ಯೋಗ ಖಾತ್ರಿಗೆ ಹಣದ ಕೊರತೆ ಇಲ್ಲ – ಈಶ್ವರ ಖಂಡ್ರೆ

ಬೆಂಗಳೂರು : ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿಗೆ ಹಣದ ಕೊರತೆ ಇಲ್ಲ. ಪ್ರಥಮ ತ್ರೈಮಾಸಿಕಕ್ಕೆ 2900 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ವಿಕಾಸಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಮೊದಲ ತ್ರೈಮಾಸಿಕಕ್ಕೆ 1700 ಕೋಟಿ ರೂ., ರಾಜ್ಯ ಸರ್ಕಾರ 1200 ಕೋಟಿ ಹಣವನ್ನು ನೀಡಿದೆ. ಪ್ರತಿ ತಿಂಗಳು 5 ಲಕ್ಷ ಗ್ರಾಮೀಣರಿಗೆ ಉದ್ಯೋಗ ನೀಡಿ, 1.5 ಕೋಟಿ ಮಾನವದಿನ ಉದ್ಯೋಗ ಸೃಷ್ಟಿ ಮಾಡುವಷ್ಟು ಅನುದಾನವಿದೆ ಎಂದರು.

ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ, ಕೆರೆ ಕಾಲುವೆ ಅಭಿವೃದ್ಧಿ, ಚೆಕ್ ಡ್ಯಾಂ ಇತ್ಯಾದಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಉದ್ಯೋಗ ಕೇಳಿ ಬರುವ ಪ್ರತಿಯೊಬ್ಬರಿಗೂ, ಇರುವಲ್ಲೇ ಉದ್ಯೋಗ ನೀಡುವಂತೆ ಸಿಇಓಗಳಿಗೆ ಮತ್ತು ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ : ಲಾಡ್ಜ್‌ನಲ್ಲಿ ಕ್ರಷರ್ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ..!

Related posts

ದ್ವೇಷ ಭಾಷಣ ಆರೋಪ; ಬಿಜೆಪಿ ಮಾಜಿ ಶಾಸಕ ವಿರುದ್ಧ ಎಫ್‌ಐಆರ್..!

Kalpana Editor

ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧ; ಇರಾನ್‌ ಮೇಲೆ ಅಮೆರಿಕ ವೈಮಾನಿಕ ದಾಳಿ..!

Kalpana Editor

ಮುರಿದು ಬಿತ್ತು ‘ಗಂಗೆ ಬಾರೆ ತುಂಗೆ ಬಾರೆ’ ನಟಿಯ ನಿಶ್ಚಿತಾರ್ಥ

Kalpana Editor