ಮಂಗಳೂರು : ಸಿಎಂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿದ ಬೆನ್ನಲ್ಲೇ ಸವದಿ ಪುತ್ರ ಟೆಂಪಲ್ ರನ್ ಮಾಡಿದ್ದಾರೆ. ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸವದಿ ಪುತ್ರ ಶಶಿಕಾಂತ್ ಸವದಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ತಂದೆಗೆ ಸಚಿವ ಸ್ಥಾನ ಸಿಕ್ಕಿದ ಹಿನ್ನೆಲೆ ಕಟೀಲು ದೇವಿಗೆ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಟೀಲು ತಾಯಿ ಆಶೀರ್ವಾದದಿಂದ ತಂದೆಗೆ ಸಚಿವ ಸ್ಥಾನ ಲಭಿಸಿದೆ. ನಿನ್ನೆ ರಾತ್ರಿಯೇ ವಿಷಯ ಗೊತ್ತಾಯಿತು. ಬುಸಿನೆಸ್ ಕಾರ್ಯ ನಿಮಿತ್ತ ಉಡುಪಿಯಲ್ಲಿದ್ದೆ. ಕಟೀಲು ದೇವಿಯನ್ನು ನಮ್ಮ ಕುಟುಂಬ ಶ್ರದ್ಧೆಯಿಂದ ಆರಾಧಿಸುತ್ತೇವೆ ಎಂದು ತಿಳಿಸಿದರು
ತಂದೆಯವರಿಗೆ ಸಚಿವ ಸ್ಥಾನ ಸಿಗೋದು ನಿರೀಕ್ಷಿತವಾಗಿತ್ತು. ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸ ಇತ್ತು. ತಂದೆಯವರ ಶ್ರಮಕ್ಕೆ ಫಲವಾಗಿ ಸ್ಥಾನ ಲಭ್ಯವಾಗಿದೆ. ನಮ್ಮ ಕುಟುಂಬ ಬೆಂಗಳೂರಿನಲ್ಲಿದೆ. ನಾನು ಕಟೀಲು ತಾಯಿಯ ಸನ್ನಿಧಿಯಲ್ಲಿದ್ದೇನೆ. ಕಟೀಲಿನ ತಾಯಿಯ ಆಶೀರ್ವಾದದಿಂದ ಶುಭ ಸುದ್ದಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ : ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಅಭ್ಯಾಸಗಳನ್ನು ಪಾಲಿಸಿ..!
