July 24, 2026
kranthikidi.com
ತಾಜಾಸುದ್ದಿರಾಜ್ಯ

ರೈತರು ಯಾವ್ದೇ ಕಾರಣಕ್ಕೂ ಕೃಷಿಗೆ ನೀರು ಬಳಕೆ ಮಾಡಬಾರದು – ಸಿಎಂ ಡಿಕೆಶಿ ವಾರ್ನಿಂಗ್‌

ಬೆಂಗಳೂರು : ರೈತರು ಯಾವುದೇ ಕಾರಣಕ್ಕೂ ಕೃಷಿಗೆ ನೀರು ಬಳಕೆ ಮಾಡಬಾರದು ಅಂತ ಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ. ಮಳೆ ಕೊರತೆ ಸಂಬಂಧ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ರೈತರು ಕುಡಿಯೋದಕ್ಕೆ ಮಾತ್ರ ನೀರು ಉಪಯೋಗ ಮಾಡಬೇಕು‌. ಮಂಡ್ಯ ಇರಬಹುದು ಬೇರೆ ಯಾವುದೇ ಜಿಲ್ಲೆ ಇರಬಹುದು. ನೀರು ಬಿಟ್ಟಿದ್ದೀವಿ ಅಂತ ವ್ಯವಸಾಯಕ್ಕೆ ಯಾರು ಉಪಯೋಗ ಮಾಡಬಾರದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಕುಡಿಯೋದಕ್ಕೆ ಮಾತ್ರ ನಾವು ನೀರು ಕೊಟ್ಟಿದ್ದೇವೆ. ವ್ಯವಸಾಯಕ್ಕೆ ಡ್ಯಾಂ ಪರಿಸ್ಥಿತಿ ನೋಡಿಕೊಂಡು ಮಾಡಬೇಕು. ಬಿತ್ತನೆ ಮಾಡಿ‌, ನಾಟಿ ಹಾಕಿ ನೀರು ಬಿಡಿ ಅಂತ ನನ್ನ ಮೇಲೆ ಒತ್ತಡ ಹಾಕಬೇಡಿ. ಕುಡಿಯೋದಕ್ಕೆ ಮಾತ್ರ ನಾವು ನೀರು ಬಿಟ್ಟಿರೋದು ಅಂತ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಿಂದ ನೀರು ಬೇಕು ಅಂತ ಒತ್ತಡ ಇದೆ. ತುಂಗಭದ್ರಾದೂ ಒತ್ತಡ ಇದೆ. ಡ್ಯಾಮ್ ಭರ್ತಿ ಆದ್ರೆ ನಿಮಗೇ ನೀರನ್ನ ಕೊಡ್ತೀವಿ. ಬೆಳೆಗೆ ಕೊಡಬೇಕಾ ನಿಮಗೆ ಕೊಡ್ತೀವಿ. ದಯವಿಟ್ಟು ಸಹಕಾರ ಮಾಡಿ ಎಂದು ಮನವಿ ಮಾಡಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಕಾವೇರಿ ವಿಷಯ ಚರ್ಚೆಗೆ ತಮಿಳುನಾಡು ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನಾನು ಮಾತಾಡಲ್ಲ. ಅದರ ಜೊತೆಗೆ ಅನೇಕ ವಿಚಾರಗಳು ಇವೆ. ಅದರ ಬಗ್ಗೆಯೂ ಅವರು ಚರ್ಚೆ ಮಾಡಲಿ. ನಾನು ದೆಹಲಿಗೆ ಹೋಗಿ ನಮ್ಮ ಎಂಪಿಗಳಿಗೂ ಮಾತಾಡೋಕೆ‌ ನಾನು ಹೇಳ್ತೀನಿ. ಕಾವೇರಿ ನೀರು ವಿಚಾರ ನಮ್ಮ ಹಕ್ಕು. ಸುಪ್ರೀಂ ಕೋರ್ಟ್ ಕೂಡಾ ಬೋರ್ಡ್ ನಲ್ಲಿ ಈ ವಿಚಾರ ಚರ್ಚೆಗೆ ಅವಕಾಶ ಕೊಟ್ಟಿದೆ. ಅಲ್ಲಿ ನಮ್ಮ ಕೆಲಸ ನಾವು ಮಾಡ್ತೀವಿ.ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಅನುಕೂಲ ಅಲ್ಲ. ತಮಿಳುನಾಡಿಗೆ ಅನುಕೂಲ ಅಂತ ತಿಳಿಸಿದ್ದಾರೆ. ಇದನ್ನೂ ಓದಿ : ಧಾರವಾಡದ ಖಾಸಗಿ ಶಾಲೆಯ ಮಕ್ಕಳಿಗೆ ವಿಚಿತ್ರ ಜ್ವರ…!

Related posts

ಆ.15ರೊಳಗೆ 5927 ಗ್ರಾ.ಪಂ.ಗಳಿಗೆ ಮಹಾತ್ಮಾಗಾಂಧಿ ಹೆಸರು – ಈಶ್ವರ ಖಂಡ್ರೆ

Kalpana Editor

ಮೈಸೂರಿನ ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅವರ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ…!

Kalpana Editor

ಮುಂಬೈನ ಬಾಂದ್ರಾ ಅಪಾರ್ಟ್‌ಮೆಂಟ್‌ ಮಾರಿದ ನಟ ಸಲ್ಮಾನ್‌ ಖಾನ್‌

Kalpana Editor