26.4 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಚೆನ್ನಮ್ಮ ವಯಸ್ಸು 89; 9 ಅನ್ನೋದು ಗಂಡಾಂತರ – ಬ್ರಹ್ಮಾಂಡ ಗುರೂಜಿ

ಬೆಂಗಳೂರು : ದೇವೇಗೌಡರ ಪತ್ನಿ ಚೆನ್ನಮ್ಮ ಅವರ ವಯಸ್ಸು 89. ಆದರೆ, 9 ಅನ್ನೋದು ಗಂಡಾಂತರ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಚೆನ್ನಮ್ಮ ಅಂತಿಮ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ದೇವೇಗೌಡರಿಗಿಂತ ಚೆನ್ನಮ್ಮ ಅವರಿಗೆ 5 ವರ್ಷ ಕಡಿಮೆ ವಯಸ್ಸು. 9 ಅನ್ನೋದು ಗಂಡಾಂತರ. 89 ಗಂಡಾಂತರ ಇರುತ್ತದೆ ಎಂದು ಮಾತನಾಡಿದ್ದಾರೆ.

ಚೆನ್ನಮ್ಮ ಅವರ ಮನೆಗೆ ಮಹಾಲಕ್ಷ್ಮಿ. ದೇವೇಗೌಡರನ್ನ ಮೂರು ಬಾರಿ ಬದುಕಿಸಿದವರು ಚೆನ್ನಮ್ಮ. ಇವರ ದಾಂಪತ್ಯ ಜೀವನವನ್ನು ನೋಡಿ ಎಲ್ಲರೂ ಕಲಿಯಬೇಕು. ಚೆನ್ನಮ್ಮ ದೀರ್ಘ ಸುಮಂಗಲಿಯಾಗಿ ಹೋಗಿದ್ದಾರೆ. ಅವರ ತವರು ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಜರಾಜೇಶ್ವರಿ ತಾಯಿಗೆ ವಿಶೇಷ ಭಕ್ತಿ. ಚಿಕ್ಕವರು ಸಂಸ್ಕಾರದ ಬಗ್ಗೆ ಇವರನ್ನು ನೋಡಿ ಕಲಿತುಕೊಳ್ಳಬೇಕು. ಯಾರೇ ದೊಡ್ಡವರು, ಚಿಕ್ಕವರು ಬಂದರೆ ಊಟ ಮಾಡದೇ ಕಳಿಸ್ತಾ ಇರಲಿಲ್ಲ. ಚೆನ್ನಮ್ಮ ಇದ್ದಿದ್ದರಿಂದ ಅವರ ಕುಟುಂಬ ಇದ್ದಿದ್ದು. ಜಗಳ ವ್ಯಾಮೋಹ ಬಿಟ್ಟು ಎಲ್ಲರೂ ಒಟ್ಟಾಗಿ ಇರಲಿ ಎಂದು ಗುರೂಜಿ ಆಶಿಸಿದ್ದಾರೆ. ಇದನ್ನೂ ಓದಿ : ಚೆನ್ನಮ್ಮ ನಿಧನ; ಇಂದು, ನಾಳೆ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ..!

Related posts

ಸಿಎಂ ಡಿಕೆಶಿಗೆ ಆರಂಭದಲ್ಲೇ ಬಿಗ್ ಶಾಕ್! ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ದಿಢೀರ್ ರಾಜೀನಾಮೆ! ಮಾತು ಮುರಿದರಾ ಡಿಕೆಶಿ?

kknewskannada1987@gmail.com

ಐರ್ಲೆಂಡ್, ಇಂಗ್ಲೆಂಡ್ ಟಿ20 ಸರಣಿ; ಸಿರಾಜ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಯ್ಕೆ..!

Kalpana Editor

ಅಸ್ಸಾಂನಲ್ಲಿ ಭೀಕರ ಪ್ರವಾಹ; ಜನರಿಗೆ ಸಂಕಷ್ಟ, ರೈಲು ಸಂಚಾರ ಸ್ಥಗಿತ…!

Kalpana Editor