22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ..!

ಚಾಮರಾಜನಗರ : ಚಾಮರಾಜನಗರದ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಏಕೈಕ ಮತ್ತು ಅತ್ಯಂತ ವಿಶೇಷವಾದ ರಥೋತ್ಸವ ಇದಾಗಿದೆ. ಈ ರಥೋತ್ಸವದ ವಿಶೇಷತೆಯೆಂದರೆ ಆಷಾಢ ಮಾಸದಲ್ಲಿ ಬೇರೆ ಬೇರೆಯಾಗಿರುವ ನವ ದಂಪತಿಗಳನ್ನು ಒಂದಾಗಿಸುವ ವಿಶಿಷ್ಟ ಜಾತ್ರೆಯಾಗಿ ಇದು ಗುರುತಿಸಿಕೊಂಡಿದೆ.

ಈ ರಥೋತ್ಸವದಲ್ಲಿ ನವ ದಂಪತಿಗಳು ಭಕ್ತಿಭಾವದಿಂದ ಹಣ್ಣು ಮತ್ತು ದವನವನ್ನು ರಥಕ್ಕೆ ಎಸೆದರೆ ತಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ದೃಢ ನಂಬಿಕೆಯಿದೆ. ಇದೇ ಕಾರಣದಿಂದ ರಾಜ್ಯದ ವಿವಿಧ ಭಾಗಗಳಿಂದ ನೂರಾರು ದಂಪತಿಗಳು ಇಲ್ಲಿಗೆ ಆಗಮಿಸಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ದೇವಾಲಯ ಮತ್ತು ನಗರದ ಪ್ರಮುಖ ರಾಜ ಬೀದಿಗಳು ರಥೋತ್ಸವಕ್ಕಾಗಿ ಸುಂದರವಾಗಿ ಅಲಂಕೃತಗೊಂಡಿವೆ. ಭಕ್ತರು ಮತ್ತು ಪ್ರವಾಸಿಗರನ್ನು ಸ್ವಾಗತಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿಯ ಆಷಾಢ ಮಾಸದ ರಥೋತ್ಸವ ಕೂಡ ಎಂದಿನಂತೆ ಅದ್ದೂರಿಯಾಗಿ ನೆರವೇರಲು ಸಜ್ಜಾಗಿದೆ. ಇದನ್ನೂ ಓದಿ : ಕಾಲುವೆ ನೀರು ನುಗ್ಗಿ ಬೆಳೆಗಳು ಹಾನಿ – ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ..!

Related posts

KPCC ಪಟ್ಟದ ಮೇಲೆ ಕಣ್ಣಿಟ್ಟ ಸತೀಶ್ ಜಾರಕಿಹೊಳಿ; ಸಿಎಂ, ಡಿಸಿಎಂ ಬೆನ್ನಲ್ಲೇ ದೆಹಲಿಗೆ ದೌಡು..!

Kalpana Editor

ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ; ಸಚಿವ ಮಧು ಬಂಗಾರಪ್ಪ ಪ್ರಮುಖ ಘೋಷಣೆ..!

kknewskannada1987@gmail.com

ರಾಜ್ಯದಲ್ಲಿ ವರದಿಯಾಗಿದ್ದ, ಎಬೋಲಾ ವೈರಸ್‌ ಪ್ರಕರಣಗಳು ನೆಗೆಟಿವ್; ದಿನೇಶ್ ಗುಂಡೂರಾವ್ ಸ್ಪಷ್ಟನೆ..!

Kalpana Editor