25.3 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ತಾಯಿ ಕಳೆದುಕೊಂಡ ಮರಿಯಾನೆ ರೋಧನೆ; ಸೆರೆ ಹಿಡಿಯುವುದೇ ಅರಣ್ಯ ಇಲಾಖೆಗೆ ಸವಾಲು..!

ಮಡಿಕೇರಿ : ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಕಂಗಾಲಾಗಿರುವ 1 ವರ್ಷದ ಮರಿಯಾನೆ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ. ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಆನಂದಪುರ-ಪುಲಿಯೇರಿ ಗ್ರಾಮದ ಕಾಫಿ ತೋಟದಿಂದ ತಪ್ಪಿಸಿಕೊಂಡ ಮರಿಯಾನೆ, ಕಾರ್ಯಾಚರಣೆ ತಂಡವನ್ನ ದಿಕ್ಕುತಪ್ಪಿಸಿ ಸುಮಾರು 10 ಕಿ.ಮೀ. ದೂರದವರೆಗೆ ಸಂಚರಿಸಿದೆ.

ಶನಿವಾರ ಆನಂದಪುರ-ಪುಲಿಯೇರಿ ಗ್ರಾಮದ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ತಾಯಿಯ ಮೃತದೇಹದ ಬಳಿ ನಿಂತು ಮರಿಯಾನೆ ನಿರಂತರವಾಗಿ ಚೀರಾಡುತ್ತಾ ಯಾರನ್ನೂ ಸಮೀಪಕ್ಕೆ ಬಿಡದೆ ಮರಣೋತ್ತರ ಪರೀಕ್ಷೆಗೆ ಅಡ್ಡಿಪಡಿಸಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲೆ ಹಾಕಿ ಮರಿಯಾನೆಯನ್ನು ಸೆರೆಹಿಡಿದು ಸಮೀಪದ ಮನೆಯೊಂದರಲ್ಲಿ ಹಗ್ಗದಿಂದ ಕಟ್ಟಿಹಾಕಿದ್ದರು.

ಆದರೆ ಸ್ಥಳಾಂತರಿಸುವ ವೇಳೆ ಹಗ್ಗ ಕಳಚಿಕೊಂಡು ಮರಿಯಾನೆ ಮೂವರು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಕಾಫಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿತು. ತಿತಿಮತಿ ವಲಯದ ಚೆನ್ನಯ್ಯನಕೋಟೆ, ಮೇಕೂರು-ಹೊಸ್ಕೇರಿ ಸೇರಿದಂತೆ ಹಲವೆಡೆ ಮರಿಯಾನೆಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ತಾಯಿ ಆನೆಗೆ ಹುಡುಕುತ್ತಾ ಅಲೆದಾಡುತ್ತಿರುವ ಮರಿಯಾನೆ ತನ್ನನ್ನ ಹಿಡಿಯಲು ಮುಂದಾಗುವ ಸಿಬ್ಬಂದಿ ಮೇಲೆ ಆಕ್ರಮಣಕಾರಿ ವರ್ತನೆ ತೋರುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ : ಸಿನಿಮಾ ಪೈರಸಿ ತಡೆಯಲು ಹೊಸ ಪ್ಲ್ಯಾನ್​​ನೊಂದಿಗೆ ಬಂದ ಕೇಂದ್ರ ಸರ್ಕಾರ..!

Related posts

ಖ್ಯಾತ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಭೀಕರ ಹಲ್ಲೆ..!

Kalpana Editor

ಪರಿಷತ್‌ ಚುನಾವಣೆ; ಬಿಡದಿಯ ವಂಡರ್‌ ಲಾ ರೆಸಾರ್ಟ್‌ನಲ್ಲಿ ಇಂದು ಸಿಎಲ್‌ಪಿ ಸಭೆ..!

Kalpana Editor

ಕೊಡಗಿನಲ್ಲಿ ಮೊಹಮ್ಮದ್‌ ನಲಪಾಡ್‌ ಎರಡನೇ ವಿವಾಹ ಸಂಭ್ರಮ..!

kknewskannada1987@gmail.com