25.3 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿದೇಶ

100% ಪರಿಶುದ್ಧ ಇರುವ ಡಾಬರ್ ಕಂಪನಿಗೆ ನಿರ್ಬಂಧ ಹೇರಿದ FSSAI

ನವದೆಹಲಿ : 100% ಪರಿಶುದ್ಧ ಎಂದು ಜೇನು, ದನದ ತುಪ್ಪ, ತೆಂಗಿನ ಎಣ್ಣೆ ಮಾರಾಟಕ್ಕೆ ಡಾಬರ್ ಕಂಪನಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನಿರ್ಬಂಧ ಹೇರಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಪ್ರಮುಖ ಗ್ರಾಹಕ ಉತ್ಪನ್ನಗಳ ತಯಾರಕ ಸಂಸ್ಥೆಯಾದ ಡಾಬರ್ ಇಂಡಿಯಾ ಕಂಪನಿಗೆ ಎಚ್ಚರಿಕೆ ನೀಡಿದೆ. ಉತ್ಪನ್ನಗಳ ಮೇಲೆ 100% ಶುದ್ಧ ಎಂದು ಮಾರಾಟ ಮಾಡುವುದು ಹಾಗೂ ಇಂತಹ ಜಾಹೀರಾತು ಮತ್ತು ಲೇಬಲ್‌ಗಳನ್ನು ಬಳಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿ, ಮಾರಾಟಕ್ಕೆ ನಿಷೇಧ ಹೇರಿದೆ.

ಡಾಬರ್ ಇಂಡಿಯಾ ಕಂಪನಿಯು ತನ್ನ ಉತ್ಪನ್ನಗಳಾದ ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಹಸುವಿನ ತುಪ್ಪ, ತೆಂಗಿನ ನೀರು, ತೆಂಗಿನ ಹಾಲು ಮತ್ತು ಇತರ ಸಮಾನ ಉತ್ಪನ್ನಗಳ ಮೇಲೆ 100 ಪ್ರತಿಶತ ನ್ಯಾಚುರಲ್’,100 ಪ್ರತಿಶತ ಪ್ಯೂರ್’, 100 ಪ್ರತಿಶತ ಪ್ಯೂರಿಟಿ ಗ್ಯಾರಂಟೀಡ್’,100 ಪ್ರತಿಶತ ಆರ್ಗ್ಯಾನಿಕ್’ ಮತ್ತು `100 ಪ್ರತಿಶತ ಟೆಂಡರ್ ಕೋಕೊನಟ್ ವಾಟರ್’ ಎಂಬ ದಾರಿ ತಪ್ಪಿಸುವ ಹಕ್ಕುಗಳನ್ನು ಬಳಕೆ ಮಾಡಿರುವುದು ಕಂಡುಬಂದಿದೆ.

ಡಾಬರ್ ಇಂಡಿಯಾ ಕಂಪನಿಯು ತನ್ನ ಉತ್ಪನ್ನಗಳ ಮೇಲೆ 100%’ ಕ್ಲೇಮ್ ಬಳಸಿರುವುದು 2018ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳ ಉಲ್ಲಂಘನೆಯಾಗಿದೆ. ಅಂತಹ ಸಂಪೂರ್ಣ ಹಕ್ಕುಗಳು ಅಸ್ಪಷ್ಟವಾಗಿರುತ್ತವೆ. ಅವುಗಳನ್ನು ಪ್ರಾಯೋಗಿಕವಾಗಿ ಅಥವಾ ವೈಜ್ಞಾನಿಕವಾಗಿ ಪರಿಶೀಲಿಸುವುದು ಅಸಾಧ್ಯವಾಗಿದೆ. ಇವು ನೇರವಾಗಿ ಗ್ರಾಹಕರನ್ನು ತಪ್ಪುದಾರಿಗೆಳೆಯುವ ಸಂಭವವಿರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಜೇನುತುಪ್ಪ, ಹಸುವಿನ ತುಪ್ಪ ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ100%’ ಎಂದು ಹಾಗೂ ದಾರಿ ತಪ್ಪಿಸುವ ಜಾಹೀರಾತು ಮತ್ತು ಲೇಬಲ್‌ಗಳನ್ನು ಬಳಸಿ ಮಾರಾಟ ಮಾಡುವುದಕ್ಕೆ ನಿರ್ಬಂಧಿಸಿದೆ.

ಡಾಬರ್ ಹಿಮಾಲಯನ್ ಆರ್ಗ್ಯಾನಿಕ್ ಆಪಲ್ ಸೈಡರ್ ವಿನೆಗರ್ ಮತ್ತು ಡಾಬರ್ ಆರ್ಗ್ಯಾನಿಕ್ ಜೇನುತುಪ್ಪದ ಉತ್ಪನ್ನಗಳು FSSAIನ ಸಾವಯವ ಅನುಮೋದನೆ ಇಲ್ಲದೇ ಜೈವಿಕ ಭಾರತ್ ಲೋಗೋವನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಇದು FSS ನಿಯಮಗಳು, 2017ರ ಉಲ್ಲಂಘನೆಯಾಗಿದೆ ಎಂದಿದೆ.

ನಿರ್ದಿಷ್ಟವಾಗಿ ಡಾಬರ್ ಹೋಮ್‌ಮೇಡ್ ಕೋಕೊನಟ್ ಮಿಲ್ಕ್’ ಉತ್ಪನ್ನವನ್ನು100 ಪ್ರತಿಶತ ಪ್ಯೂರಿಟಿ’ ಎಂದು ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ FSSAI ಈ ಹಿಂದೆ ನೋಟಿಸ್ ನೀಡಿದ್ದರೂ, ಡಾಬರ್ ಕಂಪನಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆ, ನಿಯಂತ್ರಕರು ಈ ಆಹಾರ ಉತ್ಪನ್ನಗಳ ಮಾರಾಟವನ್ನು ತಕ್ಷಣವೇ ನಿಷೇಧಿಸುವಂತೆ ಸೂಚಿಸಿದ್ದು, 15 ದಿನಗಳ ಒಳಗೆ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ. ನಾವು FSSAI ನೋಟಿಸ್ ಅನ್ನು ಸ್ವೀಕರಿಸಿದ್ದೇವೆ. ನಮ್ಮ ವೆಬ್‌ಸೈಟ್‌ನಲ್ಲಿ ನೋಟಿಸ್‌ನಲ್ಲಿ ಉಲ್ಲೇಖಿಸಲಾದ ವಿಷಯವನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ : ಶಾಸಕ ಸುಬ್ಬಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ – ನಾಳೆ ಬಾಗೇಪಲ್ಲಿ ಸಂಪೂರ್ಣ ಬಂದ್‌ಗೆ ಕರೆ..!

Related posts

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ; ಕೇಂದ್ರದ ನಡೆ ಖಂಡಿಸಿ, ಮೋದಿಗೆ ಪರಮೇಶ್ವರ್‌ ಪತ್ರ..!

Kalpana Editor

ಕಲ್ಲು ಕ್ವಾರಿ ದುರಂತ; ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ – ಸಿಎಂ ಡಿ ಕೆ ಶಿವಕುಮಾರ್

Kalpana Editor

ಕರಾವಳಿಯಲ್ಲಿ ಭಾರೀ ಮಳೆ; ಯಾಣ ಪ್ರವಾಸಿ ತಾಣಕ್ಕೆ ನಿರ್ಬಂಧ..!

Kalpana Editor