22.2 C
ಬೆಂಗಳೂರು
August 7, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ದಿನೇಶ್ ಗುಂಡೂರಾವ್‌ಗೆ ಕೈತಪ್ಪಿದ ಸಚಿವ ಸ್ಥಾನ; ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದಲ್ಲಿ ದಿನೇಶ್ ಗುಂಡೂರಾವ್‌ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಗಾಂಧಿನಗರ ಕಾರ್ಯಕರ್ತರು ಹಾಗೂ ನೂರಾರು ಅಭಿಮಾನಿಗಳು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ದಿನೇಶ್ ಗುಂಡೂರಾವ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

`ಜಸ್ಟೀಸ್ ಫಾರ್ ಲಾಯಲ್ಟಿ’ ಬೋರ್ಡ್‌ನಿಂದ ಬಂದಿರುವ ಗಾಂಧಿನಗರ ಕಾರ್ಯಕರ್ತರು ಅವಕಾಶ ನೀಡದ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ದಿನೇಶ್ ಗುಂಡೂರಾವ್ ಅಭಿಮಾನಿಗಳು ಕಚೇರಿ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ನಾವು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ. ಕೂಡಲೇ ಸಚಿವ ಸ್ಥಾನ ಘೋಷಣೆ ಮಾಡಿ, ಇಲ್ಲ ನಮ್ಮ ರಾಜೀನಾಮೆಯನ್ನು ಪಡೆಯಿರಿ. ಸಚಿವ ಸ್ಥಾನ ಕೊಡಲ್ಲ ಅಂತ ಮೊದಲೇ ಹೇಳಬೇಕಿತ್ತು. ಯಾವ ಕಪ್ಪು ಚುಕ್ಕೆ ಇದೆ. ಪಾರದರ್ಶಕ ಆಡಳಿತ ನೀಡಿದ್ರು ಅನ್ಯಾಯ ಯಾಕೆ? ಎಂದು ಘೋಷಣೆ ಕೂಗಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಪಿಸಿಸಿ ಕಚೇರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.

ಬ್ಯಾರಿಕೇಡ್ ಹಾರಿ ಕಚೇರಿಗೆ ಕಾರ್ಯಕರ್ತರು ನುಗ್ಗಿದ್ದಾರೆ. ಕಚೇರಿಗೆ ಏಕಾಏಕಿ ಕಾರ್ಯಕರ್ತರು ನುಗ್ಗಿದ ಪರಿಣಾಮ ತಳ್ಳಾಟ ನಡೆದಿದೆ. ಇನ್ನು ಅರ್ಚಕರ ಸಂಘದವರೂ ದಿನೇಶ್ ಗುಂಡೂರಾವ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಬಾರಿ ಒಂದೇ ಒಂದು ಸ್ಥಾನ ಬ್ರಾಹ್ಮಣ ಸಮುದಾಯಕ್ಕೆ ಕೊಟ್ಟಿಲ್ಲ. ಯಾರಾದ್ರು ಒಬ್ಬ ಶಾಸಕರಿಗಾದರೂ ಅವಕಾಶ ಕೊಡಬೇಕಿತ್ತು. ಇದರಿಂದ ಸಮುದಾಯಕ್ಕೆ ಬೇಸರ ಆಗಿದೆ. ಇದೇ ಕಾರಣಕ್ಕೆ ಇಂದು ಕೆಪಿಸಿಸಿ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಮನವಿ ಸಲ್ಲಿಸಲು ಬಂದಿದ್ದೇವೆ.

ʼಬೇಕೆ ಬೇಕು ನ್ಯಾಯ ಬೇಕು, ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡಿʼ ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಎಂ.ಕೃಷ್ಣಪ್ಪ ಅಭಿಮಾನಿಗಳು ಕೂಡ ಕೆಪಿಸಿಸಿ ಮುಂಭಾಗ ಜಮಾಯಿಸಿದ್ದಾರೆ. ಕೆಲ ವಿಜಯನಗರ ಭಾಗದ ಬೆಂಬಲಿಗರು ಹಾಗೂ ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಬೆಂಬಲಿಗರು ಆಗಮಿಸಿ ಧರಣಿ ನಡೆಸುತ್ತಿದ್ದಾರೆ. ಬ್ಲಾಕ್ ಅಧ್ಯಕ್ಷರು ಕಪ್ಪು ಪಟ್ಟಿ ಧರಿಸಿ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಕಾರ್ಯಕರ್ತರು ಸರಣಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ : ನಟಿ ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ; ನಟ ಉದಯನಿಧಿ ಸ್ಟಾಲಿನ್ ಬಂಧನ..!

Related posts

ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ..!

Kalpana Editor

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲಿಟ್‌ ಶರ್ಮಿಳಾ

Kalpana Editor

ನಿದ್ರೆ ಚೆನ್ನಾಗಿ ಬರಬೇಕು ಅಂದ್ರೆ ತಪ್ಪದೆ ಈ ಆಹಾರ ಸೇವಿಸಿ…!

Kalpana Editor