November 19, 2026
kranthikidi.com
ತಾಜಾಸುದ್ದಿದೇಶಸಿನಿಮಾ

ಸಿನಿಮಾ ಪೈರಸಿ ತಡೆಯಲು ಹೊಸ ಪ್ಲ್ಯಾನ್​​ನೊಂದಿಗೆ ಬಂದ ಕೇಂದ್ರ ಸರ್ಕಾರ..!

ಕನ್ನಡ, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗಕ್ಕೂ ಪೈರಸಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ನಿರ್ಮಾಪಕರು ಮತ್ತು ಆ್ಯಂಟಿ ಪೈರಸಿ ತಂಡಗಳು ಎಷ್ಟೇ ಪ್ರಯತ್ನಿಸಿದರೂ ಸಿನಿಮಾಗಳು ಆನ್​​ಲೈನ್​ ಅಲ್ಲಿ ಲೀಕ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈಗ ಹೊಸ ಅಸ್ತ್ರದೊಂದಿಗೆ ಬರಲು ರೆಡಿ ಆಗಿದೆ. ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ದೊಡ್ಡ ಸೂಚನೆ ನೀಡಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರವು ಪೈರಸಿಗೆ ಸಂಬಂಧಿಸಿದ 7,393 ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಇದರಲ್ಲಿ 1,263 ವೆಬ್‌ಸೈಟ್‌ಗಳು ಹಾಗೂ 4,996 ಟೆಲಿಗ್ರಾಂ ಚಾನಲ್‌ಗಳು ಸೇರಿವೆ. ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರವು ಪ್ರತ್ಯೇಕ ಆ್ಯಂಟಿ-ಪೈರಸಿ ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿದೆ. ಇದರಿಂದಾಗಿ ಕಾನೂನು ಜಾರಿ ಪ್ರಕ್ರಿಯೆ ಇನ್ನುಮುಂದೆ ವೇಗವಾಗಿ ನಡೆಯಲಿದೆ.

ಸರ್ಕಾರದ ಕ್ರಮ ಚಿತ್ರರಂಗಕ್ಕೆ ದೊಡ್ಡ ಆನೆಬಲ ತಂದಿದೆ. ಇತ್ತೀಚೆಗಷ್ಟೇ ಪೊಲೀಸರು ‘ಐಬೊಮ್ಮ’ ರವಿಯನ್ನು ಬಂಧಿಸಿರುವುದು ಇದಕ್ಕೆ ಉತ್ತಮ ಉದಾಹರಣೆ. ದೇಶೀಯ ಪೊಲೀಸ್ ಇಲಾಖೆಯೂ ಈ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡುತ್ತಿದೆ. ಗಲ್ಫ್ ದೇಶಗಳಲ್ಲಿ ಪ್ರದರ್ಶನಗೊಳ್ಳುವ ಪ್ರಿಂಟ್‌ಗಳಿಂದ ಪೈರಸಿ ಆಗುತ್ತಿದೆ ಎಂದು ಕೆಲವು ನಿರ್ಮಾಪಕರು ಅಭಿಪ್ರಾಯ ಹೊರಹಾಕಿದ್ದಾರೆಬ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಸರ್ಕಾರದ ಈ ನಡೆ ಚಿತ್ರರಂಗಕ್ಕೆ ಹೊಸ ಆಶಾಕಿರಣ ಮೂಡಿಸಿದೆ. ಇದನ್ನೂ ಓದಿ : ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ..!

Related posts

ಹೈಕಮಾಂಡ್‌ ಮುಂದೆ ಡಿಸಿಎಂ ಪ್ರಸ್ತಾಪ; ಸಂಪುಟ ವಿಸ್ತರಣೆ ಹೊಸ್ತಿಲಲ್ಲಿ ಡಿಕೆಶಿ ಮಾಸ್ಟರ್‌ಸ್ಟ್ರೋಕ್..!

Kalpana Editor

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ; ಖರ್ಗೆ ಆರೋಪ..!

Kalpana Editor

ಡಿ.ಕೆ.ಶಿವಕುಮಾರ್ ರಾಜ್ಯದ 25ನೇ ಮುಖ್ಯಮಂತ್ರಿಗಳಾಗಿ ಪದಗ್ರಹಣ ಹಿನ್ನೆಲೆ; ಸಾವಿರಾರು ಜನರಿಗೆ ಅನ್ನದಾನ ಹಾಗೂ 50 ಸಾವಿರ ಸಿಹಿ ವಿತರಣೆ..!

Kalpana Editor