July 22, 2026
kranthikidi.com
ಅಡುಗೆತಾಜಾಸುದ್ದಿ

ಸಂಜೆಯ ಚಹಾದ ಸವಿಯಲು ಕ್ರಿಸ್ಪಿ ಪನೀರ್ ಫ್ರೈ – ಸ್ನ್ಯಾಕ್ಸ್‌ಗೆ ಬೆಸ್ಟ್‌ ಆಯ್ಕೆ..!

ಸಂಜೆಯ ಚಹಾದ ಸವಿಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ನಾಲಿಗೆಗೆ ಹೊಸ ರುಚಿ ನೀಡಲು ‘ಕ್ರಿಸ್ಪಿ ಪನೀರ್ ಫ್ರೈ’ ಅತ್ಯುತ್ತಮ ಆಯ್ಕೆ. ಹೊರಗೆ ಗರಿಗರಿಯಾದ ಕಾರ್ನ್ ಫ್ಲೇಕ್ಸ್ ಕೋಟಿಂಗ್ ಹಾಗೂ ಒಳಗಡೆ ಮೃದುವಾದ ಮಸಾಲೆಭರಿತ ಪನೀರ್ ಹೊಂದಿರುವ ಈ ಸ್ನ್ಯಾಕ್ಸ್, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ.

ಬೇಕಾಗುವ ಪದಾರ್ಥಗಳು : ಸಂಸ್ಕರಿಸಿದ ಹಿಟ್ಟು, ಪನೀರ್, ಕಾರ್ನ್ ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಕಸೂರಿ ಮೇಥಿ, ಉಪ್ಪು, ನೀರು, ಎಣ್ಣೆ, ಕಾರ್ನ್ ಫ್ಲೇಕ್ಸ್..,

ಮಾಡುವ ವಿಧಾನ : ಒಂದು ಬೌಲ್‌ನಲ್ಲಿ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಎಲ್ಲಾ ಮಸಾಲೆ ಪುಡಿಗಳನ್ನು (ಕೊತ್ತಂಬರಿ, ಜೀರಿಗೆ, ಮೆಣಸಿನಕಾಯಿ ಪುಡಿ, ಗರಂ ಮಸಾಲೆ, ಕಸೂರಿ ಮೇಥಿ, ಉಪ್ಪು) ಹಾಕಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟಿಲ್ಲದಂತೆ ಗಟ್ಟಿಯಾದ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಮತ್ತೊಂದು ಪ್ಲೇಟ್ ಅಥವಾ ಬೌಲ್‌ನಲ್ಲಿ ಕಾರ್ನ್ ಫ್ಲೇಕ್ಸ್ ತೆಗೆದುಕೊಂಡು, ಕೈಯಿಂದಲೇ ಪುಡಿ ಮಾಡಿ ಇಟ್ಟುಕೊಳ್ಳಿ.

ಈಗ ಕತ್ತರಿಸಿದ ಪನೀರ್ ತುಂಡುಗಳನ್ನು ಒಂದೊಂದಾಗಿ ತಗೆದುಕೊಂಡು, ಮೊದಲು ಸಿದ್ಧಪಡಿಸಿದ ಮಸಾಲೆ ಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ. ಹಿಟ್ಟಿನಲ್ಲಿ ಅದ್ದಿದ ಪನೀರ್ ಅನ್ನು ತಕ್ಷಣವೇ ಪುಡಿ ಮಾಡಿದ ಕಾರ್ನ್ ಫ್ಲೇಕ್ಸ್‌ನಲ್ಲಿ ಹೊರಳಿಸಿ. ಪನೀರ್‌ನ ಎಲ್ಲಾ ಬದಿಗಳಿಗೂ ಕಾರ್ನ್ ಫ್ಲೇಕ್ಸ್ ಸರಿಯಾಗಿ ಅಂಟಿಕೊಳ್ಳುವಂತೆ ನೋಡಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಸಾಲೆ ಹಚ್ಚಿದ ಪನೀರ್ ತುಂಡುಗಳನ್ನು ಒಂದೊಂದಾಗಿ ಹಾಕಿ. ಉರಿಯನ್ನು ಹದವಾಗಿಟ್ಟುಕೊಂಡು, ಪನೀರ್ ಲೈಟ್ ಗೋಲ್ಡನ್ ಬ್ರೌನ್ ಮತ್ತು ಕ್ರಿಸ್ಪಿ ಆಗುವವರೆಗೆ ಫ್ರೈ ಮಾಡಿ. ಎಣ್ಣೆಯಿಂದ ತೆಗೆದ ಪನೀರ್ ಫ್ರೈಗಳನ್ನು ಟಿಶ್ಯೂ ಪೇಪರ್ ಮೇಲೆ ಹಾಕಿ. ಬಿಸಿಬಿಸಿಯಾದ ಈ ಕ್ರಿಸ್ಪಿ ಪನೀರ್ ಫ್ರೈ ಅನ್ನು ನಿಮ್ಮ ಸಂಜೆಯ ಬಿಸಿ ಚಹಾದೊಂದಿಗೆ ಅಥವಾ ಗ್ರೀನ್ ಚಟ್ನಿ/ಟೊಮೆಟೊ ಕೆಚಪ್ ಜೊತೆ ಸವಿಯಲು ಅದ್ಭುತ. ಇದನ್ನೂ ಓದಿ : ಯುಜಿಸಿಇಟಿ ಅರ್ಜಿ ಸಲ್ಲಿಕೆಗೆ ಕೆಇಎಯಿಂದ ಹೊಸ ಲಿಂಕ್ ಪ್ರಕಟ..!

Related posts

ಬೈಜುಸ್ ಸಂಸ್ಥಾಪಕ ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ..!

Kalpana Editor

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; ಆರೆಂಜ್ ಅಲರ್ಟ್​..!

Kalpana Editor

ನಟ ಪುನೀತ್ ಒಡನಾಟ ನೆನೆದ ಮಲಯಾಳಂ ಹಿರಿಯ ನಟಿ ಊರ್ವಶಿ

Kalpana Editor