ಚೆನ್ನೈ : ನಟಿ ತ್ರಿಷಾ ವಿರುದ್ಧ ಡಬಲ್ ಮಿನಿಂಗ್ ಹೇಳಿಕೆ ವಿವಾದದಲ್ಲಿ ಅರೆಸ್ಟ್ ಆಗಿದ್ದ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನ ಬಿಡುಗಡೆ ಮಾಡಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಈ ಬೆನ್ನಲ್ಲೇ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕಾವೇರಿ ವಿಚಾರದಿಂದ ಜನರ ಗಮನವನ್ನ ಬೇರೆಡೆ ಸೆಳೆಯುವ ಉದ್ದೇಶದಿಂದಲೇ ಉದಯನಿಧಿ ಅವರನ್ನ ಬಂಧಿಸಲಾಗಿದೆ. ಅಲ್ಲದೇ, ಹೈಕೋರ್ಟ್ ನೀಡಿದ ಆದೇಶವು ಸರ್ಕಾರದ ʻಫ್ಯಾಸಿಸ್ಟ್ ಧೋರಣೆಗೆʼ ದೊಡ್ಡ ಹಿನ್ನಡೆಯಾಗಿದೆ ಎಂದು ಅವರು ಟೀಕಿಸಿದ್ದಾರೆ. ʻದುರಹಂಕಾರವೇ ವಿನಾಶಕ್ಕೆ ದಾರಿ. ನಿರಂತರ ಅಹಂಕಾರವು ವಿನಾಶವನ್ನ ಇನ್ನಷ್ಟು ವೇಗಗೊಳಿಸುತ್ತದೆ.
ಕಾವೇರಿ ನೀರಿನ ಹಕ್ಕುಗಳನ್ನು ತಮಿಳುನಾಡಿಗೆ ಸಮರ್ಪಕವಾಗಿ ದೊರಕಿಸಿಕೊಡುವಲ್ಲಿ ಹಾಗೂ ಮೇಕೆದಾಟು ಅಣೆಕಟ್ಟು ಯೋಜನೆಯನ್ನ ತಡೆಯುವಲ್ಲಿ ಸರ್ಕಾರ ತೋರಿದ ನಿರ್ಲಕ್ಷ್ಯ ಮತ್ತು ಅಹಂಕಾರವನ್ನ ಖಂಡಿಸಲು ತಂಜಾವೂರಿನಲ್ಲಿ ಡಿಎಂಕೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಕಾವೇರಿ ವಿಚಾರದಲ್ಲಿ ಸರ್ಕಾರದ ವೈಫಲ್ಯವನ್ನ ತೀವ್ರವಾಗಿ ಟೀಕಿಸಿದ್ದರು. ಕಾವೇರಿ ನೀರನ್ನ ಸಮರ್ಪಕವಾಗಿ ಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ, ಮೇಕೆದಾಟು ಅಣೆಕಟ್ಟು ಯೋಜನೆಯನ್ನ ತಡೆಯಲು ಕ್ರಮ ಕೈಗೊಂಡಿಲ್ಲ ಹಾಗೂ ರೈತರ ಸಂಕಷ್ಟಗಳನ್ನು ಕಡೆಗಣಿಸಿ ಸಿನಿಮಾಗೆ ಸಂಬಂಧಿಸಿದ ವಿವಾದಗಳತ್ತ ಮಾತ್ರ ಗಮನ ಹರಿಸುತ್ತಿದೆ ಎಂದು ಉದಯನಿಧಿ ಆರೋಪಿಸಿದ್ದಾಗಿ ಸ್ಟಾಲಿನ್ ಉಲ್ಲೇಖಿಸಿದರು. ಈ ಟೀಕೆಗಳಿಗೆ ಸರ್ಕಾರ ಉತ್ತರ ನೀಡಲು ಸಾಧ್ಯವಾಗದೆ.
ಜನರ ಗಮನವನ್ನ ಬೇರೆಡೆ ಸೆಳೆಯುವ ಉದ್ದೇಶದಿಂದ ಉದಯನಿಧಿ ಅವರನ್ನ ಬಂಧಿಸಿದೆ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಪೊಲೀಸರು ಉದಯನಿಧಿ ಸ್ಟಾಲಿನ್ ಅವರ ನಿವಾಸಕ್ಕೆ ತೆರಳಿ, ಪ್ರತಿಪಕ್ಷ ನಾಯಕ ಎಂಬ ಹುದ್ದೆಯಲ್ಲಿದ್ದರೂ ಅವರನ್ನ ಬಂಧಿಸಿ ತಂಜಾವೂರಿಗೆ ಕರೆದೊಯ್ದರು ಎಂದು ಸ್ಟಾಲಿನ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ : 100% ಪರಿಶುದ್ಧ ಇರುವ ಡಾಬರ್ ಕಂಪನಿಗೆ ನಿರ್ಬಂಧ ಹೇರಿದ FSSAI
