ನವದೆಹಲಿ : ರಾಮಮಂದಿರ ದೇಣಿಗೆ ಕಳವು ಪ್ರಕರಣದ ಕುರಿತು ರಾಜ್ಯಸಭೆಯಲ್ಲಿ ತುರ್ತು ಚರ್ಚೆಗೆ ಕಾಂಗ್ರೆಸ್ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲಾ ಆವರು ಇಂದು (ಗುರುವಾರ) ಒತ್ತಾಯಿಸಿದ್ದಾರೆ. ರಾಜ್ಯಸಭಾ ಕಾರ್ಯದರ್ಶಿ-ಜನರಲ್ ಅವರಿಗೆ ನಿಯಮ 267 ಅಡಿಯಲ್ಲಿ ನೋಟಿಸ್ ಸಲ್ಲಿಸಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದ ದೇಣಿಗೆ ದುರ್ಬಳಕೆ, ಹಣಕಾಸು ಅಕ್ರಮ ಹಾಗೂ ದೇಣಿಗೆ ಲೂಟಿ ಆರೋಪಗಳ ಕುರಿತು ತುರ್ತು ಚರ್ಚೆ ನಡೆಸುವಂತೆ ಮನವಿ ಮಾಡಿದ್ದಾರೆ.
ಪೂರ್ವನಿಗದಿತ ಶಾಸನ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಈ ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಿ ಸರ್ಕಾರದ ಉತ್ತರದಾಯಿತ್ವವನ್ನು ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದೇ ವಿಚಾರವಾಗಿ ಲೋಕಸಭೆಯಲ್ಲೂ ಸಂಸದರು ಒತ್ತಾಯಿಸಿದರು. ಇಂದು ಬೆಳಗ್ಗೆ ಲೋಕಸಭೆಯ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪ್ರತಿಪಕ್ಷ ಸದಸ್ಯರು ವಿವಿಧ ವಿಚಾರಗಳನ್ನ ಮುಂದಿಟ್ಟು ಘೋಷಣೆ ಕೂಗಿದರು, ರಾಮ ಮಂದಿರ ದೇಣಿಗೆ ಕಳ್ಳತ ಪ್ರಕರಣವನ್ನು ಚರ್ಚೆ ನಡೆಸುವಂತೆ ಒತ್ತಾಯಿಸಿ ಗದ್ದಲ ಸೃಷ್ಟಿಸಿದರು.
ಪ್ರಶ್ನೋತ್ತರ ಅವಧಿಯನ್ನ ಮುಂದುವರಿಸಲು ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದ್ರೂ ಸಹ, ಪ್ರತಿಪಕ್ಷ ಸದಸ್ಯರ ಗದ್ದಲ ಮುಂದುವರಿದ ಹಿನ್ನೆಲೆ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಜುಲೈ 20 ರಂದು ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ಕ್ರಮ ಕೈಗೊಂಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರರು ಸೇರಿದಂತೆ ಕಾಂಗ್ರೆಸ್ ಸಂಸದರು ಸಂಸತ್ತಿನ ಮಕರ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಎಸ್ಪಿ ಸಂಸದರೂ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ : ಎಸ್‌ಐಆರ್ ಸಮೀಕ್ಷೆ; ಅಧಿಕಾರಿಯ ಮೇಲೆ ಹಲ್ಲೆ – ಡಿಜೆಹಳ್ಳಿಯ ಇಬ್ಬರು ಅರೆಸ್ಟ್..!
