August 1, 2026
kranthikidi.com
ತಾಜಾಸುದ್ದಿರಾಜ್ಯ

ಮಹಿಳೆ ಜೊತೆ ಅಸಭ್ಯ ವರ್ತನೆ; ಹೆಡ್‌ ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗ ಥಳಿತ..!

ಬೆಂಗಳೂರು : ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಹೆಡ್‌ ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಗಂಗಮ್ಮನ ಗುಡಿ ಸರ್ಕಲ್ ಬಳಿ ನಡೆದಿದೆ. ಸಂಜಯ್ ನಗರ ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆದಿದೆ.

ಜಾಲಹಳ್ಳಿಗೆ ತೆರಳಲು ಅವರು ಬಸ್‌ ಹತ್ತಿದ್ದರು. ಬಸ್‌ನಲ್ಲಿ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆಯಾಗಿದೆ. ಮಹಿಳೆ ಸಂಬಂಧಿಕರಿಗೆ ಕರೆ ಮಾಡಿ, ಗಂಗಮ್ಮನ ಗುಡಿ ಸರ್ಕಲ್ ಬಳಿಗೆ ಕರೆಸಿಕೊಂಡಿದ್ದಳು. ಬಸ್‌ ಅಲ್ಲಿಗೆ ಬರುತ್ತಿದ್ದಂತೆ ಯುವಕರ ಗುಂಪು ಹಲ್ಲೆ ನಡೆಸಿದೆ.

ನಾನು ಪೊಲೀಸ್ ಪೊಲೀಸ್ ಎಂದರೂ ಬಿಡದೆ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಮುಖ ಹಾಗೂ ಮೈಮೇಲೆ ಗಾಯಗಳಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಹಾಗೂ ಪೊಲೀಸ್‌ ಪೇದೆಯಿ ಇಬ್ಬರೂ ದೂರು – ಪ್ರತಿದೂರು ದಾಖಲಿಸಿದ್ದಾರೆ. ಇದನ್ನೂ ಓದಿ : ಕಾಲೇಜಿಗೆ ನುಗ್ಗಿ ಮಗಳಿಗೆ ಚಾಕು ಇರಿದ ಪಾಪಿ ತಂದೆ..!

Related posts

ನೆಗೆಟಿವ್ ಟ್ರೋಲ್ ಮಾಡುವವರ ವಿರುದ್ಧ ‘ಪೆದ್ದಿ’ ಕಾನೂನು ಕ್ರಮ..!

Kalpana Editor

ಕುತೂಹಲಕ್ಕೂ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಖಚಿತ..!

Kalpana Editor

ಒಕ್ಕಲಿಗ ನಾಯಕರ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

Kalpana Editor