August 1, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ..!

ಕಲಬುರಗಿ : ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹಳೆ ಆರ್‌ಟಿಓ ರಸ್ತೆಯ ವೈನ್ ಶಾಪ್ ಮುಂಭಾಗ ನಡೆದಿದೆ. ಕಲಬುರಗಿಯ ಆದರ್ಶ ನಗರದ ನಿವಾಸಿ ರವಿ ಗುತ್ತೆದಾರ್ (46) ಬರ್ಬರವಾಗಿ ಕೊಲೆಯಾದ ವ್ಯಕ್ತಿ. ಟೀ ಪಾಯಿಂಟ್ ಮತ್ತು ಸಭೆ ಸಮಾರಂಭಗಳಲ್ಲಿ ರವಿ ಅಡುಗೆ ಮಾಡಿಕೊಂಡಿದ್ದ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಎಣ್ಣೆ ಹಾಕೋದಕ್ಕೆ, ಅಂತಾ ವೈನ್ ಶಾಪ್‌ಗೆ ರವಿ ಬಂದಿದ್ದ. ಎಣ್ಣೆ ಹಾಕಿ ವಾಪಸ್ ಬಂದು ಗಾಡಿಯ ಮೇಲೆ ಕೂರುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಅಟ್ಯಾಕ್‌ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 2021 ರ ರೋಜಾ ಪೊಲೀಸ್ ಠಾಣೆಯ ಕೊಲೆ ಕೇಸ್‌ನಲ್ಲಿ ರವಿ ಗುತ್ತೆದಾರ್ ಆರೋಪಿಯಾಗಿದ್ದ. ಹಳೆಯ ಕೊಲೆ ಪ್ರಕರಣದ ವೈಷಮ್ಯಕ್ಕೆ ರವಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಮಳೆ ಅಬ್ಬರ – ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ..!

Related posts

ಪಿಡಿಓ, ಕಾರ್ಯದರ್ಶಿ, ಲೆಕ್ಕ ಸಹಾಯಕರ ಕೌನ್ಸೆಲಿಂಗ್‌ಗೆ ಈಶ್ವರ ಖಂಡ್ರೆ ಚಾಲನೆ..!

Kalpana Editor

ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್​​ ಈಶ್ವರ್​​ ಕಣ್ಣೀರು..!

Kalpana Editor

KPCC ಪಟ್ಟದ ಮೇಲೆ ಕಣ್ಣಿಟ್ಟ ಸತೀಶ್ ಜಾರಕಿಹೊಳಿ; ಸಿಎಂ, ಡಿಸಿಎಂ ಬೆನ್ನಲ್ಲೇ ದೆಹಲಿಗೆ ದೌಡು..!

Kalpana Editor