August 1, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ದಸರಾ ಉದ್ಘಾಟನೆ ರೇಸ್‌ನಲ್ಲಿ ಕ್ರಿಕೆಟ್ ಸಾಧಕರ ಹೆಸರು; ಸಿಎಂ ನಿರ್ಧಾರವೇ ಅಂತಿಮ – ಯತೀಂದ್ರ

ಮೈಸೂರು : ಈ ಬಾರಿಯ ದಸರಾ ಉದ್ಘಾಟಕರ ಹೆಸರನ್ನು ಸಿಎಂ ಡಿಕೆ ಶಿವಕುಮಾರ್ ಅವರೇ ಆಯ್ಕೆ ಮಾಡಲಿದ್ದು, ಅವರ ನಿರ್ಧಾರವೇ ಅಂತಿಮ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ದಸರಾ ಸಿದ್ಧತಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆ ವಿಚಾರದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರ ನಿರ್ಧಾರ ಅಂತಿಮ. ನಾವೆಲ್ಲರೂ ಉದ್ಘಾಟಕರ ಆಯ್ಕೆಯನ್ನು ಅವರಿಗೆ ಬಿಟ್ಟಿದ್ದೇವೆ. ಶಾಸಕರು ಒಂದಷ್ಟು ಸಲಹೆ ಕೊಟ್ಟಿದ್ದಾರೆ.

ಯಾವುದೇ ಹೆಸರನ್ನು ಆಯ್ಕೆ ಮಾಡಿದ್ರು ಸಿಎಂ ಆಯ್ಕೆ ಮಾಡ್ತಾರೆ. ಇನ್ನೂ ಈ ಬಾರಿ ದಸರಾದಲ್ಲಿ 17 ಉಪಸಮಿತಿಗಳನ್ನು ರಚನೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೆಸರು ಮುಂಚೂಣಿಯಲ್ಲಿದೆ. ಇದೇ ವೇಳೆ ಮೆಸೂರು ದಸರಾದಲ್ಲಿ ಕಂಬಳ ನಡೆಸುವ ವಿಚಾರವಾಗಿ ಮಾತನಾಡಿ, ಕಂಬಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಕಂಬಳ ಫೈನಲ್ ಆದರೆ ಇನ್ನೊಂದು ಉಪಸಮಿತಿ ಆಗುತ್ತದೆ. ಕಂಬಳ ಮಾಡಿದರೆ ಸಾತಗಳ್ಳಿ ಅಲ್ಲೇ ಮಾಡ್ತಾರೆ. ಆದ್ರೆ ಸಿಎಂ ಇನ್ನೂ ಆ ಬಗ್ಗೆ ಫೈನಲ್ ಮಾಡಿಲ್ಲ. ಎಲ್ಲವೂ ಕೂಡ ಅವರ ಕೈನಲ್ಲಿ ಇದೆ ಎಂದು ಹೇಳಿದ್ದಾರೆ.

ದಸರಾ ಪಾಸ್ ವಿಚಾರವಾಗಿ ಕಳೆದ ಬಾರಿ ಗೊಂದಲ ಇತ್ತು. ಈ ಬಾರಿ ಯಾವುದೇ ಗೊಂದಲ ಆಗಬಾರದು ಅಂತ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಈ ಬಾರಿ ಪಾಸ್ ವಿಚಾರದಲ್ಲಿ ಸಮಸ್ಯೆ ಆಗದಂತೆ ಕ್ರಮ ಆಗುತ್ತದೆ. ಆದರೆ ಶಾಸಕರು ಪಾಸ್ ಬೇಡ ಎಂದು ಹೇಳಿದ್ದಾರೆ. ಸಿಎಂಗೆ ಈ ವಿಚಾರವನ್ನು ತಿಳಿಸಿದ್ದೇನೆ. ಆ ಬಗ್ಗೆ ಸೂಕ್ತ ತೀರ್ಮಾನ ಆಗುತ್ತದೆ. ಇನ್ನೂ ಗೋಲ್ಡ್ ಪಾಸ್ ವಿಚಾರವಾಗಿ ಕ್ರಮಕೈಗೊಂಡಿದ್ದು, ಗೋಲ್ಡ್ ಕಾರ್ಡ್ ಜನರಿಗೆ ಮಾತ್ರ ಲಭ್ಯವಾಗಲಿದೆ. ಈ ಬಾರಿ ಗೋಲ್ಡ್ ಆಸನಗಳು ಎಷ್ಟಿರುತ್ತದೆ ಅಷ್ಟೇ ಆಸನಗಳ ವ್ಯವಸ್ಥೆಯಿರಲಿದೆ ಎಂದಿದ್ದಾರೆ.

ಇನ್ನೂ ಆನೆಗಳ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿದೆ. ಯಾವುದೇ ತೊಂದರೆ ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ವರದಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆನೆಗಳ ಪಟ್ಟಿ ಬಿಡುಗಡೆಯಾಗುತ್ತದೆ. ಇನ್ನೂ ಫ್ಲೆಕ್ಸ್ ಮುಕ್ತ ಮಾಡಬೇಕು ಎಂಬ ಸಲಹೆಗಳು ಬಂದಿದೆ. ಫ್ಲೆಕ್ಸ್ ಹಾಕೋದರಿಂದ ಪಾಲಿಕೆಗೆ ಆದಾಯ ಬರುತ್ತದೆ. ಆದರೆ ನಿಗದಿತ ಸ್ಥಳದಲ್ಲಿ ಮಾತ್ರ ಫ್ಲೆಕ್ಸ್‌ಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಫ್ಲೆಕ್ಸ್ ಕಂಟ್ರೋಲ್ ಮಾಡಲು ಬೇಕಾದ ನಿರ್ಧಾರ ಮಾಡುತ್ತೇವೆ. ಮೈಸೂರಿನಲ್ಲಿಯೂ ಫುಟ್‌ಪಾತ್ ಒತ್ತುವರಿ ಶೀಘ್ರವೇ ಆಗುತ್ತದೆ. ಈಗಾಗಲೇ ನಗರದಲ್ಲಿ ಒತ್ತುವರಿ ತೆರವು ಕಾರ್ಯ ಆಗುತ್ತಿದೆ. ದಸರಾ ಒಳಗಾಗಿ ಎಲ್ಲವೂ ಪೂರ್ಣ ಆಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಬಿ.ವೈ. ವಿಜಯೇಂದ್ರ ಹಾಗೂ ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ..!

Related posts

ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ

Kalpana Editor

ಕಮಲಾ ಗಂಗಹನುಮಯ್ಯನವರ ನಿಧನ ನೋವುಂಟು ಮಾಡಿದೆ – ಡಿಸಿಎಂ ಡಾ. ಜಿ. ಪರಮೇಶ್ವರ್‌

Kalpana Editor

ಇಂದು ಸಚಿವರ ಪಟ್ಟಿ ಪ್ರಕಟ; ಬೇರೆ ದಿನ ಕಾಂಗ್ರೆಸ್ ಭವನ ಶಂಕುಸ್ಥಾಪನೆ – ಡಿ.ಕೆ. ಶಿವಕುಮಾರ್

Kalpana Editor