20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಯೋಗೇಶ್ ಗೌಡ ಕೊಲೆ ಪ್ರಕರಣ; ವಿನಯ್ ಕುಲಕರ್ಣಿಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು..!

ಬೆಂಗಳೂರು/ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಕೇಸಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಜೀವಾವಧಿ ಶಿಕ್ಷೆಯನ್ನೂ ಅಮಾನತ್ತಿನಲ್ಲಿಟ್ಟಿದೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಶಿಕ್ಷೆ ಅಮಾನತ್ತಿನಲ್ಲಿ ಇರಿಸಿ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ನೀಡಿ, ವಿನಯ್‌ ಕುಲಕರ್ಣಿ ಸೇರಿ 10 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಇಬ್ಬರ ಶ್ಯೂರಿಟಿ, 5 ಲಕ್ಷ ರೂ. ಬಾಂಡ್‌ಗೆ ಕೋರ್ಟ್‌ಗೆ ಸೂಚಿಸಿದೆ. ಈ ಮೂಲಕ ಶಾಸಕ ಸ್ಥಾನ ಊರ್ಜಿತವಾಗಿದೆ.

ಇದೇ ವೇಳೆ ಕೋರ್ಟ್‌, ಪಾಸ್‌ಪೋರ್ಟ್‌ನ್ನು ಸೆಷನ್ಸ್ ಕೋರ್ಟ್‌ಗೆ ನೀಡುವಂತೆ ತಿಳಿಸಿ, ದೇಶ ತೊರೆಯದಂತೆ ಸೂಚಿಸಿದೆ. ಈ ಸಂದರ್ಭದಲ್ಲಿ ವಿನಯ್ ಕುಲಕರ್ಣಿ ಪರ ವಕೀಲರು, ಧಾರವಾಡಕ್ಕೆ ಪ್ರವೇಶಕ್ಕೆ ಹಾಗೂ ಇಂದೇ ಬಿಡುಗಡಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಚಾಮರಾಜನಗರದಲ್ಲಿ ನಟ/ಸಿಎಂ ವಿಜಯ್ ಅಭಿನಯದ ‘ಜನನಾಯಗನ್’ ಸಿನಿಮಾ ಎತ್ತಂಗಡಿ..!

Related posts

ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ; ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ..!

Kalpana Editor

ಫುಟ್‌ಪಾತ್‌ ಒತ್ತುವರಿ ಕಾರ್ಯಾಚರಣೆ, ನಿಯಮ ಎಲ್ಲರಿಗೂ ಒಂದೇ – ನಂದಿನಿ, ಹಾಪ್‌ಕಾಮ್ಸ್ ಸರದಿ..!

Kalpana Editor

ಆಣೆ-ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ಭೇಟಿ – ಬಿ.ವೈ. ವಿಜಯೇಂದ್ರ

Kalpana Editor