25.3 C
ಬೆಂಗಳೂರು
September 21, 2026
kranthikidi.com
ಕ್ರೀಡೆತಾಜಾಸುದ್ದಿರಾಜ್ಯ

ತಿಮ್ಮಪ್ಪನಿಗೆ ಮುಡಿ ಕೊಟ್ಟ ಹಾರ್ದಿಕ್ ಪಾಂಡ್ಯ – ವಿಶೇಷ ಪೂಜೆ..!

ತಿರುಪತಿ : ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹೀಕಾ ಶರ್ಮಾ ಅವರೊಂದಿಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದಲ್ಲಿ ಹಾರ್ದಿಕ್ ಪಾಂಡ್ಯ ಮುಡಿ ಕೊಟ್ಟಿರುವುದು ಎಲ್ಲರ ಗಮನ ಸೆಳೆಯಿತು. ಇಬ್ಬರೂ ಸಾಂಪ್ರದಾಯಿಕ ಬಿಳಿ ಉಡುಪಿನಲ್ಲಿ ದೇವರ ದರ್ಶನ ಪಡೆದರು. ಬೆಳಗಿನ ಸುಪ್ರಭಾತ ಸೇವೆಯಲ್ಲಿ ಕೂಡ ಭಾಗವಹಿಸಿ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ.

ಹಾರ್ದಿಕ್ ಅವರ ಹೊಸ ಲುಕ್‌ನ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೇಶ ಮುಂಡನ ಮಾಡಿಸಿದರ ಹರಕೆ ಏನಾದರೂ ಇತ್ತಾ? ಎಂಬುವುದನ್ನು ಅವರು ಅಧಿಕೃತವಾಗಿ ಹೇಳಿಲ್ಲ. ಆದರೆ, ತಿರುಮಲದಲ್ಲಿ ಭಕ್ತರು ಹರಕೆಯ ರೂಪದಲ್ಲಿ ಕೂದಲು ಅರ್ಪಿಸುವ ಸಂಪ್ರದಾಯ ಇರುವುದರಿಂದ, ಅದೇ ಕಾರಣ ಇರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ಮೈದಾನಕ್ಕೆ ಮರಳುವ ಸಾಧ್ಯತೆ ಇದೆ. ಐಪಿಎಲ್ 2026 ಬಳಿಕ ಬೆನ್ನು ಮತ್ತು ತೊಡೆಯ ಗಾಯದಿಂದ ಅವರು ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನರ್ವಸತಿ ಪೂರ್ಣಗೊಳಿಸಿರುವುದಾಗಿ ವರದಿಯಾಗಿದೆ. ಗಾಯದ ಕಾರಣ ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯನ್ನು ಹಾರ್ದಿಕ್ ತಪ್ಪಿಸಿಕೊಂಡಿದ್ದರು.

ಐಪಿಎಲ್ 2026 ಬಳಿಕ ಅವರು ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನೂ ಆಡಿಲ್ಲ. ಆದರೆ, ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಇನ್ನೂ ಭಾರತದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವದ ಮೂಲಕ ತಂಡಕ್ಕೆ ದೊಡ್ಡ ಬಲವಾಗಿರುವ ಅವರು, ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಈ ಆಧ್ಯಾತ್ಮಿಕ ಭೇಟಿ ಬಳಿಕ ಹಾರ್ದಿಕ್ ಪಾಂಡ್ಯ ಹೊಸ ಆರಂಭದೊಂದಿಗೆ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಮಿಂಚಲಿದ್ದಾರೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ : ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ; ಸಿಎಂ ಡಿಕೆಶಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ..!

Related posts

ಒತ್ತಡದಿಂದ ಮುಕ್ತರಾಗಲು; ಗಾರ್ಡನಿಂಗ್‌ ಹವ್ಯಾಸ ಆರೋಗ್ಯಕ್ಕೂ ಪ್ರಯೋಜನಕಾರಿ..!

kknewskannada1987@gmail.com

ಒಕ್ಕಲಿಗ ನಾಯಕರ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

Kalpana Editor

ನನಗೆ ಕೊಟ್ರೆ ರಾಜ್ಯದ KAT, KPSC ಯನ್ನೇ ರದ್ದು ಮಾಡ್ತೇನೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

Kalpana Editor