kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಬಿಡದಿ ಟೌನ್‌ಶಿಪ್‌ ವಿರೋಧಿಸಿ, ಜೆಡಿಎಸ್‌ ಬೃಹತ್‌ ಪಾದಯಾತ್ರೆ – ಹೆಚ್‌ಡಿಕೆ ಚಾಲನೆ..!

ಬೆಂಗಳೂರು : ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆಗೆ ಹೊಸ ದಿನಾಂಕ ನಿಗದಿ ಮಾಡಲಾಗಿದೆ. ಹೊಸ ದಿನಾಂಕವನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಚೆನ್ನಮ್ಮ ದೇವೇಗೌಡರ ನಿಧನದಿಂದ ಮುಂದೂಡಿಕೆ ಆಗಿದ್ದ ಪಾದಯಾತ್ರೆಗೆ ಈಗ ಹೊಸ ದಿನಾಂಕ ನಿಗದಿ ಮಾಡಲಾಗಿದೆ. ದೋಸ್ತಿ ಪಕ್ಷ ಬಿಜೆಪಿಯನ್ನ ದೂರವಿಟ್ಟು ಪಾದಯಾತ್ರೆ ಮಾಡಲು ಜೆಡಿಎಸ್ ತೀರ್ಮಾನ ಮಾಡಿದೆ.

ಆಗಸ್ಟ್ 9, 10, 11 ರಂದು ಪಾದಯಾತ್ರೆ ನಡೆಯಲಿದೆ. ಆಗಸ್ಟ್ 9 ರಂದು ಭೈರಮಂಗಲದಿಂದ ಪಾದಯಾತ್ರೆ ಶುರುವಾಗಲಿದ್ದು, ಆಗಸ್ಟ್ 11 ರಂದು ಫ್ರೀಡಂ ಪಾರ್ಕ್ ಗೆ ಪಾದಯಾತ್ರೆ ತಲುಪಲಿದೆ. ಅಂದೇ ಬೃಹತ್ ಸಮಾವೇಶವನ್ನ ಜೆಡಿಎಸ್ ಹಮ್ಮಿಕೊಂಡಿದೆ. ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ನೀಡಲಿದ್ದು, 3 ದಿನಗಳ ಪಾದಯಾತ್ರೆಯಲ್ಲಿ ಒಂದು ದಿನ ಮಾಜಿ ಪ್ರಧಾನಿ ದೇವೇಗೌಡರು ಭಾಗಿಯಾಗಲಿದ್ದಾರೆ. ಪಾದಯಾತ್ರೆ ಮುಗಿದ ಬಳಿಕ ಆಗಸ್ಟ್ 14 ರಂದು ವಿಧಾನಸೌಧ ಚಲೋ ಜೆಡಿಎಸ್ ನಡೆಸಲಿದೆ. ಫ್ರೀಡಂ ಪಾರ್ಕ್ ನಿಂದ ವಿಧಾನಸೌಧಕ್ಕೆ ವಿಧಾನಸೌಧ ಚಲೋ ನಡೆಯಲಿದೆ. ಇದನ್ನೂ ಓದಿ : ಕರ್ನಾಟಕದೊಂದಿಗೆ ನೇರ ಮಾತುಕತೆ ಬೇಡ; ಸಿಎಂ ವಿಜಯ್​​​​ಗೆ ಪಳನಿಸ್ವಾಮಿ ಸಲಹೆ..!

Related posts

ಬಿಡದಿ ಟೌನ್‌ಶಿಪ್; ರೈತರ ಪರ ನಾವಿದ್ದೇವೆ, ಕಾನೂನು ಹೋರಾಟ ಮಾಡೋಣ – ನಿಖಿಲ್ ಕುಮಾರಸ್ವಾಮಿ

Kalpana Editor

ಕೇತನ್ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದ, ವೈದ್ಯೆ 5 ವರ್ಷ ಅಮಾನತು..!

Kalpana Editor

ಫುಟ್‌ಪಾತ್ ತೆರವಿಗೆ ಜನರು ಸಹಕಾರ ಕೊಡಬೇಕು – ಡಿಸಿಎಂ ಜಿ. ಪರಮೇಶ್ವರ್‌

Kalpana Editor