29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಕುರುಡುಮಲೆ ವಿನಾಯಕ ದೇವಾಲಯಕ್ಕೆ ಬಿಎಸ್‌ವೈ ಕುಟುಂಬ ಭೇಟಿ; ವಿಶೇಷ ಪೂಜೆ ಸಲ್ಲಿಕೆ..!

ಕೋಲಾರ : ಮುಳಬಾಗಿಲು ಕುರುಡುಮಲೆ ವಿನಾಯಕನ ಸನ್ನಿಧಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬ ಸಮೇತ ಆಗಮಿಸಿದ ಅವರು, ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಕೋಲಾರ ಜಿಲ್ಲೆಯ ಪ್ರಸಿದ್ಧ ಕುರುಡುಮಲೆ ದೇವಾಲಯ ಇದಾಗಿದ್ದು, ರಾಜಕೀಯ ನಾಯಕರ ಅಚ್ಚುಮೆಚ್ಚಿನ ದೇವರು, ಜೊತೆಗೆ ವಿಘ್ನ ನಿವಾರಕನಾಗಿರುವ ವಿನಾಯಕನ ಮೊರೆ ಹೋದರು. 10 ಗಂಟೆ ಸುಮಾರಿಗೆ ಮಗಳು ಅಳಿಯ, ಮೊಮ್ಮಕಳೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ವೇಳೆ ಅರ್ಚಕರು ಯಡಿಯೂರಪ್ಪ ಅವರು ರಾಜ್ಯಪಾಲರಾಗಲಿ, ಮಕ್ಕಳು ಸಹ ಉತ್ತಮ ಸ್ಥಾನಕ್ಕೇರಲಿ ಎಂದು ವಿಶೇಷ ಪೂಜೆ ಮಾಡಿದರು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಕ್ಷೇತ್ರದಲ್ಲಿ ನೆಲೆಸಿರುವ ವಿನಾಯಕ ಸಾಕಷ್ಟು ಪವರ್ ಫುಲ್, ಈ ಹಿಂದೆಯೂ ಚುನಾವಣೆ ಸೇರಿ ಹಲವು ಭಾರಿ ಭೇಟಿ ನೀಡಿರುವ ಯಡಿಯೂರಪ್ಪ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೆ ವೇಳೆ ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಸಾಥ್ ನೀಡಿದರು. ಇದನ್ನೂ ಓದಿ : ಹಠಾತ್ ಪ್ರವಾಹಕ್ಕೆ ಜಮ್ಮು-ಕಾಶ್ಮೀರ ತತ್ತರ; 11 ಮಂದಿ ಬಲಿ, 7 ಮಂದಿ ನಾಪತ್ತೆ..!

Related posts

ಚೆನ್ನಮ್ಮ ವಯಸ್ಸು 89; 9 ಅನ್ನೋದು ಗಂಡಾಂತರ – ಬ್ರಹ್ಮಾಂಡ ಗುರೂಜಿ

Kalpana Editor

ಲೋಕೇಶ್ ಕನಗರಾಜ್ ಬಳಿಕ ಮತ್ತೊಬ್ಬ ತಮಿಳು ನಿರ್ದೇಶಕನ ಸಿನಿಮಾನಲ್ಲಿ ಉಪೇಂದ್ರ

Kalpana Editor

ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್‌ – ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ..!

Kalpana Editor