July 23, 2026
kranthikidi.com
ತಾಜಾಸುದ್ದಿರಾಜ್ಯ

ಅಮ್ಮನ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿ, ಅಂತಿಮ ವಿದಾಯ ಹೇಳಿದ ಹೆಚ್​​​​.ಡಿ ಕುಮಾರಸ್ವಾಮಿ

ಹಾಸನ : ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ, ಹೆಚ್.ಡಿ. ಚೆನ್ನಮ್ಮನವರ ಅಂತಿಮ ಸಂಸ್ಕಾರ ಹಾಸನದಲ್ಲಿ ಅಶ್ರುಪೂರಿತ ವಾತಾವರಣದಲ್ಲಿ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸಾಗರದ ಮಧ್ಯೆ, ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರು ತಾಯಿಯ ಮುಖವನ್ನು ನೋಡಿ ಭಾವುಕರಾಗಿ ಮುತ್ತಿಟ್ಟು ಅಂತಿಮ ವಿದಾಯ ಹೇಳಿದರು. ಈ ದೃಶ್ಯ ನೆರೆದಿದ್ದವರ ಕಣ್ಣಂಚಲ್ಲಿ ನೀರು ತರಿಸಿತು.

ಚೆನ್ನಮ್ಮನವರ ಅಂತಿಮ ದರ್ಶನಕ್ಕಾಗಿ ಹಾಸನದ ಅಂತ್ಯಕ್ರಿಯೆ ಸ್ಥಳಕ್ಕೆ ಸಾರ್ವಜನಿಕರು ದಂಡು ದಂಡಾಗಿ ಆಗಮಿಸಿದ್ದರು. ರಾಷ್ಟ್ರೀಯ ಹೆದ್ದಾರಿ 373ರ ಮಾರ್ಗದಲ್ಲಿ ಸಾರ್ವಜನಿಕರು ಸುಗಮವಾಗಿ ಬರಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು ಮತ್ತು ದರ್ಶನಕ್ಕಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅಂತ್ಯಕ್ರಿಯೆ ಸ್ಥಳದಲ್ಲೇ ಸಾರ್ವಜನಿಕ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿತ್ತು.

ಅಂತಿಮ ಸಂಸ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು. ಇದೇ ವೇಳೆ, ನಿರ್ಮಲಾನಂದನಾಥ ಶ್ರೀಗಳು ಮತ್ತು ಶಂಭುನಾಥ ಸ್ವಾಮೀಜಿ ಸೇರಿದಂತೆ ಧಾರ್ಮಿಕ ಮುಖಂಡರು ಸಹ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಗಣ್ಯರಿಗಾಗಿ ಮೀಸಲಾದ ಆಸನಗಳಲ್ಲಿ ಕುಳಿತಿದ್ದ ಹಲವು ನಾಯಕರು, ಚೆನ್ನಮ್ಮನವರ ಅಗಲಿಕೆಗೆ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಜನರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು, ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ : ಗಣಿ ಇಲಾಖೆ ಇತಿಹಾಸದಲ್ಲೇ ಅತಿದೊಡ್ಡ ವರ್ಗಾವಣೆ; ಅಧಿಕಾರಿಗಳಿಗೆ ಟ್ರಾನ್ಸ್​​ಫರ್​​ ಭಾಗ್ಯ..!

Related posts

ಬಾಲಿವುಡ್‌ ಮಂದಿಯ ಮುಖವಾಡ ಬಿಚ್ಚಿಟ್ಟ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್

Kalpana Editor

ರಾಜ್ಯ ರಾಜಕೀಯದಲ್ಲಿ ಮಹಾ ಸಂಚಲನ: ‘ಕುರ್ಚಿ’ ಕದನಕ್ಕೆ ಕ್ಲೈಮ್ಯಾಕ್ಸ್? ದೆಹಲಿಗೆ ದಿಢೀರ್ ಹಾರಲಿರುವ ಸಿಎಂ-ಡಿಸಿಎಂ!

kknewskannada1987@gmail.com

ಬೆನ್ನುತಟ್ಟಿ ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

Kalpana Editor